Home / ಕವನ / ವಚನ

ವಚನ

ಎಂತು ನೋಡಿದೊಡಂ ಅನ್ನ ಮತ್ತಾನಂದಗ ಳೊಂದೆ ನಾಣ್ಯದೆರಡು ಮುಖವಿರುತಿರಲು ಅಂತೆ ಕುಂತು ದುಡಿವುದೇನೋ ಅನ್ನಕೆಂದೊಂದಷ್ಟು, ಮತ್ತಾ ನಂದವನರಸಿ ಅಲೆವುದೇನೋ ಮನೆ ಬಿಟ್ಟು ರುಂಡ ಮುಂಡಗಳೊಂದಾಗಿ ದುಡಿದರಾ ಜೀವನವೇ ಕೃಷಿಯಕ್ಕು -ವಿಜ್ಞಾನೇಶ್ವರಾ *****...

ದ್ರೋಹವಲಾ ತಮ್ಮ ಬಾಲ್ಯವನೋದಿನೊಳೇರಿಸಿದ ಮನುಜ ಸಹಸ್ರಾಬ್ಧ ಬಾಳುತುಳಿದ ಜೀವಿಗಳ ಬಾಳಿಸು ವ ಹಲಸು ಮಾವಿನಂದದ ಗಿಡಕೊಂದು ದಶಕದ ಬಾಲ್ಯವನು ಸಹಿಸದದನು ತರತರದ ಕಶಿಯೊಳವಸರದಿ ಹರಿಸುವುದು ಬಹು ಕಾಲವೃದ್ಧಿಯೊಳಪ್ಪ ಮೋಪಿಂಗು ಕಾಸಿನ ಕಶಿಯಿಕ್ಕುವುದು &#8...

ಬೀಜ ವೃಕ್ಷ ನ್ಯಾಯವದಂತಿರಲಿ ಅನ್ಯಾಯವದಾವ ಬೀಜಕುಂ ವೃಕ್ಷಕುಂ ಆಗದಿರಲಿ, ರಾಶಿ ಬೀಜವಿದ್ಯಾಕೆನುತ ಕೋಜ ಬೀಜ ಬೆಳೆಸುವಾಧುನಿಕ ಕೃಷಿ ಬಾಳದಿರಲಿ ಯೋಜನೆಗಳಂತಿಮದಿ ಕೃಷಿ ಹೆಸರಿನೊಳಾ ಪೂಜ್ಯ ಬದುಕಿನೊಸರನಾರಿಸದಿರಲಿ – ವಿಜ್ಞಾನೇಶ್ವರಾ *****...

ಎಮ್ಮ ಪದ ಸಂಪ್ರದವಾದೊಡೆಮ್ಮ ಜೀವನ ಕ ಸೀಮ ಸಿರಿ ಸಂಪದ ಚಯನ ಬೇಕಿಲ್ಲವೆನು ತೆಮ್ಮ ಪಿರಿಯರಂದದ ಕೃಷಿಯನುಸುರಿದರು ಕಮತದೊಳೊಸರುವ ಬೆವರಿನೊಳಮ್ಮನರ್ಚನೆ ಮಾಡಿ ತಮ್ಮನ್ನದಾರ್‍ಜನೆಯ ದೋಷ ಕಳೆಯುತ ಬೆಳೆದಿಹರು – ವಿಜ್ಞಾನೇಶ್ವರಾ *****...

ಕೃಷಿ ಕ್ಷಮತೆ ಏರಿಹುದೆಂದು ಇಳುವರಿಯನಧಿ ಕಗೊಳಿಸಿದ ಖುಷಿಯಲೊರಲುವರೊಂದಷ್ಟು ಜನರಾದೊಡಂ ಕೃಷಿ ವೆಚ್ಚವೇರಿರಲು ಕ್ಷಮತೆಯ ಮಾತೆಲ್ಲಿಹುದು? ಕ್ಷಮತೆಯಳೆಯಲು ಕೋಷ್ಠ ಮಾಪನದ ಹಂಗ್ಯಾಕೋ? ಕೆಳಗಿಳಿದ ಜಲಮಟ್ಟವೇರಿರುವುಷ್ಣತೆಯಷ್ಟೆ ಸಾಕೋ – ವಿಜ್ಞಾ...

ಒರೆಯುವೊಡೆ, ಬರೆಯುವೊಡೆ ಸಾಲದದು ಕೃಷಿಯ ಕುರಿತೋದಿದೊಡೆ. ಮಾಡದೋದಿದ ಮಂಡೆ ಬರಿ ಗೂಡೆ ಕೊರಡ ನೆಟ್ಟು ನೀರೆರೆದೊಡದು ಮರವಪ್ಪುದುಂಟೇ? ಸೂರ್‍ಯ ಸಂಶ್ಲೇಷಣೆಯ ಕಷ್ಟವನಿಷ್ಟದೊಳನುಭವಿಪ ಬರಿ ಹುಲ್ಲನೀಕ್ಷಿಸಲದುವೆ ಕೃಷಿ ಪಾಠವನೊರೆಗು – ವಿಜ್ಞಾನ...

ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು – ವಿಜ್ಞಾನೇಶ್ವರಾ *****...

ಕೃಷಿಯೆಂದು ತೆಂಗನು ನೆಟ್ಟೊಡದನೊಣಗಿಸುತ ಕೊಬ್ಬರಿ ಮಾಡಿ ಹಿಂಡಿದೆಣ್ಣೆಯ ಬಳಸಲು ಬೇಕು ಕೊಂಡುಣುವ ಕುಪ್ಪಿಯೊಳಿಹುದು ಕಲಬೆರಕೆಗಾಹ್ವಾನ ಖೊಟ್ಟಿಯುದ್ಯೋಗದೊಳು ಜೀವನವೆ ಕಲಬೆರಕಾಗಿರಲು ಕಸಬರಿಕೆಯೆಷ್ಟಿದ್ದೊಡಂ ಸಾಲದಾಗಿಹುದದನು ಗುಡಿಸಲು – ವಿ...

ದುಡಿದು ಗಳಿಸಿರ್‍ಪನ್ನ ಪಕ್ಕದೊಳಿರ್‍ದು ಬಡತನ ದೂರದೂರದ ಸೂರೆಯುದ್ಯೋಗಿಗೆಲ್ಲ ಸಿರಿತನ ದೈನ್ಯವಲಾ ಎಸೆದ ಬಿಸ್ಕತ್ತಿಗೆಳಸುವ ಶ್ವಾನ ದಂತೆಮ್ಮ ರೈತರ ಪಾಡು ದುಡ್ಡನಾಘ್ರಾಣಿಸುತಿರಲ್ ಧರೆ ಸತ್ತ್ವಗಳಂತೆ ಸೂರೆ ಹೋಗುತಿದೆ ಅಧಿಕ ಇಳುವರಿಗೆ – ವ...

ವೇದವನು ತೊರೆದವರು ಮತ್ತಾ ವೇದವನು ಓದುತೋದುತಲೊರೆವವರು ಅವರಿವರೆಲ್ಲರುಂ ಚೋದನೆಯಮಲಿನ ಪೇಟೆಯುದ್ಯೋಗಕೊಲಿದವರೆ ವೇದ ಮೂಲದಾರಣ್ಯಿಕದ ಕೃಷಿಯ ತೊರೆದವರೆ ವೇದನೆಯ ಕೃಷಿಗೆಲ್ಲರುಂ ಸೂತ್ರಧಾರಿಗಳೆ – ವಿಜ್ಞಾನೇಶ್ವರಾ *****...

1...1213141516...36

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...