Home / ಕವನ / ಅನುವಾದ / ನಿರಾಶೆ

ನಿರಾಶೆ

ಬಿಸಿಲೋ ಬೆಳೆಯಿತು; ಬಾನೋ ತಿಳಿಯಿತು;
ಸೆಳೆಸೆಳೆದೆಲೆಗಳು ಕುಣಿಯುವುವು;
ಮುಸುಕಿದ ಮಂಜನು ಕಳೆಯುತ ಗಿರಿಗಳು
ಬೆಳಗುವ ಹಗಲನು ಹೊದೆಯುವುವು;
ಬಿರಿಯದ ಮೊಗ್ಗುಗಳೆಸಳನು ತೆರೆಯುತ;
ಸುಳಿವುದು ತಂಪಿನ ನೆಲದುಸಿರು;
ಬೆರೆದೊಂದೇ ಆನಂದದ ದನಿವೊಲು,
ಹೊಳಲಲಿ, ಬನದಲಿ, ಬಯಲಿನಲಿ,
ಹೊರಳುವ ಕಡಲಲಿ ಹೊಮ್ಮುವ ಮೊರೆತಗಳಿಂಪಾಗೆಸೆಯುವುವು.
ಕಣ್ಣೆದಿರಾಳದ ತುಳಿಯದ ತಳದೊಳ
ಗುರುಳುವ ಕಳೆಗಳು ತೋರುವುವು.
ನುಣ್ಣಗೆ ಬೆಳಕನು ಕರಗಿಸಿ, ಅರಿಲಾ
ಗೆರೆದವೊಲಲೆಗಳು ತೋರುವುವು.
ಕುಳಿತಿಹೆನೊಬ್ಬನೆ ಮರಳಲಿ; ಸುತ್ತಲು
ಮೆರೆವುದು ಮಿಂಚುವ ಕಡಲೊಡಲು.
ಅಳತೆಯ ತಾಳಕೆ ತಲೆ ತೂಗಾಡುವ
ತೆರೆಯಿಂದೇಳುವುದೊಂದುಲುಹು.
ತಿಳಿದೆದೆಗೆ ಹೊಂದುವುದೊಂದಿಹುದೇ ಏನಿನಿದೋ ಈಗ!
ನನಗಕಟಾ! ಉತ್ಸಾಹವೆ, ಆಶೆಯೆ,
ಮೊದಲಾರೋಗ್ಯವೆ, ನೆಮ್ಮದಿಯೆ?
ಮನಸಿನ ಶಾಂತಿಯೆ, ಪದವಿಯೆ, ಕೀರ್ತಿಯೆ,
ಮುದಿಯಾಗಳಿಯದ ಸವಿಯೋಲವೆ?
ಧನವನು ಮೀರಿದ ದೈವಜ್ಞಾನದೊ
ಳೊದಗುವ ತೃಪ್ತಿಯೆ, ಮಹಿಮೆಗಳೇ?
ಜನರೆತ್ತೆತ್ತಲು ಹೊತ್ತೀ ಸಿರಿಗಳ
ಬದುಕರೆ ಬಾಳತಿಹಿತವೆನುತ?
ನನಗೋ ಆ ಹೊಂಬಟ್ಟಲೊಳೆಲ್ಲಾ ವಿಷವೇ ತುಂಬಿಹುದೇ!
ಈಗ ನಿರಾಶೆಯ ಇಳಿತರವಾಗಿದೆ,
ತೆರೆಗಳ ಗಾಳಿಯ ಹದ ತೋರಿ,
ಹಾಗೆಯೆ ಸೊರಗಿದ ಮಗುವಂತತ್ತ
ತ್ತೊರಗುವೆ, ಜನ್ಮದ ಹೊರೆ ಜಾರಿ.
ಸವೆಯಲಿ ಇಂದೇ ಹಿಂದಿನ ಮುಂದಿನ
ಕರೆಕರೆಯೆಲ್ಲಾ ಈಡೇರಿ;
ಕವಿಯಲಿ ನಿದ್ದೆಯವೊಲು ಸಾವೆಲರಲಿ
ಕೊರೆಯಲಿ ಕೆನ್ನೆಯ ಬಿಸಿಯಾರಿ;
ಕಿವಿಯಲ್ಲಿದೆ ಕಡೆ ಮೊರೆಯಲಿ ಕಡಲಾ ಒಂದೇ ಬೇಸರದುಲಿಯೂರಿ.
*****
SHELLEY : Dejection, near Naples
Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...