ದ್ರೋಹವಲಾ ತಮ್ಮ ಬಾಲ್ಯವನೋದಿನೊಳೇರಿಸಿದ ಮನುಜ
ಸಹಸ್ರಾಬ್ಧ ಬಾಳುತುಳಿದ ಜೀವಿಗಳ ಬಾಳಿಸು
ವ ಹಲಸು ಮಾವಿನಂದದ ಗಿಡಕೊಂದು ದಶಕದ ಬಾಲ್ಯವನು
ಸಹಿಸದದನು ತರತರದ ಕಶಿಯೊಳವಸರದಿ ಹರಿಸುವುದು
ಬಹು ಕಾಲವೃದ್ಧಿಯೊಳಪ್ಪ ಮೋಪಿಂಗು ಕಾಸಿನ ಕಶಿಯಿಕ್ಕುವುದು – ವಿಜ್ಞಾನೇಶ್ವರಾ
*****