
ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಹೊರಗೆ ಬರಿಯ ಬಿಸಿಲು ಧೂಳಿ ದೇಹ ಮನವನೆಲ್ಲ ಹೂಳಿ ಮೇಲೆ ಕುಣಿವಳವಳು ಕಾಳಿ ನೋವು ನರನ ಕೊರಳ ತಾಳಿ! ಮುಚ್ಚು ಮುಚ್ಚು ಬಾಗಿಲ ಜೀವವಾಯ್ತು ವ್ಯಾಕುಲ. ಎಲ್ಲ ಕಡೆಗೆ ವಿಷದ ಗಾಳಿ ತಡೆಯಲಾರೆ ಅದರ ದಾಳಿ ನನ...
ಇ೦ದು ಸಂಜೆಯ ನಿಟ್ಟು ನಿಟ್ಟಿಗೆ ಬೆಳೆದು ನಿಂತಿದೆ ಸಂಪದ ಹಕ್ಕಿ ಹಾರಿದ ಹಾಗೆ ಹರಿಯಿತು ಮನದಿ ಊರಿದ ಆ ಪದ ಚೆಂಗುಲಾಬಿಯ ಬನವು ಅರಳಿದೆ ನೋಡು ಬಾನಿನ ದಂಡೆಗೆ ಪ್ರಾಣ ಶುಕವೇ ಕ್ಷುಬ್ಧವಾಯಿತು ಬಂತು ಕಣ್ಣಿನ ಕಿಂಡಿಗೆ ಸ್ವರ್ಗಲೋಕದ ಸ್ವರ್ಣ ದ್ವಾರವು ...
ಇಳೆಗೆ ಬಂದಳದೋ ಲಕ್ಷ್ಮಿ ಮಧುಮಾಸದ ಅಮೃತ ರಶ್ಮಿ! ಮಿಂದು ಬಂತು ನೆಲಜಲ ಸ್ವಾಗತಿಸಿತು ಭೂತಲ ದಿಸೆ ದಿಸೆಯೂ ಹೊಳೆವ ಹವಳ ಸ್ವಸ್ತಿ ಲಿಖಿತ ಹೊಸ್ತಿಲ! ಗಗನ ಕರದ ನೀಲಕಮಲ ಅರ್ಘ್ಯವೀಯೆ ಕಿರಣ ಸುಜಲ ಕೈ ಮುಗಿಯಿತು ಜೀವಕುಲ ಭಾವ ಪಕ್ವ ಫಲವಲ! ಪುರೂರವನ ಎದ...
ವಿಶ್ವಜನ್ಮ ಪೂರ್ವದಲ್ಲಿ ಅನಾದಿ ಕಾಲದಾದಿಯಲ್ಲಿ ಬ್ರಹ್ಮನಿರಲು ತಪಸಿನಲ್ಲಿ ಕುಣಿದೆಯವನ ಎದುರಿನಲ್ಲಿ ಕೊನರಿತೆನಲು ಮಿಂಚುಬಳ್ಳಿ ಹೇ ಸುಂದರಕಲ್ಪನೆ ಚಿರ ಜೆಲುವಿನ ಚೇತನೆ! ಸುರಪ್ರಜ್ಞೆಯು ಉನ್ಮೇಷಿತ ಲೀಲಾತುರ ಮನಸ್ಫೂರ್ತಿತ ಈ ವಿಶ್ವವು ಉಲ್ಲೇಖಿತ-...
ಏಳು ಮಾತೆ ಜನ್ಮದಾತೆ ಹೇ ಸ್ನೇಹದ ಮೂರುತಿ | ಕೇಳಿ ಬಂದೆ ತಾಯೆ, ನಿನ್ನ ಮೊಲೆ ಹಾಲಿನ ಕೀರುತಿ | (೨) ತನ್ನ ರಕ್ತ ತಾನೆ ಹೀರಿ ತನ್ನ ಮಾಂಸ ತಾನೆ ಸವರಿ ನಿಂತಿರುವಳು ಪೃಥ್ವಿಗೌರಿ -ಬರಿ ಎಲುಬಿನ ಹಂದರ ! ಚೀರುತಿಹುದು ಜೀವ ಹಲುಬಿ -ನಾ ಕಂಬನಿ ಕಂದರ ...








