ತಾಯಿ ನಿನ್ನ ಸ್ಮರಣಿ
ನಿತ್ಯ ಎನ್ನ ಕಾಡಿತು
ನೀ ಸಾಕ್ಷಾತ್ಕಾರಗಳಾಗಿದೆ
ನನ್ನ ಮೊಗ ಬಾಡಿತು
ಲೋಕ ಮಾತೆ ವಿಶ್ವಮಾತೆ
ಕಲ್ಯಾಣ ಮಾತೆ ನೀನು
ನಿನ್ನ ಸಾನಿಧ್ಯಯಲ್ಲಿ ಎನ್ನ
ಬದುಕು ಭಕ್ತಿಯ ಜೇನು
ನಿನ್ನ ಕಾಣದೆ ನಾನು
ವ್ಯಾಕುಲದಿ ಮೊರೆ ಇಡುವೆ
ನೀನು ಶಾಂತಳಾಗಿ ಕಾಣು
ಅದೇ ನಾ ನಿನ್ನ ಬೇಡುವೆ
ಎನ್ನ ಬದುಕಾಗಲಿ ನಿನ್ನಿಂದ
ಸಾರ್‍ಥಕದ ಅರುಳುವ ಬಾಳು
ನೀ ಮಾಣಿಕ್ಯ ವಿಠಲನಿಗೆ ಕೃಪೆ
ಸಾಫಲ್ಯವಾಗಲಿ ಆ ಬಾಳು
*****