
ಮೂಲ: ಟಿ ಎಸ್ ಎಲಿಯಟ್ ವಿಶಾಲಬೆನ್ನಿನ ಒಡ್ಡು ಹಿಪೋಪೊಟಮಸ್ ಮೃಗ ಹೊಟ್ಟೆಯೂರಿ ನಿಲ್ಲುತ್ತದೆ ಕೆಸರಲ್ಲಿ; ನೋಡಲು ಹೊರಕ್ಕೆ ಅಗಾಧ ಕಂಡರೂ ಕೂಡ ರಕ್ತಮಾಂಸಗಳಷ್ಟೆ ಮೈಯಲ್ಲಿ ಬರೀ ರಕ್ತಮಾಂಸ ಶಕ್ತಿಹೀನತೆ ಗುರುತು, ನರದ ಆಘಾತದ ಅಪಾಯ; ಚರ್ಚಿನ ಸ್ವಾಸ್ಥ...
ಮೂಲ: ಟಿ ಎಸ್ ಎಲಿಯಟ್ ೧ ಓಣಿಬೀದಿಗಳಲ್ಲಿ ಮಾಂಸ ಬೇಯುವ ನಾತ ಝಾಂಡಹಾಕಿದೆ ಮಾಗಿದಿನದ ಮುಸ್ಸಂಜೆ. ಆರು ಗಂಟೆ. ಹೊಗೆವ ಹಗಲುಗಳ ಉರಿದುಳಿದ ತುಂಡುಗಳು, ಗಾಳಿ ಮಳೆ ಇರಚಲು : ಕೆಳಗುದುರಿ ಬಿದ್ದ ಕೊಳೆತ ಎಲೆಚೂರುಗಳು ಖಾಲಿ ಸೈಟಿಂದ ಹಾರಿಬಂದ ಪತ್ರಿಕೆ ...
ಮೂಲ: ಟಿ ಎಸ್ ಎಲಿಯಟ್ ಇಲ್ಲಿಂದ ಮರ್ತ್ಯಲೋಕಕ್ಕೆ ಎಂದೂ ಮರಳದವನಿಗೆ ನಾನು ಉತ್ತರಿಸುತ್ತಿದ್ದೇನೆ ಎಂದು ಯೋಚಿಸಿದ್ದರೆ ಈ ಜ್ವಾಲೆ ನಿಶ್ಚಲವಾಗಿ ನಿಲ್ಲುತ್ತಿತ್ತು. ಆದರೆ ಈ ಕೂಪದಿಂದ ಎಂದೂ ಯಾರೂ ಜೀವಂತವಾಗಿ ಹಿಂತಿರುಗಿಲ್ಲ ಎಂದು ಕೇಳಿದ್ದೇನೆ. ಇದ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕವನಕ್ಕೆ ವಸ್ತು ಸಿಗಲಿಲ್ಲ, ವ್ಯರ್‍ಥ ಪ್ರಯತ್ನಿಸಿದ್ದೆಲ್ಲ ಪ್ರತಿದಿನ ಪರದಾಟ, ಆರುವಾರ ಕಳೆದರೂ ಇಲ್ಲ, ಶಾಂತನಾಗುವುದೆ ಉತ್ತಮ ಮುದುಕ ಅಲ್ಲಿಗೆ; ವಯಸ್ಸಾಗುವ ಮುಂಚೆ ಪ್ರತಿ ಚಳಿಗಾಲ ಬೇಸಿಗೆ ಆಟಕ್ಕಿದ್ದವು ನನ್ನ ಸರ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ದೂರ ಆ ಕಂಬಕ್ಕೆ ಕಟ್ಟಿಬಿಡಿ ಕುದುರೆ, ನಾಯಿ ಬೊಗಳದೆ ಇರಲಿ, ಘೋರ ಕಾಳಗ ನಾಳೆ, ಸೋತು ನಾಗರಿಕತೆ ಮಣ್ಣಾಗದಿರಲಿ; ಡೇರೆಯೊಳಗಡೆ ಸೀಜರ್, ಕೈಯಲ್ಲೂರಿದ ತಲೆ ಯಾವುದೋ ಧ್ಯಾನ, ಶೂನ್ಯ ಸುರಿಯುವ ನೋಟ, ಎದುರು ಹರಡಿದ ನಕ್ಷೆ...
ಮೂಲ: ವಿಲಿಯಂ ಬಟ್ಲರ್ ಏಟ್ಸ್ ರಸ್ತೆ ಇಳಿದು ಬಂದ ಪಾರ್‍ನೆಲ್ ಜಯಕಾರವ ಹಾಕುತ್ತಿದ್ದ ಉತ್ಸಾಹಿಗೆ ಹೇಳಿದ : ‘ಐರ್‍ಲೆಂಡಿಗೆ ಸ್ವಾತಂತ್ರ್ಯ ತಪ್ಪದೆಯೇ ಸಿಗುವುದು ನಿನಗೆ ಮಾತ್ರ ಕಲ್ಲು ಒಡೆವ ಈ ಕೆಲಸವೆ ಉಳಿವುದು’. *****...








