Home / ಕವನ / ವಚನ

ವಚನ

ಕೃಷಿ ಎಂದರದೊಂದು ಮಕ್ಕಳಾಟದವೊಲಿರಲು ರಾಶಿ ನಿಯಮಗಳದನು ಬಾಧಿಸದಿರಲು ಉಸಿರಾಟದವೊಲೆಮ್ಮ ಜೀವನದೊಳಾ ಕೃಷಿ ಇರಲು ನಿಸರ್ಗದೊಳಿಂತಪ್ಪುದಕೆಲ್ಲ ಮೂಗ ತೂರಿಸಲು ಅಸ್ತಮದುಸಿರಾಟ ಪುಸ್ಸೊತ್ತು ಯಂತ್ರದೊಳು – ವಿಜ್ಞಾನೇಶ್ವರಾ *****...

ಸುರಿದ ಬೆವರಿನ ಫಲದಿ ತೋಡು ಬಾವಿಯೊಳಂ ಕುರಿಪ ಜಲದ ತೆರದೊಳೆಮ್ಮ ಸಾಹಿತ್ಯವಿರಲದಕೆ ಶಕ್ತಿ ಬರಿದೋದುತೋದುತ ಬರೆವ ಸಾಹಿತ್ಯವದು ಬೋರು ನೀರಿನ ತೆರದಿ ಕ್ಷಣಿಕ ಕಾಸಿನ ಯುಕ್ತಿ ಸುರಿವಾಗಸಕೆ ಆಲಿಕೆಯಂತಿರ್ಪ ಹಸುರೆಲ್ಲದಕು ಶಕ್ತಿ – ವಿಜ್ಞಾನೇಶ್...

ಬರಿಗಾಲ ತುಳಿತವನು ಬರಿಗೈಯ ಥಳಿತವನು ಸೈರಿಸಬಲ್ಲಳೆಮ್ಮಮ್ಮ ಮಣ್ಣಮ್ಮ ಪ್ರೀತಿಯೊಳೆ ಬರಿ ರೈತನೇನು ಮಾಡಿದರು ಮಕ್ಕಳಾಟದ ರಗಳೆ ಜಾರ ಯಂತ್ರದೊಳೆಲ್ಲ ಹಸುರುಡೆಯ ಸೂರೆ ಪರಿಸರದ ಪಾಠವಿನ್ನೇನು? ಆರಕ್ಷಕರ ಕೈ ಮೀರೆ – ವಿಜ್ಞಾನೇಶ್ವರಾ *****...

ಹಸಿ ಬಿಸಿಯ ಸ್ಥಿತ್ಯಂತರಕೆಂಥ ಕಲ್ಲಾದೊಡಂ ತುಸು ತುಸು ಒಡೆದಂತಿಮದಿ ಮಣ್ಣಕ್ಕು ಹುಸಿ ದುಡಿಮೆಯನುದಿನವು ನೂರ್ ಬಾರಿ ಬಿಸಿ ದುಡ್ಡಪ್ಪಾವರ್ತನೆಯ ವೇಗಕೆಮ್ಮ ಕೃಷಿ ಬದುಕಿನಾರೋಗ್ಯ ನುಚ್ಚು ನೂರಾಗುತಿದೆ – ವಿಜ್ಞಾನೇಶ್ವರಾ *****...

ಅಮ್ಮಮ್ಮ ಲಾಭದಾಯಕವೆಂಬೊಂದು ವಿಶೇಷಣಕೆಂಥ ಸಮ್ಮೋಹನ ಶಕ್ತಿಯೋ? ಸುಮ್ಮನೀ ಪದವನೆಸೆದೊ ಡೆಮ್ಮ ರೈತರು ಹೊಸ ಬೆಳೆಯ ನೆಚ್ಚುವರು ತಮ್ಮನೆ ಅಡವಿಟ್ಟು ನೆಲವ ಕಚ್ಚುವರು ಅಮ್ಮನಭಿಮಾನದಡಿ ಮುಗ್ಗರಿಸಿ ನೋಯುವರು – ವಿಜ್ಞಾನೇಶ್ವರಾ *****...

ನೋವನೊರೆಸುವ ಬದಲೊಳಗೊಂದು ನೋವನಿನ್ನೊಂದು ನೋವಿಂದ ಮರೆಯಿ ಸುವ ತಂತ್ರಗಾರಿಕೆ ಯಾಕೋ? ರೈತ ಬಲ ಮೂ ಲವನಳಿಸಿ ಸಾಲ ಸಬ್ಸಿಡಿ ಮತ್ಯಾಕೋ? ಬೀದಿ ಜೀವನವೆಲ್ಲರದನುದಿನವು ಹೊಸ ಗುಂಡಿಗಳು – ವಿಜ್ಞಾನೇಶ್ವರಾ *****...

ಸುಲಭವೆಂದೊಂದು ಬೆಳೆಯನಿರುವೆಲ್ಲ ಜಾಗ ದೊಳು ರೈತ ತಾ ಬೆಳೆದನಿವಾರ್‍ಯದೊಳು ಮಾರುವ ನೆಲ್ಲವನು ನೀಚ ಬೆಲೆಗೆ, ಉಳಿದೆಲ್ಲ ಬೇಕು ಗಳಾನಂತರದೊಳ್ ಕೊಳ್ಳುವನುಚ್ಛ ಬೆಲೆಗೆ ಬೆಲೆಯಿಲ್ಲದಾಗಿಹುದಿದರಿಂದ ರೈತಂಗಾತನುತ್ಪನ್ನಂಗೆ – ವಿಜ್ಞಾನೇಶ್ವರಾ *...

ಅನ್ನ, ಹಾಲು, ತರಕಾರಿಗಳಲಿ, ಅಮಿತ ಬಗೆಯ ದನೆಮ್ಮ ತಾಯ್ನೆಲದೊಳುತ್ಪಾದಿಸಲದೊಂದು ಸಾವಯ ವನಡೆಯದನಿನ್ನಷ್ಟು ವಿಸ್ತರಿಸಿ ಬಡಗಿ, ಕಮ್ಮಾರ, ಕ್ಷೌರ ವೆನುತೆಷ್ಟೊಂದು ಕೆಲಸಗಳನರಿತೆಮ್ಮ ಸೇವೆಯನಲ್ಲಲ್ಲೇ ತಾನೆ ಮಾಡಿದೊಡುಳಿವ ಸಾಗಾಟದೊಳಿನ್ನಷ್ಟು ಸವಿಯುಂ...

ನಡೆಯುವೊಡೆ ಎಡವಿದೊಡದು ಸಹಜ ನೋವಿನೊಡೆ ಕಲಿವ ನಲಿವುಂಟಲ್ಲಿ ನಡೆಯದವನೆಡವಿದೊಡೆ ನಡೆವವನು ನೋಯುವಾಧುನಿಕ ಸ್ಥಿತಿಯೊಳಗೆ ಕೃಷಿ ತಜ್ಞ ನೆಡವಿನಲಿ ಕೃಷಿಕ ತಾ ನೋಯುತಿಹ – ವಿಜ್ಞಾನೇಶ್ವರಾ *****...

ಗೊಬ್ಬರ ಮತ್ತಾಹಾರವೊಂದೆ ನಾಣ್ಯದೆರಡು ಮುಖ ಅಬ್ಬರಾತುರಂಗಳಿಲ್ಲದದು ಹಸುರಡುಗೆಮನೆಯೊಳಗೆ ಸುಬ್ಬ ಸೂರ್‍ಯನ ಶಕುತಿಯೊಳಚ್ಚಾಗಿ ದೊರಕುವುದುಚಿತದಲಿ ಗೊಬ್ಬರದ ನಕಲಿಯನೆ ಘನವೆನುತೇನು ಪೇಟೆ ಗಬಿನಲಿ ಹಬ್ಬವೋ ನಕಲಿ ತಿನಿಸಿನಲಿ, ನಾಣ್ಯ ಸೀಳುತಲಿ &#8211...

1...1314151617...36

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...