Home / ಕವನ / ಕವಿತೆ / ಮಾರ್ಸೆಲದಲ್ಲಿಯ ನಾಃತರದಾಮ್‌

ಮಾರ್ಸೆಲದಲ್ಲಿಯ ನಾಃತರದಾಮ್‌

ನಿನ್ನ ನದಿಗಳ ಹೆಸರು ನನಗೆ ಗೊತ್ತಿಲ್ಲ, ಓ ಫ್ರಾನ್ಸ್‌!
ಆದರೆ ಇಂಥ ಚಲುವಿನ ಹೊನಲೇ ಹರಿದಿಹುದು ನನ್ನ ನಾಡಿನಲ್ಲಿ.
ನಿನ್ನ ವನ-ವೃಕ್ಷಗಳ ಹೂ-ಬಳ್ಳಿಗಳ ಪ್ರೀತಿಯನು ಗಳಿಸಿಲ್ಲ ಓ ಫ್ರಾನ್ಸ್‌!
ಇವನೆಲ್ಲ ನೋಡಿ ನಾನೊಸೆದ ತರುಲತೆಗಳ ನೆನಪಾಗುವದು ಮಾತ್ರ.
ಚೆಲುವಿಹುದನಂತ,- ಕಿಡಿಯನು ತಿಳಿದವಗಿಡಿ ಬೆಂಕಿಯ ಮೂಲ ಗೊತ್ತು.

ಅದರೂ ನಿನ್ನ ಚೆಲುವಿಗೆ ಮನಸೊತು ಮುಗ್ಧನಾದೆ!
ಅದಕಿದೆ ಸ್ವಾತಂತ್ರ್ಯದ ಕಾಂತಿ, ಸ್ವಾನುಭೂತಿಯ ಸ್ವಚ್ಛಂದ,
ಆನಂದದ ಲಹರಿಲಹರಿ! ಮಾಟದ ವಿಡಾಯ!
ಪ್ರಕೃತಿಯಾಳವನರಿತಿದೆ ನಿನ್ನಲ್ಲಿಯ ಕಲೆ,-
ಕಲೆಯ ನೆಲೆಯನ್ನರಿತಿದೆ ನಿನ್ನಲ್ಲಿಯ ಪ್ರಕೃತಿ!
ನಿನ್ನ ಬಸಿರಲ್ಲಿ ಬಂದ ಸುಂದರಿಯರು,
ನಿನ್ನಡಿಯಲ್ಲಿ ನಿಂತ ಉನ್ನತ ಕ್ರಿಸ್ತಾಲಯಗಳು,
ನಿನ್ನ ನಂದನವನಗಳಲಿ ಪುಟಿಯುತಿಹ ಕಾರಂಜಿ,-
ಇದರ ಫೋಟೊಗ್ರಾಫಿಯಿದೆ ಮೈಸೂರಲ್ಲಿ,-
ಜೀವಕಳೆಯಿದೆಯಿಲ್ಲಿ,-ನಿನ್ನುಸಿರಿನಲ್ಲಿ!

ಮಾರ್ಸೆಲದಲ್ಲಿಳಿದು ನಿನ್ನ ವೈಭವವ ನೋಡಿ ಬೆರಗುಬಟ್ಟೆ;
ನಿನ್ನೋಣಿಗಳಲ್ಲಿ ತಿರುಗಾಡಿದೆ, ಕಾವಣಗಳಲ್ಲಿ ತರೆದೂಗಿದೆ;
ನಗೆಮೊಗದ ನನ್ನಿಗರೊಡನೆ ಮಾತಾಡಿದೆ; ಸಮಾಧಾನವಿರಲಿಲ್ಲ.
ಪರಂತಂತ್ರ ಭಾರತೀಯನ ಗಂಟಲಿಗೆ ಗಾಳವಿದೆಲ್ಲ ಸಿರಿ.
ನಿನ್ನ `ನಾ:ತರ್‌ದಾಮ’ವು ಮಾತ್ರ ದಿವ್ಯಧಾಮವಾಯ್ತು!
ನೆಲ ನೀರುಗಳಂಚಿನ ಮೇಲೆ ನೆಲೆಸಿದ
ಉನ್ನತೋನ್ನತ ಕಿಸ್ತಾಲಯತೆ ಕಳಸವನಿಟ್ಟು
ಕೈಯಲೆತ್ತಿ ಕ್ರಿಸ್ತನನ್ನು
ಶಾಂತಗ೦ಭೀರವಾಗಿ ನಿಂತಿಹಳು ಮಾತಾಯಿ:
ಆ ದೇವಮಾತೆಯ ಪಡಿಯಚ್ಚಿದೆ
ನಿನ್ನ ಹೆಣ್ಣಿನ ಮೋರೆಯ ಮೇಲೆ, ಓ! ಫ್ರಾನ್ಸ್‌!
ನೀನೇಯೇನು ಆ ಮಾತಾಯಿ?
ರಕ್ಷಿಸಲಣಿಗರನ್ನು, ಸುವ್ವಿಗೆಯ್ಯಲೆಂದತಿಥಿಗಳನ್ನು,-
ನಿಂತೆಯೇನು ನೀನಲ್ಲ?

ಬೆಟ್ಟವನೊ೦ದರಳಿಸಿ ದೇವಮಾತೆಗೆ,-ನಿನ್ನ ದೇಹವು ಪಾವನವಾಯ್ತು,
ತಲೆಯೆತ್ತಿ ನೋಡಿದೆನು ಬಣ್ಣಬಣ್ಣದ ಗುಮ್ಮಟಗಳನ್ನು;
ನುಡಿದದ್ದನ್ನೆ ನುಡಿದು ಮುಗಿಲ ಕಿವಿಗೆ ಮಟ್ಟಿಸುವ ಮಾಡಗಳನ್ನು;
ಮಳೆಬಿಲ್ಲು ಗಾಜಿನಲ್ಲಿ ಮೋಜುಮೋಜಿನ ರೂಹುವೆತ್ತ ಚಿತ್ರಗಳನ್ನು;
ಶಿಲುಬೆಗೇರಿಸಿದ ಕ್ರಿಸ್ತಮೂರ್ತಿಯ;-
ತನೂರುಹುಗಳ ತೆರೆದು ನಿಂತ ದೇವದೂತರ,-
ನೋಡಿ ಬಿಲ್ಲುಂಬೆರಗದೆನಾಗ.
ಕ್ರಿಸ್ತನನೆತ್ತಿಕೊಂಡು ನಿಂತ ಮೇರಿ! ಮಾತಾಯಿ!
ನಿನ್ನನೋಡಿದೊಡನುಕ್ಕಿ ಬ೦ತು ನನ್ನ ಹೃದಯ
ಏಕಾಕಿಯಾದ ನಾನು ದರದೇಶಿಯಂತೆ ಶರಣು ಬರಲು
ತೆಗೆದಪ್ಪಿಕೊಂಡೆ ನನ್ನನು, ಆಶೀರ್ವದಿಸಿದೆ; ಕರುಣಿಸಿದೆ; ವರವನಿತ್ತೆ.
ನಿನ್ನ ನೆನಿಸಲು ಎದೆಯುಕ್ಕುವದು,-ನಿನ್ನಡಿಗಿದ್ದ ಸಮುದ್ರದಂತೆ!
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...