ನಾ ಕುಡದಾಡೋ ಪದಗೊಳ್ನೆಲ್ಲ
ಬೀದೀಯೋರ್ ಜನಗೋಳು
ಈಟೊಂದ್ ಒಗಳಾಕ್ ಏನ್ ಕಾರಣಾಂದ್ರೆ
ಯೋಳ್ತೀನ್ ಚೆಂದಾಗ್ ಕೇಳು. ೧
ಯಿದ್ದೇಗೆಲ್ಲ ದೇವ್ರಾಗೌಳೆ-
ಔಳ್ ಆ ಸರಸೋತಮ್ಮ;
ಯೀಣೆ ಯಿಡದಿ ಔಳ್ ಆಡಿದ್ರೆ
ನಾ ಕುಡದ್ ಆಡ್ತೀನಮ್ಮ! ೨
ಸರಸೋತಮ್ಮನ್ ಎಡದೋಳ್ ನೋಡು!
ನನ್ ಎಡಗೈನು ನೋಡು!
ಔಳ್ತಾವ್ ಇದ್ರೆ ಯೀಣೆ ಬುಂಡೆ-
ನನಗೈತ್ ಯೆಂಡದ್ ಬುಂಡೆ! ೩
ಬುಂಡೆ ಮಾತ್ರ ನೋಡಿದೇನಣ್ಣ!
ಎಂಗೈತ್ ಅದರದ್ ತಳಕು!
ಅದಕೆ ಅಮ್ಮನ್ ಯೀಣೇ ಅಂಗೆ
ನನ್ದು ಮಾತಿನ್ ಪಲಕು! ೪
*****