ಆಯ್ಕೆ

ಮೂಲ: ವಿಲಿಯಂ ಬಟ್ಲರ್ ಏಟ್ಸ್

ಬಾಳಿನ ಸಫಲತೆಯನ್ನೋ
ಕೃತಿಯ ಪರಿಪೂರ್‍ಣತೆಯನ್ನೋ
ಆಯಬೇಕು ಒಂದನ್ನೇ ಮನುಷ್ಯಮತಿ ಇಲ್ಲಿ,
ಆಯ್ದರೆ ಎರಡನೆಯದನ್ನು
ಬಿಟ್ಟುಕೊಡಬೇಕು ದೇವಸೌಧವನ್ನು,
ಕುದಿಯಬೇಕು ತಡಕಾಡುತ್ತ ಕತ್ತಲಲ್ಲಿ.

ಎಲ್ಲ ಕಥೆ ಕೊನೆಗಂಡು
ಉಳಿಯುವುದಾದರೂ ಏನು?
ಗೆಲುವೋ, ಸೋಲೋ, ಒಟ್ಟು ಪಟ್ಟಪಾಡಿನ ಗುರುತು:
ಖಾಲಿ ಜೇಬಾದವನ ಕಂಗಾಲು ನೋಟ,
ಹಗಲಿನ ನಿರರ್‍ಥಕತೆ, ರಾತ್ರಿಯ ವಿಲಾಪ.
*****
ಸಫಲವಾದ ಜೀವನ ಮತ್ತು ಸಾರ್‍ಥಕವಾದ ಕೃತಿರಚನೆ ಈ ಎರಡೂ ಒಟ್ಟಿಗೇ ಮನುಷ್ಯನಿಗೆ ದಕ್ಕುವುದಿಲ್ಲ. ಕೃತಿಯ ಸಾಫಲ್ಯತೆಗೆ ಬಾಳಿನ ಎಲ್ಲ ಬಗೆಯ ಸಾಕ್ಷಾತ್ತಾದ ಅನುಭವ ಅಗತ್ಯ. ಕೃತಿಕಾರ ತನ್ನ ಬಾಳನ್ನು ಬಲಿಕೊಟ್ಟಲ್ಲದೆ ಅದನ್ನು ಪಡೆಯಲು ಸಾಧ್ಯವಿಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡುತಾವ ನೆನಪುಗಳು – ೧೨
Next post ಸಿರಿಯೆ ನೀ ಸಿರಿಯೆ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…