Home / ಕವನ / ಕವಿತೆ

ಕವಿತೆ

ಸುರಿಯುತ್ತಿರುವ ಮಂಜಿನೊಳಗಿಂದಲೇ ಮುಂದರಿಯಬೇಕು ಮುಂಜಾವದ ಬಸ್ಸು. ಘಟ್ಟಗಳ ಬದಿಯ ಟಾರು ರೋಡಿನ ಮೇಲೆ ತಿರುವುಗಳಲ್ಲಿ ಮರೆಸಿಕೊಂಡು, ಅಲ್ಲಲ್ಲಿ ಕಾಣಿಸಿಕೊಂಡು ಇಳಿದರೂ ಇಳಿದ ಆಳ ಗೊತ್ತಾಗಬೇಕಾದರೆ ಹಿಂತಿರುಗಿ ನೋಡಬೇಕು ಹಿಂದೆ ಬಿಟ್ಟ ಶಿಖರಗಳನ್ನು....

ಶುಚಿರ್ಭೂತನಾಗಿ ಗುಡಿಯ ಕಿವುಡು ದೇವರಿಗೆ ಕೇಳಿಸಲೆಂದು ಗಂಟೆ ಬಡಿದು ಕಲ್ಲಿಗೆ ತೆಂಗಿನ ಕಾಯಿ ಒಡೆದು ಭಕ್ತಿಯ ಮಹಾಪೂರ ಹರಿಸುವುದು ಬೇಡ ಕತ್ತಲ ಕರ್ಮಗಳಿಗಾಗಿ ಬೆಳಕಿನಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೂ ಬೇಡ ಸುಮ್ಮನೇ ಇರುವುದಕ್ಕೆ ಬಾರದೆ ಬರಿದೆ...

ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ ಅರ್ಧ ಓದಿ ಬೋರಲು ಹಾಕಿದ ಪುಸ್ತಕ, ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು, ಬಟವಾಡೆಯಾಗದೆ ಬಂದ ಪತ್ರ-ಏನೂ ಅನಿಸುವುದಿಲ್ಲ. ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು ರಸ್ತೆ ಚೌಕಗಳಲ್ಲಿ ಮೇಲೆ...

ತಿಂಗಳ ಬೆಳಕಿನ ಸಂಜೆ ಮನೆಯಂಗಳದ ಹೂದೋಟದಲ್ಲಿ ಕುರ್ಚಿ ಹಾಕ್ಕೊಂಡು ಖುಷಿಯಾಗಿ ಕೂರಬೇಕು ಅಂದ್ಕೊಂಡರೆ ಶಶಿ, ನೋಡಪ್ಪಾ, ಸಂತೆ ನೆರೆಯೋದಕ್ಕೆ ಮುಂಚೆ ಗಂಟು ಕಳ್ಳರು.  ಬರೀ ದೆವ್ವನಂತ ಸೊಳ್ಳೆ, ನೊರಜುಲ, ಕಚ್ಚಿದರೆ ಬ್ರಹ್ಮಾಂಡ ಉರಿ ತುರಿಕೆಯ ಸಣ್ಣ ಸ...

ಸಾವಕಾಶವಾಗಿ ಕಪ್ಪು ಬೆಕ್ಕು ಬಳಿಸಾರುತ್ತದೆ ಎಂದೂ ಮಿಡಿಯದ ಸ್ಥಾಯಿಗಳಲ್ಲಿ ತಂತಿ ಕಂಪಿಸಿ ಅಪರಿಚಿತ ನಾದಗಳ ಹೊರಡಿಸುತ್ತವೆ ಮೂಲೆಗುಂಪಾಗಿದ್ದ ಅಳುವುಗಳು ಬಿಕ್ಕುತ್ತವೆ ಹತ್ತಿಕ್ಕಿದ್ದ ಅನುಭವಗಳು ಬಯಲಾಟವಾಡುತ್ತವೆ ಕಾಣದ ಹಕ್ಕಿಗಳ ಕೇಳದ ಹಾಡು ಕೇಳ...

ಇಲಿಗಳನ್ನು ಕೊಲ್ಲಲು ಹಲವು ಉಪಾಯಗಳಿದ್ದರೂ ಅತ್ಯಂತ ಫಲಪ್ರದವಾದ್ದೆಂದರೆ ಇಲಿಬೋನು. ರೂಮಿನಲ್ಲಿ ಕೂಡಿಹಾಕಿ ಓಡಿಸಿ ಕೊಲ್ಲುವುದರಿಂದ ರಾತ್ರಿಯ ನಿದ್ದೆ ಹಾಳಾಗುತ್ತದೆ.  ಸುಸ್ತಾಗುವಿರಿ, ಇನ್ನು ಪಾಷಾಣದಿಂದ ಬರೇ ಇಲಿಯಲ್ಲ, ನಿಮ್ಮ ಪ್ರೀತಿಯ ಬೆಕ್ಕೂ...

ಈ ಕೆರೆಯ ನೀರಲ್ಲಿ ಮುಖ ನೋಡಿಕೊಳ್ಳುತ್ತಾ ಮತ್ತೊಂದು ವರೆ ಬೆಳ್ಳಿ ಒಪ್ಪವನ್ನು ದಪ್ಪಗೆ ಹಚ್ಚಿ ಮೇಕಪ್ ಮಾಡಿಕೊಳ್ಳುತ್ತಾ ನಾಳೆಯ ಹೋಳಿ ಹುಣ್ಣಿಮೆಯ ಮೆಗಾ ಷೋಗೆ ತಯಾರಾಗುತ್ತಿದ್ದಾನೆ ಆಕಾಶದಲ್ಲೀಗ ಶಶಿ: ಇಂದು ಚತುರ್ದಶಿ. *****...

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು ನನ್ನ...

ಇತಿಯೋಪಿಯಾದಲ್ಲಿ ಕ್ಷಾಮ ಬಂದು ಇಡೀ ಒಂದು ಗ್ರಾಮವೇ ಬಲಿಯಾಯಿತೆಂದು ಬೆಳಗ್ಗಿನ ಕಾಫಿ ಹೀರುತ್ತ ಪತ್ರಿಕೆಯಲ್ಲಿ ಓದಿ ಕೇಳಿದೆಯೇನೆ ಸುದ್ದಿ ಎಂದು ಉದ್ಗರಿಸಲಿಲ್ಲ. ದೇವರಿಗೆ ದೀಪ ಹಚ್ಚಿ ನೀನು ಪ್ರಾರ್ಥಿಸುತ್ತಿದ್ದುದು ಏನು ಎಂದು ಕೇಳಲಿಲ್ಲ. ಮನೆಯೆ...

ನಿನ್ನೆ ಮುಸ್ಸಂಜೆಯಿಂದ ಮುಂಜಾವಿನವರೆಗೂ ಆಕಾಶದಲ್ಲಿ ರಾರಾಜಿಸಿದ ಚಂದ್ರ ಇಂದು ನಿಧಾನಕ್ಕೆ ಮೈ ಮುರಿದು ಎದ್ದು ಬರುತ್ತಿದ್ದಾನೆ ನೋಡಿ ಅವನು ಹಾಗೇ;  ಒಂದೊಂದು ಮಿಥಿಗೊಂದೊಂದು ಮೋಡು, ಕ್ಷಣಕ್ಷಣಕ್ಕೊಂದು ಮೋಡಿ, ಇಂದು ಇವನಿಗೆ ಏನಾದರೂ ಆಗಿರಬಹುದು ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...