ಕೃಷಿ ಕ್ಷಮತೆ ಏರಿಹುದೆಂದು ಇಳುವರಿಯನಧಿ
ಕಗೊಳಿಸಿದ ಖುಷಿಯಲೊರಲುವರೊಂದಷ್ಟು ಜನರಾದೊಡಂ
ಕೃಷಿ ವೆಚ್ಚವೇರಿರಲು ಕ್ಷಮತೆಯ ಮಾತೆಲ್ಲಿಹುದು?
ಕ್ಷಮತೆಯಳೆಯಲು ಕೋಷ್ಠ ಮಾಪನದ ಹಂಗ್ಯಾಕೋ?
ಕೆಳಗಿಳಿದ ಜಲಮಟ್ಟವೇರಿರುವುಷ್ಣತೆಯಷ್ಟೆ ಸಾಕೋ – ವಿಜ್ಞಾನೇಶ್ವರಾ
*****