
ಕನಸಿಳಿಯದ ಗಂಟಲಿನಲಿ ನೋವುಗಳ ತುಂಬಿಸಿದಂತೆ! ಒಡಲಾಳದೊಳಗೆ ಮಥಿಸಿ ಮಥಿಸಿ ಲಾವಾರಸವಾದ ಅಮೂರ್ತ ನೋವುಗಳು ಸಿಡಿಯಲಾಗದ ಜ್ವಾಲಾಮುಖಿಯಂತೆ! ಧ್ವನಿಯಡಗಿಸಿದ ಕಂಠವಾಗಿ ಹನಿಯಡಗಿಸಿದ ಕಡಲಾಗಿ ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ ನೋವುಗಳು ಮಾತಾಗುವುದೇ ಇ...
ಅರೆ, ಈಗ ಈ ಹಕ್ಕಿಯೂ ಹಾರಬಲ್ಲದು! ನಿಮ್ಮೆಲ್ಲರಂತೆ ನಿಮ್ಮ ಆಕಾಶಕ್ಕೆ! ನಿಮ್ಮದೇ ಆಗಿದ್ದ ಕನಸಿನಾ ಲೋಕಕ್ಕೆ! ರಂಗುರಂಗಿನ ನವಿಲುಗರಿಯ ಸಹಸ್ರಾಕ್ಷಿ ಕಂಡಿದ್ದು ಆ ಕನಸೋ? ಈ ಕನಸೋ? ಕೇಳುವುದಾರ ಸಾಕ್ಷಿ? ಕನಸುಗಳು ಕನಸುಗಳೇ ಅವುಗಳಲೆಂತಾ ಆಯ್ಕೆ? ಕಂ...
ಒಂದಿಷ್ಟು, ಒಂದಿಷ್ಟೇ ಇಷ್ಟು ಹಸಿಮಣ್ಣು ನೀಡು ಗೆಳೆಯ ನನ್ನದೇ ಕಲ್ಪನೆ ಬೆರೆಸಿ ಸುಂದರ ಮನೆಯಾಗುತ್ತೇನೆ ಚಿತ್ರವಿಚಿತ್ರ ಕಲಾಕೃತಿಯಾಗುತ್ತೇನೆ ಮಡಿಕೆ, ಕುಡಿಕೆ, ಕುಂಡವಾಗುತ್ತೇನೆ ಎಲ್ಲಾ ಒಂದಿಷ್ಟೇ ಇಷ್ಟು ಹಸಿಮಣ್ಣಿನಿಂದ! ಒಂದಿಷ್ಟೇ ಇಷ್ಟು ಹಸಿ...
ಶತಶತಮಾನಗಳಿಂದ ನಿನಗ ‘ಅವಳು’ ಅರ್ಥವಾದದ್ದೆಷ್ಟು? ಬರೀ ಇಷ್ಟೇ ಇಷ್ಟು! ಸಾಕಪ್ಪ ಸಾಕು ನಿನ್ನೀ ಕಾಗಕ್ಕ-ಗುಬ್ಬಕ್ಕನ ಕಥೆ ‘ಅವಳ’ ಅಂಗಾಂಗ ವರ್ಣಿಸುತ್ತಾ ನಿನ್ನದೇ ಅತೃಪ್ತ ಕಾಮನೆ ತಣಿಸುತ್ತಾ ಅಡ್ಡಹಾದಿಗೆಳೆವ ರಸಿಕತೆ! ಆ ಸಂಸ್ಕೃತ ಕವಿಗಳ ಅಪರಾವತಾ...
ಮೊದಮೊದಲು ಎಲ್ಲವೂ ಹೀಗಿರಲಿಲ್ಲ ಹೌದು ಎಲ್ಲವೂ ಹೀಗಿರಲಿಲ್ಲ! ಭಾವುಕ ಕವಿಯ ಭಾವಗೀತೆಗಳಂತೆ ಮೊಗ್ಗೊಂದು ತನ್ನಷ್ಟಕ್ಕೇ ಬಿರಿದರಳಿದಂತೆ ಥೇಟ್ ಮಗುವಿನ ನಗುವಂತೆ ಉತ್ಸಾಹದಿ ನಳನಳಿಸುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಹೀಗೆ, ಪ್ರೌಢ ಹೆಣ್ಣಾಗಿದ್ದು...
ಗರದಿ ಗಮ್ಮತ್ತಿನ ಪೆಟ್ಟಿಗೆಯೊಳಗೆ ಎಂಥೆಂತಾ ಚಿತ್ರಗಳು, ವಿಚಿತ್ರಗಳು! ತಾಜಮಹಲು, ಕುತುಬ್‌ಮಿನಾರು ದೊಡ್ಡಾನುದೊಡ್ಡ ಬಾಹುಬಲಿ ಮತ್ತಿನ್ನಿನೇನೇನೋ… ಗರದಿಯವ ಚಕ್ರ ತಿರುಗಿಸಿದಂತೆಲ್ಲಾ ಬದಲಾಗುವ ಬಣ್ಣದೊಂದಿಗೆ ಚಿತ್ರವೂ ಬದಲಾಗುತ್ತದೆ ಒಂದಿ...







