ಮರೆವಿಗೂ ನನಗೂ ಬಹು ಹಿಂದಿನಿಂದ ನಂಟು ಅಂಟಿಕೊಂಡು ಬಂದಿದೆ. ಮರೆವು ಅಂದರೆ ಇಲ್ಲಿ ಅರವತ್ತರ ಅರಳು ಮರಳೂ ಅಲ್ಲ; ನಿಜದ ನೆನಹನ್ನು ಮರೆತು, ನಿಂತ ಪಾರಮಾರ್ಥಿಕ ಮರೆವೂ ಅಲ್ಲ. ಜೀವನವನ್ನು ಎದುರಿಸುಲಿಕ್ಕಾಗದೆ, ಮರೆವಿನ ವಿಶಾಲ...
ಚೈತ್ರ ಎಷ್ಟು ಬಂದವೋ ಕದವ ಬಡಿದು ನಡೆದವೋ ಹಕ್ಕಿ ಕೊರಳು ಕರೆಗಂಟೆಯ ಒತ್ತಿ ಒತ್ತಿ ದಣಿದವೋ ತೆರೆಯ ಬರದ ಬಾಗಿಲೇ, ನೆಲ ಹಾಯದ ನೇಗಿಲೇ ಇದ್ದರಾಯ್ತೆ ಬದುಕು ಬರಿದೆ ? ನುಡಿಯಬೇಕು ಮದ್ದಲೆ ಇರುವುದೇಕೆ...