ನಾಲ್ವರು ಅಣ್ಣತಮ್ಮಂದಿರು

ನಾಲ್ವರು ಅಣ್ಣತಮ್ಮಂದಿರಿದ್ದರು. ಅವರದು ಸಾಹುಕಾರ ಮನೆತನ. ಸಾಲಿ ಓದಿದ್ದರು. "ಈಸು ದಿನ ನಾವು ಸಲುಹಿದೆವು. ಇನ್ನು ತಮ್ಮ ಹಾದಿ ತಾವು ಹಿಡೀಲಿ" ಎಂದು ತಾಯ್ತಂದೆಗಳು ನಾಲ್ಕೂ ಮಕ್ಕಳಿಗೆ ನಾಲ್ಕು ಸಾವಿರ ರೂಪಾಯಿ ಮತ್ತು ನಾಲ್ಕು...

ತಂತಾನೆ ನೋಡಿಕೊಂಡರೆ?

ಎಲೆಲ್ಲೆಲ್ಲಿ ನೋಡಿದರೂ ಎಲ್ಲಾರೂ ಕಾಣಿಸ್ತಾರೆ, ನಾನೇ ಮಾತ್ರ ಕಾಣ್ಸೋದಿಲ್ಲ| ನಾನಿದ್ದದ್ದೇ ಸುಳ್ಳೋ? ಹೇಳಾಕಿಲ್ಲ. ಇದ್ದೇನೆಂದ್ರೂ-ಇದ್ದಾಂಗಿಲ್ಲ| ಏಸು ವರ್ಷ ಕಳೆದ್ರೂ ಬೆಳದ್ಹಾಂಗಿಲ್ಲ | ಬುದ್ಧಿಯಂತೂ ಬರಲೇ ಇಲ್ಲ| ಹೋಗಿದ್ರೇ ಬರಬೇಕಲ್ಲ| ಹೋದ ಬುದ್ಧಿ ತಿಂದ ಮುದ್ದಿ...

ಗರಡಿಯ ಗೆಳೆಯರು

ಒಂದೂರಲ್ಲಿ ಕಲ್ಲಣ್ಣ ಮಲ್ಲಣ್ಣ ಎಂಬ ಇಬ್ಬರು ಗರಡಿಯಾಳುಗಳು, ಸಮ ವಯಸ್ಕರು, ಸಮಾನಶೀಲರು ಆಗಿದ್ದರು. ಅವರ ಸ್ನೇಹವೇ ಸ್ನೇಹ, ಹಾಲು ಸಕ್ಕರೆ ಬೆರೆತಂತೆ. ದಿನಾಲು ಗರಡಿ ಮನೆಯಲ್ಲಿ ಕೊಡಿಯೇ ಸಾಮು - ಬೈಠಕುಗಳಲ್ಲದೆ ಲೋಡು ತಿರುಹುವುದು,...

ಗರತಿ ಸಂಗವ್ವ

ಎಡಗೈಯಲ್ಲಿ ಸಿಂಬೆ, ಬಲಗೈಯಲ್ಲಿ ಕೊಡ ಹಿಡಕೊಂಡು ಸಂಗವ್ವನು ನೀರು ತರಲು ಹೊಳೆಗೆ ಹೊರಟಿದ್ದಾಳೆ. ಆ ದಾರಿಯು ಅರಮನೆಯ ಮುಂದೆ ಹಾದು ಹೋಗುವದು. ಕಿತ್ತೂರದೊರೆಯು ಅರಮನೆಯಲ್ಲಿ ಕುಳಿತಲ್ಲಿಂದಲೇ ಸಂಗಮ್ಮನನ್ನು ಕಂಡು ಎದ್ದು ಬಂದು ಕೇಳಿದನು -...

ವಚನ ಸಂಪತ್ತು

ಜೀವನದ ನೆನಹುಗಳ ಮನದಿ ಮೆಲುಕಾಡಿಸಲು ನೀನಿತ್ತ ವಚನಗಳ ನುಡಿಗೆಕುಲುಕಾಡಿಸಲು || ವಚನ ದೇಗುಲದಲ್ಲಿ ಕಂಗೊಳಿಸುತಿದೆ ಶಿಲ್ಪ ವಚನವೊಂದರಲಿ ಕಂಡುಬರುತಿದೆ ಕಲ್ಪ || ವಚನವೆಂದರೆ ಒಂದು ಗೊಂಚಲಿನ ಸವಿದ್ರಾಕ್ಷಿ ನುಡಿನುಡಿಗು ರಸದುಂಬಿ ಬೀಗಿನಿಂತಿದೆ ಸಾಕ್ಷಿ|| ಕನ್ನಡದ...

ಮೋಡಿಕಾರ

ಮೋಡಿಕಾರ ಮುತ್ತಯ್ಯನ ಚೀಲದಿ ಅಯ್ದೆಂದರೆ ಅಯ್ದೇ ಒಡವೆಗಳು ಹುಲ್ಲು ಕಡ್ಡಿಗಳ ಕಟ್ಟೊಂದಿಹುದು ಇನಿತರಿಂದಲೆ ಬೆರಗಿನಾಟವನು ಹೂಡಿಹನು ವಿಧ ವಿಧದ ರೀತಿಯಲಿ ಅಯ್ದೊಡವೆಗಳ ಬೆರಸಿ ಚಿನ್ನವನು ಮಾಡಿಹನು ಮಣ್ಣುಗಳ ಮಾಡಿಹನು ರತ್ನ ವಜ್ರಾದಿಗಳ ತಾಮ್ರ ತವರಿದ್ದಲಿಯ...

ಒಂದು ಹಾಡು ಒಂದು ಕಥೆ

ಒಂದೂರಿನಲ್ಲಿ ಒಬ್ಬ ಗೃಹಿಣಿಯಿದ್ದಳು. ಆಕೆಗೆ ಒಂದು ಕಥೆ ಗೊತ್ತಿತ್ತು.  ಒಂದು ಹಾಡು ಬರುತ್ತಿತ್ತು. ಆದರೆ ಅವಳು ತನಗೆ ಗೊತ್ತಿದ್ದ ಕಥೆಯನ್ನು ಯಾರಮುಂದೆಯೂ ಹೇಳಿದವಳಲ್ಲ. ತಾನು ಕಲಿತ ಹಾಡನ್ನು ಯಾರಮುಂದೆಯೂ ಹಾಡಿದವಳಲ್ಲ. ಆಕೆಯ ಮನಸ್ಸಿನಲ್ಲಿ ಸೆರೆಸಿಕ್ಕಿ...

ಮುಗಿಲ ಜೇನು

ಮರದ ಕೊಂಬೆಗೆ ಒಂದು ತೊಟ್ಟಿಲವ ಕಟ್ಟಿಹುದು ತೊಟ್ಟಿಲಲಿ ಆಡುತಿದೆ ಕೈಕಾಲುಗಳ ಬಿಚ್ಚಿ ಈಗ ಕಣ್ದೆರೆದಿರುವ ಹೊಚ್ಚ ಹೊಸ ಎಳೆಯ ಕೂಸು || ಮರದ ಮೇಲ್ಬದಿಯಲ್ಲಿ ಮರಜೇನು ಹುಟ್ಟಿಹುದು ದೇವರಾಯನ ಕರುಣೆ ಯಿಂದ ಹುಟ್ಟಿಗೆ ಸಣ್ಣ...

ಪಾಪಾತ್ಮ ರಾಜ

ಪಾಪಾತ್ಮ ರಾಜನ ರಾಜ್ಯದಲ್ಲಿ ಸಂಪತ್ತು ಬಹಳವಿತ್ತು. ಅದೆಲ್ಲ ಅರಮನೆ, ದಂಡು, ಪರಿವಾರ ಅವುಗಳಿಗೇ ಖರ್ಚಾಗಿ ಬಿಡುತ್ತಿತ್ತು. ಆದರೆ ರಾಜನಿಗೆ ಹಣವನ್ನು ಕೂಡಹಾಕಬೇಕೆಂಬ ಹವ್ಯಾಸ ಬಹಳ. ಅದಕ್ಕಾಗಿ ಅವನು ಹೆಂಡತಿ, ಮಕ್ಕಳು, ರಾಜ್ಯ ಬಿಟ್ಟುಕೊಟ್ಟು ಕೈಯಲ್ಲಿ...

ಜಂಬುನೀರಲ

ಹೊತ್ತು ಹೊರಟರೆ ಎಳ್ಳು ಅಮಾಸಿ. ಹೊಲಕ್ಕೆ ಚರಗ ಒಯ್ಯಬೇಕು. ಆ ಕಳಶಟ್ಟಿಯವರ ಮನೆಯಲ್ಲಿ ಏಳುಜನ ನೆಗೇಣಿಮಕ್ಕಳು.  ಅವರು ಇಡಿಯರಾತ್ರಿ ನಿದ್ರಯಿಲ್ಲದೆ ಕೆಲಸಮಾಡಿದರು. ಒಲೆ, ಅಡಿಗೆಮನೆ ಮೊದಲು ಮಾಡಿ ಇಡಿಯ ಮನೆಯನ್ನು ಸಾರಿಸುವುದು. ಒತ್ತಲಕ್ಕೆ ಬೆಂಕಿಹಾಕಿ...