ಮೂಲ: ಪ್ರೇಮಾನಂದ ಮಿತ್ರ
ಗಾಳಿ ಕೂಗುತ್ತ ಬೀಸುತಿದೆ
ಚಿಕ್ಕೆಯೊ ನಡುಗುತಿವೆ;
ತುಕ್ಕು ಹಿಡಿಯುತ್ತ ಕೂತಿದೆ ಹೃದಯ
ಹಳೆಯ ಕವಚದೊಳಗೆ.
ಯಾರದು ಆ ಕೆದರಿದ ಕೇಶ?
ಯಾರದಾಗಿಯೂ ಏನು?
ಕಂಬನಿ ತುಂಬಿದ ಕಣ್ಣಿನ ನೋವನು
ಅಳೆಯುವವನು ಯಾರು?
ದಿನಗಳು ಬೆಳೆದವು ಒಂದೇ ಸಮನೆ
ಕಳೆದವು ಏನೇನೋ;
ಚೂಪನೆ ಭಲ್ಲೆ ಚುಚ್ಚಿದೆ ಎದೆಗೆ
ಮಾಡದೆ ನೋವೇನೂ
ಗಾಳಿ ಕೂಗುತ್ತ ಬೀಸುತಿದೆ
ಚಿಕ್ಕಿಯೊ ನಡುಗುತಿವೆ
ದೂರದಲ್ಲಿ ಮಿಂಚುವ ಕಾಡು
ಝಗ ಝಗ ಬೆಳಗುತಿದೆ.
ಕೆಂಪು ರಂಗು ಅದು ಹೂವಿನದೊ
ಅಥವಾ ಬೆಂಕಿಯದೊ?
ತಿಳಿಯದು ಏನೂ
ತಿಳಿದೂ ಏನು?
ತುಕ್ಕು ಹಿಡಿಯುತಿದೆ ಹೃದಯಕ್ಕೆ
ಹಳೆಯ ಕವಚದೊಳಗೆ
*****
















