ಮುಂಗೋಳಿ ಕೂಗಿದ್ದೇ ತಡಾ… ಸಿವಚಾಮ್ಗಿಳು ದಿಡಿಗನೆದ್ದ್ರು, ಯಿಡೀ ರಾತ್ರೆಲ್ಲ ಕೆಟ್ಕೆಟ್… ಕನಸ್ಗುಳು ಬಿದ್ದು… ಬಿದ್ದೂ… ನಿದ್ದೆ ಕಟ್ಕಾಟ್ಟಾಗಿ, ಮೇಲಿಂದ್ಮೇಲೆ…  ಯಗ್ರಿ… ಯಗ್ರಿ… ಬಿದ್ರು.. ಕೇ...

ರಕ್ಷಣೆ ಇರಲೆಂದು, ಕಾಲಿಗೆ ಮೆಟ್ಟು ಧರಿಸಿಹೆನು ದೇವಾಽ ಹೃದಯ ಚುಚ್ಚುವ, ಮಾತಿಗೆ ಏತರ ಮೆಟ್ಟು ಧರಿಸಲಿ ದೇವಾಽ…? ಬಂಧುಗಳ ಕೊಟ್ಟೆ, ನೋವನೂ ಇಟ್ಟೆ ದೇವಾಽ… ಸಂಬಂಧಿಕರಿಂದ ಕೆಟ್ಟೆ, ಕೈಗೆ ಖಾಲಿ ಚಿಪ್ಪನಿಟ್ಟೆ ದೇವಾಽ… ಮಾತಿಗೂ...

ಅಪ್ಪ ಪ್ರತಿ ಬಿಂಬ ಅಮ್ಮ ಗತಿ ಬಿಂಬ ಮಕ್ಕಳು ‘ಕರಿ’ ಬಿಂಬ! ೧ ‘ಹೌದು! ಅಂದವರ್‍ಯಾರು? ನಮ್ಮನ್ನು ತಬ್ಬಲಿಗಳೆಂದು? ಅಪ್ಪ, ಅಮ್ಮರಿಲ್ಲದಾ ಅನಾಥರೆಂದು?!’ ೨ ಅಕ್ಕನ ನೋಡು: ಅಪ್ಪನ ಹೋಲಿಕೆ! ಮಾತು, ಕಥೆ, ವ್ಯಥೆ… ಎಲ್ಲ ಟಂಕಸಾಲೆಯಂತೆ! ನೋಟುಗ...

ಬದುಕೆಂದರೆ… ಹೀಗೇ… ಬಳ್ಳಾರಿ ಬಿಸಿಲಿನಾ ಹಾಗೇ… ‘ಉಸ್ಸೆಪ್ಪಾ’,,, ಎಂದರೂ, ಮುಗ್ಳಾಗ ‘ಜಟ ಜಟ’ ಇಳಿದರೂ ಬಿಡದು! ಝಣ ಝಣ… ಹಲಗೆ ಬಡಿತದ, ಬಿಸಿಲಿನ, ಬಿಸಿ ಬಿಸಿ ಹವೆಯ ಸಂಪು! ಮೈಮನ ಹಾವಿನಂಗೆ, ಮುಲು ಮುಲು ಹರಿದಾಡುವ, ...

ಜೀವನ: ಬಣ್ಣ ಬಣ್ಣದಾ ಬಾಲಂಗೋಚಿ! ಗಾಳಿಲಿ, ತೇಲಿ ತೇಲಿ ಸಾಗಿದೆ, ಪಟ ಪಟನೇ ಜೀವನಪಟದಿ- ಬದುಕು ಭಾರ! ದಾರದಲಿ ಸೂತ್ರವಿದೆ, ಜೀವವಿದೆ, ಮರೀಬೇಡ! ಜಗಕೆ ಸೂತ್ರವುಂಟು, ಜೀವ ಉಂಟು ನಂಬಬೇಡ. * ಹಾರಿ ಹಾರಿ, ರೆಕ್ಕೆ ಬಂದ, ಹಕ್ಕಿಯಾಗಲು ಸಾಧ್ಯವೇನು? ತ...

ಯುಗ ಯುಗಾದಿ ಬಂದಿದೆ…, ಬೆಲೆ ಏರಿಕೆ ತಂದಿದೆ ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ. ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ! ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ. ೧ ಒಲೆ ಮೇಲಿನ, ಹೊಸತು ಮಡಿಕೆ, ಕುದಿವ...

ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು? ಬಾರಯ್ಯ ಬಾ!! ಶಕಪುರುಷ… ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?! ಈ ನಿನ್ನ ಬರುವಿಕೆಯಲ್ಲಿ?! ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ! * ಬರುವೆ! ಬ...

ದುರ್ಗುವ್ವನ ಮನ್ಮುಂದೆ….. ದ್ವಡ್ವರ್ಸುಣ್ವರು….ವುಡ್ಗುರ್ಪುಡೆಂಬ್ದುಂಗೆ ಸೇರ್ದ್ರು. ಮಾಳ್ಗ್ಮೆನ್ಗೆಳೇನು?…….ಯಿಡೀ ಪೂರ್ಕೇರಿಯೇ ಬಿಸ್ಬಿಸಿ…. ವಗೆಯೇಳ್ತೋಡ್ಗಿತು. ಪಡ್ಸಾಲೆಯಲಿ, ಬಲ್ಗಾಡ್ಪೆಡ್ಗೆ ಕಲ್ನಿ ವಳ್...

ಗುಡಿ ಬೇಡ, ದೈವ ಬೇಡ ಅಪ್ಪ ಅಮ್ಮ ದೇವರು! ಮಡಿಬೇಡ, ಪೂಜೆ ಬೇಡ ದುಡಿಮೆ ನಮ್ಮ ಪೂಜೆ. ೧ ಆಸ್ತಿ ಬೇಡ, ಆಸೆ ಬೇಡ ದೇಶ ನಮ್ಮ ಆಸ್ತಿ. ದ್ವೇಷ ಬೇಡ, ಕೋಪ ಬೇಡ ಶಾಂತಿ ನಮ್ಮ ಮಂತ್ರ. ೨ ಸತ್ಯ ಶಾಂತಿ, ತ್ಯಾಗ ಮೂರ್ತಿ ಗಾಂಧಿ ನಮ್ಮ ತಾತ. ಬುದ್ಧ, ಬಸವ, ಸ...

ಯಾರಿಗೂ ಕೇಳಿಲ್ಲ ಹೇಳಿಲ್ಲ ನಿಂತ ನಿಲುವಲಿ ಎಲ್ಲರಿಗೂ ಕಾಣುವಂತೇ… ವಿಧಾನಸೌಧದಾ ಎದುರಲ್ಲೇ… ಪ್ರತಿಮೆಯಾದರು… ಈ ನಮ್ಮ ಅಂಬೇಡ್ಕರ್‍. ೧ ಪ್ರತಿಮೆಗೂ ಮಿಗಿಲು ಮುಗಿಲು, ಹಗಲು- ವಿಸ್ಮಯ ಪ್ರತಿಭೆ ಅವರದು! ಮಲ್ಲಿಗೆ ಮನಸನು, ವಿಶ...