
ಕವಿದ ಮೋಡ ಕಪ್ಪಾದರೇನು ಭಾವನೆಗಳು ಬರಡಾಗವು ಮೋಡಗಳ ಮರೆಯಲ್ಲಿ ಜೀವನವಿಹುದು ಅಪಾರ || ತಿಳಿಯಾದ ಗಾಳಿ ಬೀಸಲು ಬಿಳುಪಾಗದೆ ಮೋಡ ಕಾರಿಮೋಡ ಸರಿದು ಬಾರದಿರನೇ ಚಂದಿರ || ಕಷ್ಟಗಳು ಕಳೆದು ಸುಖಶಾಂತಿ ಬಾರದೇನು ಯಾರಿಗೂ ಯಾರಿಲ್ಲಾ ನಿನ್ನ ಬಾಳಿದು ನಿನ್...
ನಾನು ನಿನ್ನ ಪ್ರೀತಿ ಕನಸನು ಹೆಣೆಯುವ ಹಕ್ಕಿ ಮನಸಿನ ಭಾಷೆಯ ಚಿತ್ತಾರ ಬಿಡಿಸುವ ಚುಕ್ಕಿ || ಪ್ರೇಮದ ಬಲೆಯನು ಬೀಸಿ ವಿರಹದ ಎಳೆಯನು ಕಟ್ಟಿ ಸ್ವಚ್ಚಂದ ಭಾವದ ಪ್ರೀತಿಯ ಸೆಳೆಯುವ ಹಕ್ಕಿ || ನಿನ್ನನ್ನು ಕೂಡಿ ಗಗನಕೆ ಹಾರಿ ಹಾರುತ ಹಾರುತ ಮೌನ ಮಾತಾಗ...
ಹೇಗೆ ನಂಬಲಿ ನಿನ್ನ ಕೃಷ್ಣಾ ರಾಧೇಯ ಸಖಿಯರಗೂಡಿ ನೀನು ಸರಸವಾಡುವುದು ಸರಿಯೇನು || ನಿನ್ನ ಅಂತರಂಗ ಬಲ್ಲೇ ನಾನು ಕಪಟ ನಾಟಕ ಸೂತ್ರಧಾರಿ ನೀನು || ವಿರಹ ತಾಪಸಿಯ ಅರಿತು ನೀ ಮನವ ಚಿವುಟುವುದು ಸರಿಯೇನು || ನಿನ್ನೊಲುಮೆ ಇಲ್ಲದೆ ಬಾಡದ ಹೂ ಬಾಡಿದರೆ ...
ಏಕೆ ನೀನು ಕಾಡುವೆ ನನ್ನನ್ನು ಪ್ರೇಮ ಪರಾಗದ ಹೂವೆ ಪರಮಾರ್ಥದ ಲೇಪ ನಿನಗಲ್ಲವೇ ಮಾನಸ ಸ್ಪರ್ಶದ ಚೆಲುವೆ || ಶಿವನಿಗಿಲ್ಲದ ಹರಿಗಿಲ್ಲದ ನೀತಿ ಕೃಷ್ಣ ಅವತಾರಿ ಬಲ್ಲವನು ರಾಧೇಯ ಪ್ರೇಮ ಸಲ್ಲಾಪ ನಿನ್ನ ಸ್ಪರ್ಶವೇ || ಬಿಡಿಸಲಾರದ ಬಂಧನ ಜನುಮ ಜನುಮವು ...
ಪ್ರೀತಿ ಎಂಬ ಹೂದೋಟದಲ್ಲಿ ರಾಮನೆಂಬ ಗಿಳಿಯ ಅಡಗಿಸಿಕೊಂಡೆ || ಪ್ರೀತಿ ಎಂಬ ಹೊನ್ನ ಪಂಜರದಲ್ಲಿ ಮುದ್ದು ಮಾಡಿ ಬಚ್ಚಿಟ್ಟುಕೊಂಡೆ || ಚಂದಾದ ಗಿಳಿಯು ಬೆಳ್ಳಿ ಚಂದಕ್ಕಿ ಆಡುವ ಚಂಚಲೆ ನನ್ನ ಗಿಳಿಯು || ಬಾನಂಚಿನ ಸೆರೆಯ ಹೂ ತಾರೆಯಂತೆ ಬಿಟ್ಟರೆ ಹಾರಾ...
ಬಿನ್ನಾಣಗಿತ್ತಿ ಈ ಮೋಡಗಾತಿ ಚಂದ್ರನ ಮರೆಮಾಡಿ ಎನ್ನ ಮನಸನು ಕದಡಿದಳು || ದಿನವು ದಿನವು ನೋಡಿ ನಲಿದಂಥ ಮನವು ಒಂದು ಕ್ಷಣವು ನೋಡದೆ ನಿಲ್ಲದು ನಿಲ್ಲದೆ ಸಾಗದು ||ಬಿ|| ಏಕೆ ಇಂದು ಹೀಗಾಯ್ತೋ ನಾ ಕಾಣೆ ಸವತಿ ಕಾಟ ಕರ್ಮ, ಬಂದಲೇ ಮಾಟಗಾತಿ ||ಬಿ|| ಮ...
ನಿನ್ನೊಲುಮೆಯಲಿ ನಾನಿರುವೆ ನನಗಾಸರೆಯಾಗಿ ನೀನಿರುವೆ ಬದುಕುವ ಸುಂದರ ಕಲೆಯನ್ನು ಕಲಿಸಿದ ಕಲೆಗಾರ ನೀನು || ಕಡಲ ತೀರದ ದೋಣಿಯಲಿ ಕುಳಿತು ದಾರಿಯನು ತೋರಿ ದಡವ ಸೇರಿಸಿದ ಅಂಬಿಗ ನೀನು || ಸೂಜಿ ದಾರ ಎಂಬ ಬದುಕಿಗೆ ದಾರಿಯ ತೋರುತ ದಾರಕ್ಕೆ ಹೂವ ಪೋಣಿ...
ಹದಿನಾರರ ಹರೆಯ ಬೆಡಗಿ ನೀನು ಮಾನಸಕಂಡ ಗೆಳತಿ ನಿನ್ನ ಮನದ ಪಯಣವೆಲ್ಲಿಗೆ? ನಾಲ್ಕು ದಿಕ್ಕು ನಾಲ್ಕು ದೋಣಿ ಬದುಕಿದು ಮಹಾಸಾಗರ ಯಾವ ದಿಕ್ಕು ಯಾವ ದೋಣಿ ಎತ್ತ ನೋಡೆ ಸುಂದರ || ಕನಸು ಕಟ್ಟಿ ಹೊರಟೆ ಏನು ದಡವ ಹೇಗೆ ಮುಟ್ಟುವೆ ಮೊರೆವ ಶರಧಿ ಮನದಿ ಕಷ್...
ಕಳೆದವು ಹತ್ತು ದಿನ ನಿಮ್ಮ ಕಾಯುತಲಿ ಎನ್ನರಸ ಬಾಗಿಲ ಬಳಿಯಲಿ ನಿಂತೇ ನಿಮ್ಮಯ ಬರವನು ನೋಡುತ್ತ || ಬರುವೆನೆಂದು ಹೇಳಿ ಹೋದ ನಿಮ್ಮನು ಮರಳಿ ಬರುವಿರೆಂದು ಕಾದೆನು ಬರುವ ಅವರಿವರ ಕಣ್ಣಾಲಿಸಿ ನೋಡಿದೆ ಪರಿತಪಿಸಿದೆ || ಮೊದಲ ರಾತ್ರಿಯ ನಗುಮೊಗದ ಚಂದದ...








