ಗೆಲುವನ್ನು ವೈಯಕ್ತಿಕ ಸಾಧನೆಯಾಗಿ ಅತಿಶಯೋಕ್ತಿಗಳಿಂದ ಕೊಂಡಾಡುವ ಜನ ಅದೇ ರೀತಿ ಸೋಲನ್ನು ವೈಯಕ್ತಿಕ ಅವಮಾನವಾಗಿ ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ. ಜ್ಞಾನ, ವಿಜ್ಞಾನ, ಕಲೆ, ಉದ್ಯಮ, ಕ್ರೀಡೆ ಮುಂತಾದ ಪ್ರತಿಯೊಂದು ಕ್ಷೇತದಲ್ಲೂ ಇದಕ್ಕೆ ಉದಾಹರ...

ನಾನೆ ದೇವರೋ ನೀನೆ ದೇವರೋ ಅವನು ದೇವರೊ ಅವರು ದೇವರೊ ಅದು ದೇವರೊ ಇದು ದೇವರೊ ಎಲ್ಲ ದೇವರೋ ಅನ್ನ ದೇವರೊ ಆಕಾಶ ದೇವರೊ ಭೂಮಿ ದೇವರೋ ಗಾಳಿ ದೇವರೋ ಕುಡಿವ ನೀರು ದೇವರೋ ಮರವು ದೇವರೊ ಗಿರಿಯು ದೇವರೂ ಹೂವು ದೇವರೊ ಹಣ್ಣು ದೇವರೊ ಇರುವ ಮಣ್ಣು ದೇವರೋ ...

ಮೂರ್ಖ ನಾನು ಅಪರಾಧ ಮಾಡಿರುವೆ ಕ್ಷಮಿಸಿಬಿಡು ನನ್ನನು ನಿನ್ನನು ನಾನು ಕ್ಷಮಿಸುವಂತೆಯೇ ನನ್ನನು ನೀನು ಬಸವಳಿದು ಬೆಂಡಾಗಿ ಕುಳಿತೆ ನೀನು ಬಸವಳಿದು ಬಂಡಾಗಿ ನಿಂತೆ ನಾನು ಚಳಿ ಮಳೆ ಗಾಳಿಯಲಿ ದಿಕ್ಕೆಟ್ಟೆ ನೀನು ಚಳಿ ಮಳೆ ಗಾಳಿಯಲಿ ಕಂಗೆಟ್ಟೆ ನಾನು ...

ಸತ್ಯವು ಸರಳವಾಗಿರುತ್ತದೆ ಎನ್ನುತ್ತಾರೆ, ಆದರೆ ಸರಳವಾದ್ದೆಲ್ಲವೂ ಸತ್ಯವೇ? ಕೆಲವೆಡೆ ಸರಳೀಕರಣವನ್ನು ನಾವು ಒಪ್ಪುವುದಿಲ್ಲ. ಉದಾಹರಣೆಗೆ, ಕತೆ ಕಾದಂಬರಿ ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಅನುಭವವನ್ನು ಸರಳೀಕರಿಸಿ ಬರೆದ ಬರವಣಿಗೆಗಳು ತೆಳುವಾಗಿ ...

ಮಂಜಿಗೆ ನೆನೆಯದ ಮೈಯಿದ್ದರೆ ಅದು ಮೈಯಲ್ಲ ಕರುಣೆಗೆ ಕರಗದ ಮನವಿದ್ದರೆ ಅದು ಮನವಲ್ಲ ಗಾಳಿಗೆ ಅಲುಗದ ಎಲೆಯಿದ್ದರೆ ಅದು ಎಲೆಯಲ್ಲ ಬೆಂಕಿಗೆ ಉರಿಯದ ಹುಲ್ಲಿದ್ದರೆ ಅದು ಹುಲ್ಲಲ್ಲ ಹೂವಿಗೆ ಹಾರದ ಭ್ರಮರವಿದ್ದರೆ ಅದು ಭ್ರಮರವಲ್ಲ ವಸಂತಕೆ ಚಿಗುರದ ಮರವ...

ಕಾಣದ ಕೈಯೆಂದು ಕಾಣದಕೆ ಹಂಬಲಿಸಿ ಹುಡುಕುವಿಯೇತಕೆ ಕಾಣುವ ಕೈ ಕೈಯಲ್ಲವೇ? ತೊಟ್ಟಿಲು ತೂಗಿದ ಕೈ ಅಟ್ಟುಣಿಸಿದ ಕೈ ಮೀಯಿಸಿದ ಕೈ ಬಟ್ಟೆಯುಡಿಸಿದ ಕೈ ತೊಡೆ ಮೇಲೆ ಕೂಡಿಸಿದ ಕೈ ಹಾಲೂಡಿದ ಕೈ ಒರೆಸಿದ ಕೈ ಬರೆಸಿದ ಕೈ ಕರೆದ ಕೈ ಚಾಚಿದ ಕೈ ಅಕ್ಕರೆಯಿಂದ ...

ಮೌರಿಸ್ ಮರ್‍ಲೋ-ಪೋಂಟಿ (೧೯ಂ೮-೬೧) ಮತ್ತು ಜಾನ್-ಪಾಲ್ ಸಾರ್‍ತೃ (೧೯ಂ೫-೮ಂ) ಇಬ್ಬರೂ ಫ್ರಾನ್ಸ್ ಕಂಡ ಇಪ್ಪತ್ತನೆಯ ಶತಮಾನದ ಮಹಾ ಮೇಧಾವಿಗಳು. ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ಒಲವಿದ್ದ ಇವರು ಎಂದೂ ಆ ಪಕ್ಷದ ಸದ್ಯಸ್ಯರಾಗಿರಲಿಲ್ಲ-ಕಮ್ಯೂನಿಸ್ಟ್ ಪ...

ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ ಆವರಿಸಿದ ಸುಗಂಧವೇ ನಿನ್ನ ಹೆಸರು ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು ಸಂತೆಬೀದಿಗಳಲ್ಲಿ ಜನರ ನಡುವಿರುವಾಗ ಬೆಳುದಿಂಗಳಂತೆ ಬಂದ ಚೆಲುವೆ ನಿದ್ದೆ ಎಚ್ಚರಗಳಲಿ ಸ್ವಪ್...

ಎಲ್ಲಿಂದ ಬಂತೀ ಸುಮಧುರ ಗಾನ ಎಲ್ಲಿಂದ ಬಂದನೀ ಯಕ್ಷ ಎಲ್ಲಿಂದ ಬಿದ್ದ ಸುರ ಸ್ವಪ್ನ ಎಲ್ಲಿಂದ ತೆರೆದ ಗವಾಕ್ಷ ಇನ್ನು ಭಾಗವತ ನಾನೆ ಇನ್ನು ಜಾಗಟೆ ನಾನೆ ಚಂಡೆಮದ್ದಲೆ ನಾನೆ ಹಾಡು ಅರ್ಥವು ನಾನೆ ಕೋಡಂಗಿ ಕುಣಿತ ಗೋಪಾಲ ಕುಣಿತ ಎಲ್ಲ ಹೆಜ್ಜೆಗಳ ಇಡುವವ...

ಇಂಗ್ಲಿಷ್ ಕವಿ ವಿಲಿಯಮ್ ವರ್ಡ್ಸ್‌ವರ್ತ್‌ ನಿಸರ್ಗದ ಕವಿ ಎಂದು ಪ್ರಸಿದ್ಧ. ಆದರೆ ಆವನು ಮನುಷ್ಯರ ಕುರಿತಾಗಿ, ಅದೂ ಮುದುಕರ, ಮಕ್ಕಳ, ಅನಾಥರ ಕುರಿತಾಗಿ ಬರೆದಷ್ಟು ಕವಿತೆಗಳನ್ನು ಬಹುಶಃ ಅವನ ಕಾಲದ ಇತರರು ಯಾರೂ ಬರೆದಿರಲಾರರು. ನಿಸರ್ಗದಲ್ಲಿ ದೈವ...

1...1819202122...66