Day: December 11, 2020

#ಕವಿತೆ

ಮರೀನಾದಲ್ಲಿ ಕವಿ

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಮಸಾಲೆ ಕಡಲೆ ಜಗಿಯುತ್ತ ಸೌತೆ ಚೂರು ಮೆಲ್ಲುತ್ತ ಕಾಲೆಳೆಯುತ್ತ ಉಸುಕಿನಲ್ಲಿ ಮೂರು ಸಂಜೆಯ ಬೆಳಕಿನಲ್ಲಿ ಕವಿಯಿದ್ದಾನೆ ಎಲ್ಲರ ಹಾಗೆ ಕವಿಗಳಿರೋದೇ ಹಾಗೆ ಉಪ್ಪಿನ ಹವೆಗೆ ಒಪ್ಪಿಸಿಕೊಂಡು ಭಿಕ್ಷುಕರಿಂದ ತಪ್ಪಿಸಿಕೊಂಡು ಕಡಲಿನ ರಾಗವ ಹಿಡಿಯುತ್ತ ಬಡವರಿಗಾಗಿ ಮರುಗುತ್ತ ಕವಿಯಿದ್ದಾನೆ ಎಲ್ಲರ ಹಾಗೆ ಕವಿಗಳಿರೋದೇ ಹಾಗೆ ತೆರೆಗಳು ಎಂದೂ ನಿಲ್ಲವು ಎಂದು ಲೋಕದ ದಂಧೆ ನೀಗದು ಎಂದು ಸುಸ್ತಾದಾಗ […]

#ಇತರೆ

ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

0

ಇದೇ ವರ್ಷ ನವೆಂಬರ್ ೨೨ ರಂದು ಪ್ರಸಾರಗೊಂಡ ಸುದ್ದಿ ಇದು. ಆಫ್ರಿಕದ ನೈಜೀರಿಯಾದ ಕಾಡುನಾ ಎಂಬಲ್ಲಿ ವಿಶ್ವಸುಂದರಿ ಸ್ಪರ್‍ಧೆಯ ಪರ-ವಿರುದ್ಧ ಗಲಭೆ ನಡೆಯಿತು. ಗಲಭೆಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತೀಯತೆಯ ರಂಗು ಬಂದಿತ್ತು. ನೂರ ಐದು ಜನ ಪ್ರಾಣಕೆಳದುಕೊಂಡರು. ಇದನ್ನು ಟಿವಿಯಲ್ಲಿ ನೋಡಿದಾಗ, ಓದಿದಾಗ ಮೂಡಿದ ವಿಚಾರಗಳು ಇವು. ‘ಮನದ ಪರಿಣಾಮವೇ ಚೆಲುವ.’ ಹನ್ನೆರಡನೆಯ ಶತಮಾನದಲ್ಲಿದ್ದ […]

#ಅನುವಾದ

ಇವತ್ತು ರಾತ್ರಿ ಬರೆಯಬಹುದು ….

0

ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಹೀಗೆ, ‘ರಾತ್ರಿ ಚೂರು ಚೂರಾಗಿದೆ, ದೂರದಲ್ಲಿ ನಕ್ಪತ್ರ ಮಿನುಗಿದೆ’. ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ. ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಅವಳನ್ನು ಪ್ರೀತಿಸಿದೆ. ಒಮ್ಮೊಮ್ಮೆ ಅವಳೂ ನನ್ನ ಪ್ರೀತಿಸಿದಳು. ಇಂಥ ರಾತ್ರಿಗಳಲ್ಲಿ ಅವಳನ್ನು ಅಪ್ಪಿ ಹಿಡಿದೆ. ಮೋಡವಿರದ ಸ್ವಚ್ಛ ಆಕಾಶ. ಮತೆ ಮತ್ತೆ […]