ಭವಿಯ ಬದುಕಿದು ಬಂಜರದ ಬದಕು
ಇದಕ್ಕಿಲ್ಲ ದೇವನ ಕಿಂಚಿತ್ತು ಬೆಳಕು
ನಾಳಿನ ಭಾಗ್ಯಕ್ಕೆ ಈ ಸಂಪತ್ತು ಬೇಕಿಲ್ಲ
ಪರಮಾತ್ಮನ ನೊಲಿಯದೆ ಮತ್ತೊಂದು ಬೇಕಿಲ್ಲ
ಇಲ್ಲೆಲ್ಲವು ಲೋಕ ಸ್ವಾರ್ಥದಿಂದ ಮೆರೆದಿದೆ
ನಶ್ವರದ ಬಾಳಿಗೆ ಎನೆಲ್ಲ ಹೊಂಚಿಸಿದೆ
ನಾವು ಎಲ್ಲಿಯವರು ಎಂಬುದು ಅರಿಯದೆ
ಜಾತ್ರೆಯ ಗಮತ್ತಿನಲ್ಲಿ ತಾನೇ ಮೈ ಮರೆತಿದೆ
ದೇವ ನೀನಗೊಂದು ಎನ್ನ ಕೋರಿಕೆ
ಇನ್ನೊಂದು ಬೇಡದಂತೆ ನನ್ನ ಮಾಡು ನಿತ್ಯ
ಮನಸ್ಸಿನ ಆಟಗಳಿಗೆಲ್ಲ ಶೂನ್ಯ ತೊಡಿಸು
ಮನಸ್ಸಿನ ಲೋಕದೊಳಗೆ ತುಂಬು ಸತ್ಯ
ಜನುಮ ಜನುಮದಲ್ಲೂ ದೇಹಕ್ಕೆ ಮೆಚ್ಚಿ
ಮತ್ತೇ ಜನಮುಗಳ ನಿತ್ಯ ಫೇರಿ
ತೊಡೆದು ನಾ ಅಚೆಗೆ ದಿಕ್ಕರಿಸಿ ಸ್ವಾರ್ಥ
ಬೆಳಗಿಸು ಮಾಣಿಕ್ಯ ವಿಠಲ ಜಯಭೇರಿ
*****
















