ಹನಿಗವನಭಂಡ‘ದುಡಿದು ತಿನ್ನುವವ ದೊಡ್ಡವ ಬಡಿದು ತಿನ್ನುವವ ಭಂಡರವ’ ಹೀಗೊಂದು ಲಾರಿ ಹಿಂಬದಿಯ ಬರಹ; ವಾಸ್ತವದಲ್ಲಿ ಆಗಿದೆ ಬಡಿದು ತಿನ್ನುವವ ದೊಡ್ಡವ ದುಡಿದು ತಿನ್ನುವವ ಭಂಡರವ! *****...ಪಟ್ಟಾಭಿ ಎ ಕೆDecember 21, 2017 Read More
ಹನಿಗವನಲಂಚಮಂಚಕ್ಕೆ ಇರುವಂತೆ ಲಂಚಕ್ಕೂ ನಾಲ್ಕು ಕಾಲುಗಳು; ಕೊಡು – ತಕ್ಕೊಳ್ಳುವವರು ಇರುವವರೆಗೆ! *****...ಪಟ್ಟಾಭಿ ಎ ಕೆDecember 14, 2017 Read More
ಹನಿಗವನಮನ್ನಣೆಮಣೆ ಹಾಕಿದರೆ ಮನ್ನಣೆ ಕೊಟ್ಟಂತೆ; ಮನ್ನಣೆ ಕೊಟ್ಟರೆ ಮಣೆ ಹಾಕಿದಂತೆ! *****...ಪಟ್ಟಾಭಿ ಎ ಕೆDecember 7, 2017 Read More
ಹನಿಗವನಸೊಳ್ಳೆಬಳ್ಳ ರಕ್ತ ಕೊಳ್ಳೆ ಹೊಡೆವ ಸೊಳ್ಳೆ ಎದುರು ಮಾನವನ ಯತ್ನ ಬರೀ ಜೊಳ್ಳು! *****...ಪಟ್ಟಾಭಿ ಎ ಕೆNovember 30, 2017 Read More
ಹನಿಗವನಮಿಲನನಯನಗಳ ಮಿಲನದಲ್ಲಿ ಅಯನಗಳ ಕಳೆದುದು ತಿಳಿಯಲೇ ಇಲ್ಲ! *****...ಪಟ್ಟಾಭಿ ಎ ಕೆNovember 23, 2017 Read More
ಹನಿಗವನವ್ಯತ್ಯಾಸರೇಟು ಮತ್ತು ಸಿಗರೇಟು ಎರಡರದ್ದೂ ಏಕಮುಖ ಸಂಚಾರ; ರೇಟು ಗಗನಕ್ಕೆ ಸಿಗರೇಟು ದಹನಕ್ಕೆ! *****...ಪಟ್ಟಾಭಿ ಎ ಕೆNovember 16, 2017 Read More
ಹನಿಗವನಸ್ತ್ರೀಸ್ತ್ರೀ ಸಾಂಸಾರದಲ್ಲಿ ಮೇಸ್ತ್ರಿ; ಶಿಸ್ತು ಮುರಿದಾಗ ಮಾಡುವಳು ಇಸ್ತ್ರಿ! *****...ಪಟ್ಟಾಭಿ ಎ ಕೆNovember 9, 2017 Read More
ಹನಿಗವನಚಟಚಟ ಮತ್ತು ಚಟ್ಟ ‘ಟ’ ಒತ್ತಕ್ಷರದ ವಿಶೇಷ; ಚಟ ಬದುಕಿರುವವನ ನಂಟು ಚಟ್ಟ ಸತ್ತವನ ಗಂಟು! *****...ಪಟ್ಟಾಭಿ ಎ ಕೆNovember 2, 2017 Read More
ಹನಿಗವನಪ್ರೇಮಪ್ರೇಮವೆಂಬುದು ಹಾಸ್ಯವಲ್ಲ ಅದು ಮನದಂತರಾಳದ ಲಾಸ್ಯ; ಅಂತಃಕರಣದ ವಿಲಾಸ! *****...ಪಟ್ಟಾಭಿ ಎ ಕೆOctober 26, 2017 Read More
ಹನಿಗವನಚಂದ್ರಚಂದ್ರನೂ ಹಲವು ರಾಜಕಾರಣಿಗಳಂತೆ ಪಕ್ಷಾಂತರ ಪ್ರೇಮಿ; ತಿಂಗಳರ್ಧ ಶುಕ್ಲ ಪಕ್ಷ ಮಿಕ್ಕರ್ಧ ಕೃಷ್ಣ ಪಕ್ಷ! *****...ಪಟ್ಟಾಭಿ ಎ ಕೆOctober 19, 2017 Read More