“ಎಲ್ಲಾ ಮರಕ್ಕು ಮೈ ತುಂಬಾ ಎಲೆ
ನಂಗೇ ಯಾಕಿಲ್ಲ?
ಮರಕ್ಕೆ ಕಾಯಿ ಹೂವು ಹಣ್ಣು,
ನಂಗೂ ಬೇಕಲ್ಲ”

“ಮರಕ್ಕೆ ಅಪ್ಪ ಅಮ್ಮ ಇಲ್ಲ
ನಿನಗದು ಇದೆಯಲ್ಲ
ಅದಕ್ಕೆ ಬೆಚ್ಚನೆ ಮನೆಯೂ ಇಲ್ಲ
ಸ್ನೇಹಿತರೇ ಎಲ್ಲ”

“ಮರಕ್ಕೆ ದಿನವೂ ರಜವೇ-ನನಗೋ
ವಾರಕ್ಕೊಂದೆ ಸಲ.
ಅದಕ್ಕೆ ಬರಿಮೈ – ನಾನೋ ಬಟ್ಟೆ
ತೊಡಲೇ ಬೇಕಲ್ಲ!”
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)