ಹನಿಗವನ ತೆರೆ February 9, 2013June 14, 2015 ಬುವಿಯ ಹೆಗಲಿಗೆ ಬಾನ ಮುಗಿಲು ಇಳಿಬಿಟ ತೆರೆ ಮಾಯದ ಮುಸುಕಿನ ಹೊರೆ ರವಿ ಮೂಡಿ ಬರೆ ಬೆಳಕಿನ ಧರೆ *****
ಹನಿಗವನ ತೀರ್ಮಾನ February 2, 2013June 14, 2015 ಸಾವು ಬಾಳಿನ ಕೊನೆಯ ತೀರ್ಮಾನ ಶಾಂತಿ ಬಹುಮಾನ ಸ್ವರ್ಗ ಸೋಪಾನ ****
ಹನಿಗವನ ತಾಳ್ಮೆ January 27, 2013June 14, 2015 ತಾಳಿದವಳು ಬಾಳಿಯಾಳು ತಾಳಿ ಇದ್ದವಳು ಗಂಡು ಗೂಳಿಯ ಅಡಗಿಸಿಯಾಳು *****
ಹನಿಗವನ ಸೃಷ್ಟಿ January 25, 2013June 14, 2015 ಬಹಿರ್ ಸೃಷ್ಟಿ ಬಿತ್ತಿತ್ತು ಬೀಜ ನನ್ನೊಳಗಣ ಅಂತರ್ ದೃಷ್ಟಿ ನೀರೆರೆದು ಹಡೆದಿತ್ತು ಜೀವ ಭಾವ ****
ಹನಿಗವನ ತುಂಬಿದ ಕೈ January 21, 2013June 14, 2015 ಹೋಟೆಲ್ ಸ್ಪೆಷಲ್ ಊಟ? ಮಾಲೀಕನಿಗೆ ಕೈತುಂಬ ದುಡ್ಡು ತಿಂದವನಿಗೆ ಕೈತುಂಬ ಜಿಡ್ಡು ****
ಹನಿಗವನ ಸಿರಿಗಂಟು January 18, 2013June 14, 2015 ಅಕ್ಷರದ ಅರ್ಥಕ್ಕೆ ಬೇಕು ನಿಘಂಟು ಭಾವಾರ್ಥಕ್ಕೆ ಬೇಕು ಹೃದಯದ ಸಿರಿಗಂಟು! ****
ಹನಿಗವನ ಸತ್ಯ January 11, 2013January 5, 2016 ಸತ್ಯ, ಸೂರ್ಯನಂತೆ ನೋಡುವುದು ಕಷ್ಟ ಸತ್ಯ, ಅಗ್ನಿಯಂತೆ ನುಂಗುವುದು ಕಷ್ಟ ಸತ್ಯ, ಬೆಟ್ಟದಂತೆ ದಾರಿ ಸವೆಸುವುದು ಕಷ್ಟ ಸತ್ಯ ಸಾಗರದಂತಾಗಲಿ ಮುಳುಗಿ ಮುಳುಗಿ ತೇಲುವುದು ಒಳಿತು ****
ಹನಿಗವನ ಸಾರ್ಥಕತೆ January 4, 2013June 14, 2015 ಮಲ್ಲಿಗೆ ಸಂಪಿಗೆ ಹೂವಾಗಿ ಬಾಳಿವೆ ಕಣಕಣದಿ ಮಾವು ಬಾಳೆ ಫಲವಾಗಿ ಮಾಗಿವೆ ಕ್ಷಣ ಕ್ಷಣದಿ ನಾ ಕಳೆದೆ ಬಾಳೇಕೆ ಭಣ ಭಣದಿ? ****
ಹನಿಗವನ ಸಂಸಾರ December 28, 2012June 14, 2015 ಹೆಂಡತಿ “ಆಗಲಿ ಬಿಡಿ” ಗಂಡ “ಹೋಗಲಿ ಬಿಡೆ” ಎಂದರೆ ಸಂಸಾರ ಗಾಡಿಯಲಿ ಇಲ್ಲ ಗಡಿಬಿಡಿ *****
ಹನಿಗವನ ಸಲಹೆ December 21, 2012June 14, 2015 ದಿನಕ್ಕೊಂದು ಸೇಬು ವೈದ್ಯದಿಂದ ದೂರ ಇರಿ ದಿನಕ್ಕೊಂದು ಈರುಳ್ಳಿ ಎಲ್ಲರಿಂದ ದೂರ ಇರಿ *****