ಶಂಕೆಯೆಂಬ ಬೆಂಕಿ ಸೋಕಿ

ಶಂಕೆಯೆಂಬ ಬೆಂಕಿ ಸೋಕಿ ಬೇಯುವಾ ಮನ ಮೌನವಾಗಿ ನರಳುತಿದೆ ಉರಿದು ಹೂ ಬನ ಪಚ್ಚೆ ಕಾಡ ನಡುವೆ ಹರಿವ ಸ್ವಚ್ಛಧಾರೆಗೆ ನೂರು ತಿರುವು ನೂರು ಇಳಿವು ಒಲುಮೆ ಬಾಳಿಗೆ! ಜೀವ ಜೀವ ಹಾಡಿ ಹೆಣೆದ...

ನಂಬಬಾರದುದ ನೋಡಿದ ಜೀವ

ನಂಬಬಾರದುದ ನೋಡಿದ ಜೀವದ ನೋವಿಗೆ ಸಮವಿದಯೇ? ಹುಸಿದು ಬೀಳಲು ಪ್ರೇಮದ ಚಪ್ಪರ ಕುಸಿಯದ ಎದೆಯಿದೆಯೇ ಒಲಿದು ಪೂಜಿಸಿದ ಕಲ್ಪವಲ್ಲಿ ಇದು ಒಣಗಿತೇಕೆ ಹೀಗೆ? ಬಯಸಿ ನೆಮ್ಮಿದಾ ಕಾಮಧೇನುವೇ ಬರಡಾಯಿತೆ ಹೇಗೆ? ತೀರಿಹೋಯಿತೇ ಅರೆಚಣದಲ್ಲೇ ಅಪ್ಸರೆಯಲಿ...

ಕಾದು ಕಾದು ಸೀದು ಹೋದೆ

ಕಾದು ಕಾದು ಸೀದು ಹೋದೆ ನಲ್ಲ ನಿನ್ನ ಬಯಸಿ ನನ್ನ ಮರೆತು ಎಲ್ಲಿ ಹೋದೆ ಹೊಸ ಪ್ರೀತಿಯನರಸಿ? ಒಂದೇ ಪ್ರೀತಿ ಮಾತಿಗಾಗಿ ಕಾದೆ ಹಿಂದೆ ದಿನ ದಿನಾ ಹಂಬಲಿಸಿದೆ ನೋಡಲೆಂದು ಮುಟ್ಟಲೆಂದು ಪ್ರತಿಕ್ಷಣ ಒಣಗಿದೆಲೆಯ...

ಏನು ಮಾಡೆನು ನನ್ನ ದೊರೆಗಾಗಿ?

ಏನು ಮಾಡೆನು ನನ್ನ ದೊರೆಗಾಗಿ? ಈ ಹೂವು ಅರಳಿದ್ದೆ ಮುಡಿಗಾಗಿ - ಅವನ ಅಡಿಗಾಗಿ! ಜೀವದ ಮಾತ ಆಡುತ ಸೋತು ಹಾಡಾಗಿ ಹರಿದೇನು ಅವನಲ್ಲಿ ಕಾಣದ ಲೋಕ ತೆರೆಸುವ ಧೀರ ಆಳಾಗಿ ನಡೆದೇನು ಬೆನ್ನಲ್ಲಿ!...

ಏಕೆ ಅವನ ಕಂಡೆನೋ!

ಏಕೆ ಅವನ ಕಂಡೆನೋ ಪ್ರೇಮದ ಸವಿಯುಂಡೆನೋ! ಇಲ್ಲವಾಯಿತದೇ ಗಳಿಗೆ ನನ್ನದೆಲ್ಲವೂ, ನಲ್ಲನನ್ನು ಬಿಟ್ಟು ಮನಸ್ಸು ಹೃದಯ ನಿಲ್ಲವು ನೂರು ಕಡೆಗೆ ಹಾಯುತಿದ್ದ ಹೃದಯ ಇದೇ ಏನು? ನೂರು ರುಚಿಯ ಬಯಸುತಿದ್ದ ಮನಸು ಇದೇ ಏನು?...

ಇನಿಯನೊಲುಮೆಯ ಹುಚ್ಚು

ಇನಿಯನೊಲುಮೆಯ ಹುಚ್ಚು ಕುದಿಯಲ್ಲಿ ಸಿಕ್ಕಿ ಏನಾದೆನೇ ಸಖಿ ಏನಾದೆನೇ! ತೀರದಾಸೆಯ ಬೆಂಕಿ- ಯುರಿಯಲ್ಲಿ ಉಕ್ಕಿ ಪಾತ್ರೆಯಾಚೆಗೆ ಸುರಿದ ಹಾಲಾದೆನೇ! ಮರಳು ಕನಸಿನ ಕೀಲು ಕುದುರೆ ಬೆನ್ನೇರಿ ಏನಾದೆನೇ ಸಖಿ ಏನಾದೆನೇ! ತಾರೆಗಳ ಮೇರೆಗಳ ಮೀರುತ್ತ...

ಯಾರೋ ಬಂದರು ಹಾರಿ

ಯಾರೋ ಬಂದರು ಹಾರಿ ಧಗೆಯ ಕುದುರೆಯನೇರಿ ಉರಿದಾವು ಹೂಮಲ್ಲಿಗೆ - ಬಿಸಿಯುಸಿರಿಗೆ ಬೂದಿಯಾದವು ಮೆಲ್ಲಗೆ ಬೆಂಕಿಯಂಗಾಲಿಂದ ತುಳಿದು ಕೆಂಡವ ಸುರಿದ ಉರಿದು ಹೋದವು ಹೂವು ಚಿಗುರು ಉಕ್ಕಿ ಹೋದವು ಹಾಲು ಹೌಹಾರಿ ಹಾಯೆನಲು ಬಿರಿದಾವು...

ನನ್ನ ಮನವ ಕದ್ದವನೇ ಬಾ

ನನ್ನ ಮನವ ಕದ್ದವನೇ ಬಾ ನನ್ನ ಹರಣ ಗೆದ್ದವನೇ ಬಾ ನನ್ನ ಕೂಡಿ ಕಳೆವ ಗಳಿಗೆಗೆ ಏನೆಲ್ಲವನೂ ಒದ್ದವನೇ ಬಾ ನಿನ್ನ ಎದುರು ಬಿಂಕ ಏನಿದೆ ದೇವರೆದುರು ಶಂಕೆ ಏನಿದೆ? ನಿನ್ನ ಸೇರಿ ಉರಿದು...

ಎಲ್ಲಿ ಹೋದ ನಲ್ಲ?

ಎಲ್ಲಿಹೋದ ನಲ್ಲ? ಚಿತ್ತವ ಚೆಲ್ಲಿ ಹೋದನಲ್ಲ ಮೊಲ್ಲೆ ವನದಲಿ ಮೆಲ್ಲಗೆ ಗಾಳಿ ಸಿಳ್ಳು ಹಾಕಿತಲ್ಲ! ಹರಿಯುವ ಹೂಳಯಲ್ಲಿ - ಫಕ್ಕನೆ ಸುಳಿಯು ಮೂಡಿತಲ್ಲೆ ಜಲ ತುಂಬುವ ಮುಂಚೆ - ಕಟಿಯ ಕೊಡವೆ ಜಾರಿತಲ್ಲೆ! ನಡಿಗೆ...

ಎಲ್ಲಿ ಪ್ರಿಯಕರ ಹೇಳಿ

ಎಲ್ಲಿ ಪ್ರಿಯಕರ ಹೇಳಿ ಯಾರಾದರೂ ಬಾರನೇತಕೆ ಬಳಿಗೆ ಕ್ಷಣವಾದರೂ? ಕದ್ದೊಯ್ದ ನನ್ನೆದೆಯ ಕಣ್ಣಿನಲ್ಲಿ, ಹಗಲು ಬೆರೆಯಿತು ಘೋರ ಇರುಳಿನಲ್ಲಿ ಪ್ರೀತಿ ಮಾತೆಂದೂ ತುಟಿ ದಾಟಲಿಲ್ಲ - ನೋಟ ಒಮ್ಮೆಯೂ ದೀನೆಯನು ಸೋಕಲಿಲ್ಲ ಏಕೆ ಮಾಡಿದ...