ಭಾವಗೀತೆ ಹಾಡಲೇನು | ಹೃದಯ ಭಾರ ಇಳಿಸಲೇನು || ಪ || ಕುಬ್ಜವಾಗಿ ನಿಂತ ನಾನು ನೂರು ಕನಸ ಕಂಡೆನು | ಕನಸನೆಲ್ಲ ಹಿಡಿಯ ಹೋಗಿ ಬರಿಯ ಶೂನ್ಯ ಕಂಡೆನು ||೧|| ಆಸೆ ಎಂಬ ತೇರನೇರಿ ದೂರ ದೂರ ಹೋದೆನು | ನೆನೆಸದಷ್ಟು ದೂರ ಹೋಗಿ ಗುರಿಯನೆಲ್ಲೂ ಕಾಣೆನು ||...

ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿಗಾಲವಿಲ್ಲ. ಮಾನವರೆಲ್ಲೋ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು. ವರುಣ ನೀ ಕರುಣೆ ತೋರಿ ಸುರಿಸು ಮಳೆ ಹನಿಯನ್ನು ಜ...

ಭೂಮಿಯಾಳದಲ್ಲಿ ಮಾತ್ರ ಈಜುವ ಪುರಾವೆಗಳಿವೆ ಈ ಮರದ ಬೇರಿಗೆ ಹೆಬ್ಬಂಡೆಯೂ ಮಿದು ಮಣ್ಣಾಗಿ ಹುಡಿ ಹುಡಿಯೂ ಮಿಸುಕುತ್ತದಂತೆ ಕಾಣಲಾರದು ನಮ್ಮಂಥ ಪಾಮರರಿಗೆ! ಈ ಮರದ ಕೊಂಬೆ ಕೊಂಬೆಗಳಲ್ಲಿ ನೇತು ಬೀಳಬಹುದು ಯಾರೂ ಉಯ್ಯಾಲೆಯಾಡಬಹುದು ಹತ್ತಿ ಕುಪ್ಪಳಿಸಿ ...

ಸಾಹಿತ್ಯ ಸೃಷ್ಟಿ ಒಂದು ಕಾಯಕವೇ ಅಥವಾ ಸ್ಫೂರ್ತಿಯೇ? ಸ್ಫೂರ್ತಿಯಾಗಿದ್ದರೆ ಅದರ ಅರ್ಥವೇನು? ಇಂಥ ಪಶ್ನೆಗಳಿಗೆ ಬಹುಶಃ ಉತ್ತರವಿಲ್ಲ. ಬರೆಯುವ ಮೊದಲು ಹಲವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ; ಹಲವರು ಮಾಡಿಕೊಂಡಿರುವುದಿಲ್ಲ. ಶಿವರಾ...

ಬಾ ನೊಳವೆ, ಬಾ ನೊಳವೆ, ಬಾ ನನ್ನ ಮನೆಗೆ, ಬಾನೊಳಗೆ ಹಾರಿ ಬಲು ದಣುವಾಯ್ತು ನಿನಗೆ. ನೀನೊಮ್ಮೆ ಬಾ, ನನ್ನ ಹೊಸ ಮನೆಯ ನೋಡು; ಈ ನೂಲಿನಾ ಚಾಪೆಯಲಿ ಬಂದು ಕೂಡು.” ಆ ಮಾತಿಗಾ ನೊಳವು “ಎಲೆ ಜೇಡ, ಜೇಡ! ಈ ಮನೆಯ ಉಪಚಾರ, ಹಾ! ಬೇಡ ಬೇಡ! ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...