ಕವನವೆನ್ನದಿದ್ಯಾಕೆ ಪ್ರಶ್ನೋತ್ತರದಂತಿಹುದು?
ಜೀವನವೆಂದೊಡೇನದರ ಅಂದಾನಂದವದೇನು?
ನಾವೇನು ಮಾಡಿದೊಡೇನು? ಮಾಡದೊಡೇನು?
ತವಕದೊಳೇಳ್ವ ಪ್ರಶ್ನಾವಲಿಯ ಮೇಲೆಮ್ಮ
ಜೀವನವೆ ನಿಂದಿಹುದದರಿಂದ ನಿಲಿಸಿಹೆನೆನ್ನ
ಕವನಗಳ ಪರಿಪರಿಯ ಪ್ರಶ್ನೆಗಳ ಮೇಲೆ – ವಿಜ್ಞಾನೇಶ್ವರಾ
*****
Latest posts by ಚಂದ್ರಶೇಖರ ಎ ಪಿ (see all)
- ಆನು ಪೇಳಿದೆಲ್ಲವನು ಮಾಡದೊಡೇನಂತೆ ? - January 18, 2021
- ಪರಿಪರಿ ನೆನೆದೊಡಾ ಐದೆನ್ನ ಕಾಯದೇ ? - January 11, 2021
- ಪೇಳಲಾಪರಿ ಕಿರಿದಾಗಿ, ಬೇಕಲ್ಲಾ ಹಿರಿ ಪ್ರತಿಭೆ? - January 4, 2021