
ಹನುಮಂತ ಭೂಪಾ ಸದ್ಗುಣಮಣಿ ಶಾಂತರೂಪಾ || ಪ || ಹನುಮಂತ ಮಹಾಮುನೀಶ ವಾಯು ತನಯ ವಾನರೇಂದ್ರ ವನಚರ ಶುಭಕಿರಣ ವಿಹಾರನು ಮಹಿಮಾಗಾರಾ ಅಂಜನೀಕುಮಾರಾ ಸುಜನೋದ್ದಾರಾ ಕುಜನೋತ್ಪಾಲನಾ ಹೋ ಭಕ್ತಪ್ರಾಣ ಪಂಚಪ್ರಾಣಾ ನಮಸ್ತುತೆ ಕ್ಷೋಣಿಪಾಲ ರಘುಚರಣ ಸೇವಕಾ ಕಪಿ...
ಬಸವೇಶ್ವರನ ಒಂದು ಪಾದವ ರುದ್ರ ಪಿಡಿದನು ಬಸವೇಶ್ವರನ ಒಂದು ಪಾದವ ವಿಷ್ಣು ಪಿಡಿದನು ಬಸವೇಶ್ವರನ ಒಂದು ಪಾದವ ತೆತ್ತೀಸಕೋಟಿ ದೇವತೆಗಳು ಪಿಡಿದರು ಬಸವೇಶ್ವರನೇ ಸಕಲ ಜಗವನು ನಾಲ್ಕುಯುಗದಿ ಸಲಹುವನು ನಂದಿ ಜಯ ಜಯ ಎನುತಲಿಪ್ಪರು ಗಂಗಾ ಪಾರ್ವತಾದೇವಿಯರ...
ತಾಳಲಾರೆ ತಗಣಿಕಾಟವಾ ಶಿವಹರನು ಬಲ್ಲ ತಾಳಲಾರೆ ತಗಣಿಕಾಟವಾ ||ಪ|| ತಾಳಲಾರೆ ತಗಣಿಕಾಟಾ ಘನಘೋರ ಇದರಾರ‍್ಭಾಟ ಮಾಳಗಿ ಮನಿಯ ಜಂತಿ ಸೇರಿ ಗೋಳುಮಾಡಿ ಬಿಟ್ಟವಣ್ಣಾ ||ಅ.ಪ.|| ಮೈಯ ಮೇಲೆ ಬಿದ್ದರ ತಿಂಡಿ ಹಚ್ಚಿದಂತೆ ಪುಂಡಿ ಮಾಯದೇಹ ರಕ್ತದ ಉಂಡಿ ಗಾಯ ಮ...
“ಅನಂತ ವಿಜಯ” ಅಂದಿನಿಂದಲೇ ಅನಂತ ವಿಜಯ ಪ್ರಾರಂಭವಾಯಿತು. ಎಂದು ಅವನು ಚಿ.ಸುಬ್ಬಿಯನ್ನು ವರಿಸಿದನೋ ಅಂದಿನಿಂದಲೇ. ನಮ್ಮಲ್ಲಿ ಆಗ ಮನೆಯಲ್ಲಿ ಬೇರೆ ಹೆಸರು ಇಡುವ ಪದ್ಧತಿ ಇತ್ತು. ಸೊಸೆಗೆ ಎಲ್ಲರೂ ಸೇರಿ “ಲಕ್ಷ್ಮಿ” ಎಂ...
ದೃಶ್ಯ – ೧ (ಇಲಿಗಳು ಕುಣಿಯುತ್ತಾ ಬರುತ್ತವೆ) ಹಾಡು ಇಲಿ ಇಲಿ ಇಲಿ ಇಲಿ ಇಲಿ ಇಲಿ ಇಲಿ ಇಲಿ ಎಲ್ಲಿ ನೋಡಿದರು ಇಲಿಯೆ ಇಲಿ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಕಿಚ್ ಇಲ್ಲಾ ಕಡೆಗಳಲ್ಲು ಗಲೀ ಬಿಲಿ || ಆಹಾ ಅದರ ಬಾಲಕಡ್ದಿ ಓಹೋ ನೋಡು ...
ಅಲ್ಲಲ್ಲಿ ಓಡುವ ನನ್ನ ಮನವೆ ಆನಂದದ ನೆಲೆಯಲ್ಲಿ ನಿಲ್ಲು ಮನವೆ ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ. ಈರ್ಷೆ, ಅಸೂಯೆ, ಆತಂಕವಿಲ್ಲ ಉದಯ ರವಿಯ ಕಿರಣ ಸೊಬಗೆಲ್ಲ ಊರ್ಧ್ವಗಾಮಿಯಾಗಿ ನುಡಿ ಸೊಲ್ಲ. ಋಷಿ ಮುನಿಯ ಮನದ ಸತ್ಯವೇ ಬೆಲ್ಲ ಎಲ್ಲಿದ್ದರೂ ತಿಳಿ, ...
ಚೋಳ ಕಡಿತು ನನಗೊಂದು ಚೋಳ ಕಡಿತು ಕಾಳಕತ್ತಲದೊಳಗ ಕೂತಿತ್ತು ನನಕಂಡು ಬಂತು || ಪ || ಎಷ್ಟು ದಿನದ ಸಿಟ್ಟು ಇಟ್ಟಿತ್ತು ತೀರಿಸಿಬಿಟ್ಟಿತು ಯಾರಿಗೆ ಹೇಳಿದರ ಏನ ಆದೀತು ಗುರುತಾತು ಈ ಮಾತು ಹುಟ್ಟಿದ ಮಗಳು ಕಂಡಿದ್ಧಿಲ್ಲ ಇದರ ಕಷ್ಟ ಶಿವನೇ ಬಲ್ಲ ಘಟ್...
ಬಾಗಿಲ ತೆಗೆ ಮಗೂ ಗಾಳಿ ಸ್ವಚ್ಚಂದ ಓಡಾಡಲಿ ಕಿಟಕಿಯ ಬಾಗಿಲು ತೆರೆದು ಕಣ್ಣಿನ ಬಾಗಿಲು ತೆರೆದು ತುಂಬಿಕೋ, ನೋಡಿಕೋ ನೂರಾರು ನೋಟ ಅರಿತುಕೋ ಬಹಳಷ್ಟು ಇವೆ ಕಲಿಯಬೇಕಾದ ಪಾಠ ಹೃದಯಕ್ಕೆ ಹಾಕಿದ ಚಿಲಕ ತೆಗೆದುಬಿಡು ಕಣ್ಣು ಕಿವಿ ಮೂಗು ಎಲ್ಲಾ ಮುಚ್ಚಿದ ...
ಹಾವು ಕಂಡಿರೇನಮ್ಮಯ್ಯಾ ಈ ಸ್ವಾಮಿಯೊಳು ಹಾವು ಕಂಡಿರೇನಮ್ಮಯ್ಯಾ ||ಪ|| ಹಾವು ಕಂಡರ ಎನ್ನ ಜೀವವು ಕು೦ದಿತು ತನ್ನ ಮಂಡಲಗಟ್ಟಿ ಮಾಯವಾದಿತು ಗುಂಡೇಲಿಂಗನ ಗುಡಿಯ ಮುಂದ || ಆ. ಪ. || ಹಂಡಬಣ್ಣದ ಹಾವು ಕಂಡಾಕ್ಷಣಕ್ಕೆ ಬಂಡಿಗೆಬ್ಬಿಸಿತು ಮನವು ಪಿ೦ಡದೇ...
ಹಾವು ತುಳಿದೆನೇ ಮಾನಿನಿ ಹಾವು ತುಳಿದೆನೇ ||ಪ|| ಹಾವು ತುಳಿದು ಹಾರಿ ನಿಂತೆ ಜೀವ ಕಳವಳಿಸಿತು ಗೆಳತಿ ದೇಹತ್ರಯದ ಸ್ಮೃತಿಯು ತಪ್ಪಿ ದೇವಾ ನೀನೆ ಗತಿಯು ಎಂದು ||೧|| ಹರಿಗೆ ಹಾಸಿಗೆಯಾದ ಹಾವು ಹರನ ತೋಳಿನೊಳಿರುವ ಹಾವು ಧರೆಯ ಹೊತ್ತು ಮೆರೆವ ಹಾವಿನ...














