ನನ್ನೊಳಗೊಬ್ಬ ಸೈತಾನ ಯಾವಾಗಲೂ ಇರುತಾನ ನಾನೆಚ್ಚರಿರಲಿ ನಿದ್ರಿಸುತಿರಲಿ ತನ್ನಿಚ್ಛೆಯಂತೆ ಕುಣಿಸುತಾನ ಕುಣಿಸುತಾನ ದಣಿಸುತಾನ ಮನಸೋ‌ಇಚ್ಛೆ ಮಣಿಸುತಲು ಇರುತಾನ ಎಲ್ಲರನು ಬಯ್ಯುತಾನ ಬಡಿಯಲು ಕೈಯೆತ್ತುತಾನ ಕೊಂದು ಕೂಗುತಾನ ಯಾವಾಗಲೂ ಏನೊ ಒಂದು ಸಂಚ...

ಪಡುವ ಮಲೆಯ ಕಣಿವೆಯಾಚೆ ಹೊತ್ತು ಹಾರಿಹೋಗುತಿತ್ತು, ಮೂಡ ಮಲೆಯ ಹಲ್ಲೆ ಹತ್ತಿ ಇರುಳ ದಾಳಿ ನುಗ್ಗುತಿತ್ತು; ಬಿದ್ದ ಹೊನ್ನ ಕೊಳ್ಳೆ ಹೊಡೆದು ಕಳ್ಳಸಂಜೆಯೋಡುತಿತ್ತು, ತಲೆಯ ಬಾಗಿ ಪುರದ ದೀಪ ಜೀವದೊಂದಿಗಿದ್ದಿತು. ಪಾನಭೂಮಿಯಲ್ಲಿ ಮತ್ತ- ಜನದ ಮಾತಿನಲ...

ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ! ಹೆಂಡತಿ: ರಾಟಲಿಲ್ಲೋ ಜಾಣಾ! ರಾಟಲಿಲ್ಲೋ ಜಾಣಾ! ಕತೆಗಾರ: ಮನಿಯಾನ ಬಂಡೀ ಮುರಿಸಿ ಮನಿಯಾನ ಬಂಡೀ ಮುರಿಸಿ ರಾಟೀ ಮಾಡಿಸಿ ಕೊಟ್ಟಾ ರಾಟೀ ಮಾಡಿಸಿ ಕೊಟ್ಟಾ ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ...

ಬ್ಯಾಕ್ಟಿರಿಯಾಗಳು ಮನುಷ್ಯನ ದೇಹಕ್ಕೆ ಎಷ್ಟು ಪ್ರಯೋಜನವೋ ಅಷ್ಟೇ ಅಪಾಯಕಾರಿಗಳು ನಿಜ. ಕೆಲವು ಸಲ ಭಯಂಕರ ಕಾಯಿಲೆಗಳಿಗೆ ಕಾರಣವಾಗುವ ಇವುಗಳಿಂದಲೇ ಮಾನವನ ಆಹಾರವಸ್ತುಗಳ ಅಂಗಾಗಳಾಗಿಯೂ ಉಪಕರಿಸುತ್ತದೆ. ದೋಸೆ, ಇಡ್ಲಿ, ಬ್ರೆಡ್, ಮೊಸರು, ಬೆಣ್ಣೆ, ಗ...

‘ಬೇಸಗೆಯ ಬೇಸರಂ ಬೀಸು ೧ಕಾದಿಗೆಯೇ! ಮೊಗ್ಗರಿಸಿ ಮೊರೆ ಮುಗಿಲೆ! ಮಿನುಗು ಮೊನೆಮಿಂಚೇ!- ಮೇಣಿಂತು ಮಳೆಯ ಮುಂಬನಿ ಮಣಿದು ಹೊಂಚೆ ನಿನ್ನ, ನೀನದನೊಲ್ಲದೆಲ್ಲಿ ಚಾದಗೆಯೇ೨? ೪ ನಿನ್ನ ತನುವೆಂತು? ದನಿಯೆಂತು? ಮನೆಯೆಂತು? ದೆಸೆಡೆಸೆಯ ಸೋಸಿ ನಾ ಸ...

ಬಾರಣ್ಣ ನೀ ನೋಡು ಕರ್ನಾಟಕಾ ನಾಡು ದೇವಿ ಚಾಮುಂಡಿಯ ಗುಡಿ ನೋಡು; ನೋಡುತ್ತ ಕುಣಿಯುತ ನಲಿದಾಡು ಇನ್ನೆಲ್ಲು ಕಾಣದ ಮುಂದೆಲ್ಲು ನೋಡದ ಸೌಂದರ್ಯವಿಲ್ಲಿ ನೋಡು ಬಾರೊ; ಎದೆಬಿಚ್ಚಿ ರಾಗ ಹಾಡು ಬಾರೊ ಮುಗಿಲುದ್ದ ಗೋಪುರ ಮೈಲುದ್ದ ದೇಗುಲ ಕಣ್ಣಾರೆ ಕಂಡು ...

ಗುತ್ತಿನವರು ನಡೆಸುವ ದೊಂಪದ ಬಲಿ ಅಂದರೆ ಆಸುಪಾಸಿನ ಹತ್ತೂರಲ್ಲಿ ಎಲ್ಲೂ ಇಲ್ಲದ್ದು. ಸುಗ್ಗಿ ಕೊಯ್ಲು ಕಳೆದು ಸರಿಯಾಗಿ ಮೂವತ್ತನೆಯ ದಿವಸಕ್ಕೆ ನಡೆಯುವ ದೊಂಪದ ಬಲಿ ಊರಿಗೆ ಎಲ್ಲಿಲ್ಲದ ಕಳೆ ತರುತ್ತದೆ. ನಾಲ್ಕೂರುಗಳ ಜನ ಅಲ್ಲಿ ನೆರೆದು ಜಾತ್ರೆಯ ವ...

ಶರತ್ಕಾಲದ ಚೆಲುವ ಹೊದ್ದು ನಿಂತಿವೆ ಮರ ಕಾಡುದಾರಿಗಳೆಲ್ಲ ಒಣಗಿವೆ; ಕಾರ್‍ತಿಕದ ಸಂಜೆಬೆಳಕಲ್ಲಿ ಮಿಂಚುವ ನೀರು ಶಾಂತ ಆಗಸವನ್ನು ಪ್ರತಿಫಲಿಸಿದೆ; ಬಂಡಗಳ ನಡುವೆ ಮಡುನಿಂತ ನೀರಿನ ಮೇಲೆ ಐವತ್ತೊಂಬತ್ತು ಹಂಸ ತೇಲಿವೆ. ನಾನು ಮೊದಲೆಣಿಕೆ ಮಾಡಿದ್ದು ನ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...