ಏತಕೆ ಆಟ ಆಡುವಿ?

ಏತಕೆ ಆಟ ಆಡುವಿ ಭಕ್ತನ ವೇಷ ಹೂಡುವಿ? ಮೈಯ ಮೋಹದ ಕಾಮೀ ಬೆಕ್ಕು ಗುರುಗುಡುತಿದೆ ಒಳಗೆ ಬಿಚ್ಚಿದೆ ಉಗುರ, ಎತ್ತಿದೆ ಪಂಜ ವಿರಾಗಿ ವೇಷ ಹೊರಗೆ ಲೋಭ ಮೋಹಗಳ ಚಿರತೆ, ತೋಳ ತಲೆಯ ಬೋನಿನೊಳಗೆ...

ನನ್ನ ಹಿಂದೆಯೇ ಈ ಗೋಪಿಯರು

ನನ್ನ ಹಿಂದೆಯೇ ಈ ಗೋಪಿಯರು ಸದಾ ತಿರುಗುವುದು ಯಾಕಮ್ಮಾ? ಬೇಡ ಎಂದರೂ ಕೈಹಿಡಿಳೆದು ಗಲ್ಲ ಸವರುವರು ಸರಿಯಾಮ್ಮಾ? ನಾಚಿಕೆ ಇಲ್ಲದೆ ಹೆಣ್ಣುಗಳಮ್ಮಾ ಬಾಚಿ ತಬ್ಬುವರು ಮೈಯನ್ನು, ಕಣ್ಣಿಗೆ ಕಣ್ಣು ಸೇರಿಸಿ ನಗುವರು ಮೆಲ್ಲಗೆ ಕೆನ್ನೆಯ...

ಬೆಳಗಾಗಿದೆ ಮೇಲೇಳೋ ಕೃಷ್ಣಾ

ಬೆಳಗಾಗಿದೆ ಮೆಲೇಳು ಕೃಷ್ಣಾ ಬಿಸಿಲಿಣುಕಿದೆ ಮೇಲೇಳು ತೆರೆದಿದೆ ಮನೆಗಳ ಬಾಗಿಲು - ಹಸು ಕರು ಆಂಭಾ ಎನುತಿದೆ ಏಳು ಕೇಳಿಸದೇನೋ ಮೊಸರನು ಕಡೆಯುವ ಗೋಪೀ ಕೈಬಳೆ ಸದ್ದು, ಆಗಲೆ ಬಾಗಿಲ ಬಳಿಯಲಿ ಗೆಳೆಯರು ಆಟಕೆ...

ಎಂಥದೆ ಇರಲಿ

ಎಂಥದೆ ಇರಲಿ ಯಾವ ಮದ್ದಿಗೂ ಬಗ್ಗದ ರೋಗವಿದು ಯಾರೇ ಇರಲಿ ಎಂಥ ವೈದ್ಯಗೂ ಸಗ್ಗದ ರೋಗವಿದು ಹೊರಗಿನ ಔಷಧ ಹಾಯಲಾರದ ಮನಸಿನ ಜಾಡು ಇದು ಯಾವ ಪಂಡಿತಗು ಆಳೆಯಲು ಬಾರದ ಕನಸಿನ ಕೇಡು ಇದು,...

ಈಗಷ್ಟೆ ಮುಗಿದಿದೆ ಉರಿಬೇಸಿಗೆ

ಈಗಷ್ಟೆ ಮುಗಿದಿದೆ ಉರಿಬೇಸಿಗೆ ಸೀದುಹೋಗಿದೆ ನೆಲ ಅದರ ಧಗೆಗೆ ಮೇಲೆ ತೇಲುವ ಮುಗಿಲು ಕೆಳಗೆ ಥಣ್ಣಗೆ ಸುರಿದು ತನ್ನ ಉಳಿಸುವುದೆಂದು ಧರೆ ನಂಬಿದೆ ಹಾಗೇ ನಾನೂ ನಿನಗೆ ಕಾಯುತಿರುವೆ. ತಾಗಿತೋ ಹೇಗೆ ಈ ನೆಲದ...

ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ?

ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ ಗುಟ್ಟೆನ ವ್ಯವಹಾರ ಎಂದು ಅಣಕವಾಡುವೆ? ಹರಿಯ ನೀನು ಮರೆಯಲ್ಲಿ ಕೊಂಡೆ ಎನ್ನುತ ಏಕೆ ಸಖೀ ಮಾತಿನಲ್ಲಿ ನನ್ನ ಇರಿಯುವೆ? ನಿನ್ನ ಮಾತು ಶುದ್ಧ ಸುಳ್ಳು ಕೇಳು ನಿಜವನು...

ಹೇ ಸಖೀ ಬೃಂದಾವನ ಎಷ್ಟು ಚೆಂದವೇ!

ಹೇ ಸಖೀ ಬೃಂದಾವನ ಎಷ್ಟು ಚೆಂದವೇ! ತೆತ್ತು ಕೊಂಡಿತಲ್ಲ ಇದು ಹರಿಗೆ ತನ್ನನೇ ಕುಣಿವ ರೀತಿ ಹರಿವಳು ಇಲ್ಲಿ ಯಮುನೆಯು ತುಳಸಿವನಕೆ ತರುವಳು ನಿತ್ಯ ನೀರನು ಹರಿಯು ತುಳಿದ ನೆಲವ ಸೋಕಿ ಅಲೆಯ ಕೈಯಲಿ...

ಭಾರೀ ಸರಕೇ ದೊರಕಿದೆ ನನಗೆ

ಭಾರೀ ಸರಕೇ ದೊರಕಿದೆ ನನಗೆ ಇಲ್ಲ ಸಣ್ಣ ಬಯಕೆ - ನನಗೆ ಇಲ್ಲ ಏನೂ ಕೊರತೆ ಗಂಗೆಯಾಳದಿ ಈಜುವ ಮೀನಿಗೆ ಕಿರಿಯ ಕೆರಗಳೇಕೆ? ವಿಶಾಲ ಆಲವೆ ಆಸರೆ ನೀಡಿದೆ ಕುರುಚಲು ಗಿಡ ಬೇಕೆ? ಎತ್ತರ...

ಹೇಗೆ ಹೋದನೇ ಹರಿ?

ಹೇಗೆ ಹೋದನೇ ಹರಿ ನಮ್ಮನೆಲ್ಲ ತೊರೆದು ಹೇಗೆ ಹೋದ ಮಧುರೆಗೆ ನಮ್ಮೆದೆಯನು ಇರಿದು? ಮಾಯೆಯನ್ನು ಹರಡುತಿದ್ದ ಮುರಳಿಯನ್ನು ತ್ಯಜಿಸಿ ಮೈಗೆ ಒರಗಿ ನಿಲ್ಲುತಿದ್ದ ಸುರಭಿ ಹಿಂಡ ಸರಿಸಿ ನಂದಗೋಪಿ ಬಂಧು ಬಳಗ ಎಲ್ಲರ ಹುಸಿ...

ನನ್ನ ಶ್ಯಾಮನ ಮಂದಹಾಸ

ನನ್ನ ಶ್ಯಾಮನ ಮಂದಹಾಸ ಮಿಂಚುವ ಮುಖ ಕಾಡುವುದೆ ಸಖಿ ನನ್ನ ಇರುಳಿನಲ್ಲಿ, ಕುಡಿನೋಟ ಚಿಮ್ಮುವಾ ಬಾಣಗಳು ಎದೆ ತಾಗಿ ಹೊರಳುವೆನು ನಾ ಮಧುರ ನೋವಿನಲ್ಲಿ. ಕರಯುವಳು ನನ್ನ ಸಖಿ "ಬಾರೆ ಮಿರಾ ಬಾರೆ ಕಟ್ಟಲೇನೇ...