ನೀ ಜಲೇಬಿ; ನಾ ನೊಣ
ಅಂದ ಒಬ್ಬ ನವ್ಯಕವಿ
ನೀ ಹೂವು; ನಾ ಚಿಟ್ಟೆ
ಎಂದಿದ್ದ ಮುದುಕು ಕವಿಯ
ಸಾಲುಗಳ ಅಳಿಸಿ ಹಾಕಿ,
ಮುದಕನ ಆಳ ಭಾಷೆಗೂ
ಅಪ್ಪನ ಅಳೆಯುತ್ತಿರುವ ಭಾಷೆಗೂ
ಮೊಮ್ಮಗ ತಲೆ ಜಜ್ಜಿಕೊಂಡು
ಸಾಹಿತಿಗಳ ಕಾಟ ತಪ್ಪಿಸಿಕೊಂಡು
ಹುಡುಗಿಗೆ ಸಮಕ್ಷಮ
ಮುದ್ದಿಸುತ ನಡದೇಬಿಟ್ಟ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)