ಎಲ್ಲಿ ನೀನು, ನಿನ್ನೆ ನೆಲೆಯು, ತಿಳಿವುದೆಂತು ನಿನ್ನೊಳದನಿ, ಬಣ್ಣವೇರಿ ನಿಂತ ಮೊಗಕೆ, ಕಾಣಬಹುದೆ ನಿಜ ದನಿ? ವಿಸ್ತೃತ ಜಗವೆ ಕಿರಿದು ಮಾಡಿ ಕೀರ್ತಿ ಶಿಖರವೇರಿ ನಿಂತು ನನ್ನ-ನಿನ್ನ ದೂರಮಾಡಿದೆ, ಸರಕು-ಸಂಸ್ಕೃತಿ ದಾಳದಲ್ಲಿ ಏನೆಲ್ಲ ಕಳೇದೀಡಾಡಿದೆ....?...
ಶಿಖರ ಶೃಂಗಗಳೆನಿತೆನಿತೆ ಇರಲಿ ನಿನ್ನ ಸಾಧನೆಯ ಹಿರಿಮೆ ಗರಿಮೆಗೆ, ಪ್ರೀತಿ ಹಣತೆ ನಂದದಿರಲಿ, ಮಧುರ ಭಾವ ಬಂಧುರ ಬದುಕಿಗೆ ಇಂದು ನಾಳೆಗಳಲಿ ನೀನೆ ನಿನ್ನ ಪರಧಿಯ ನೇಸರ, ಒಂದರೊಳಗೊಂದಾಗೋ ಪ್ರೀತಿಗೆ ನೀನೆ ತಿಂಗಳಂಗಳ ಚಂದಿರ,...
ಈ ನೆಲವು ಬರಿಯ ಮಣ್ಣಲ್ಲವೊ ಈ ನೆಲದ ನುಡಿ ಕಿರಿದಲ್ಲವೊ ಅರಿವಿಗಣ್ಣಿನ ನೋಟಕಿಲ್ಲಿ ವಿಶ್ವಂಬರನ ವಿಶ್ವರೂಪವು ತೆರೆದಿದೆ ಬಿಂಕ ಬೆಡಗಿನ ನುಡಿಯ ಸಂಕರ, ತುಂಬ ಬಹುದೆ ತಾಯ್ನುಡಿ ಸಾಗರ? ಒನಪಿನೊನಪಿನ ಶಬ್ದ ಡಂಗುರ ತೋರಬಹುದೆ...
ಗಿರಣಿ ವಿಸ್ತಾರ ನೋಡಮ್ಮಾ ಶರಣಿ ಕೂಡಮ್ಮ ||ಪ|| ಧರಣಿಪತಿಯು ರಾಣಿ ಕರುಣಾಕ ರಾಜ್ಯಕೆ ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.|| ಜಲ ಆಗ್ನಿ ವಾಯು ಒಂದಾಗಿ ಕಲೆತು ಚಂದಾಗಿ ಜಲ ಅಗ್ನಿ ವಾಯು ಒಂದಾಗಿ...
ಮೊದಲ ಬಾರಿಗೆ ಕಲೇಜಿನಲ್ಲಿ ಕಾಣಿಸಿಕೊಂಡ ಅವಳ ಕಣ್ಣುಗಳ ಬೆಡಗಿಗೆ ಎಲ್ಲ ಹುಡುಗರು ಮಾರುಹೋದರು. ಸದಾ ಹಸನ್ಮುಖಿ, ಹಿತಮಿತ ಮಾತಿನ ಆ ಹುಡುಗಿ ಸ್ವಲ್ಪ ದಿನಗಳಲ್ಲೆ ಚಿರಪರಿಚಿತಳಾದಳು. ರೂಪ, ಬುದ್ಧವಂತಿಕೆ, ಅಂತಸ್ತಿನ ದೃಷ್ಟಿಯಲ್ಲಿ ಮೇಲುಸ್ತರದಲ್ಲಿದ್ದ ಆಕೆಗೆ...