ಕಡಲ ತಡಿಯಲ್ಲಿ ಕುಳಿತ ಪ್ರೇಮಿಗಳಿಬ್ಬರ ಪಿಸುಮಾತು ಕಡಲಿಗೆ ಕೇಳಿಸದಷ್ಟು ಸಣ್ಣಗೆ! ಕಡಲಿಗಿಂತ ದೀರ್ಘ ಪ್ರಿಯತಮನ ಭುಜದ ಆಸರೆಗೆ ಒರಗಿ ಕುಳಿತ ಹುಡುಗಿ ಕೆಂಪಾದ, ಗುಳಿಬಿದ್ದ ಕೆನ್ನೆ ಬಯಕೆ ತುಂಬಿದ ತುಟಿಗಳು ಕಡಲ ಅಲೆಯ ಬೋರ್ಗರೆತ ಪ್ರೇಮಿಗಳ ಮನದ ಕಾ...

ದೊಡ್ಡ ಮರದ ಮೇಲೆ ಅಲ್ಲಲ್ಲಿ ಜೇನುಗೂಡು ರೆಂಬೆಗೊಂದರಂತೆ; ಅಕ್ಕ-ಪಕ್ಕದ ಮನೆಗಳ ರೀತಿ ಜೇನುಹುಳುಗಳ ಹಾರಾಟ ಸಿಹಿಹನಿಯ ಹುಡುಕಾಟ ಜೇನುಗೂಡಿನಿಂದ ತೆರಳಿ, ಮರಳುವ ಆಟ ಸಂಚಯಿಸಿ ತಂದ ಮಕರಂದವ ಚಂದದಲಿ ಶೇಖರಿಸಿ ಹನಿಹನಿಯ ಜೇನನ್ನು ಕಣಜವಾಗಿಸುವ ತವಕ ನಾ...

ಇವರು ಗಾಳಿಗುದುರೆಯೇರಿ ಸವಾರಿ ಹೊರಟವರು ಕೈಗೆಟುಕದ ಆಕಾಶವ ಸವರಲೆತ್ನಿಸಿದವರು ಸಾಧನೆಯ ಹಿಂದೆ ಬಿದ್ದು; ಎದ್ದು ಕನಸು ಹೆಣೆದವರು ಗುರಿಯೊಂದೇ ನೆಲೆಯಾಗಿ ಲಕ್ಷ ಆಸೆಗಳ ಅಲಕ್ಷ್ಯವಾಗಿಸಿದವರು ಬೆಳಕಿನ ಕೊನೆಯಲಿ ಬಂದ ಅಂಧಕಾರದ ಹೊಡೆತಕ್ಕೆ ಮರುಗಿದವರು...

ರಸ್ತೆ ಬದಿಯಲ್ಲಿ ಮುದುರಿ ಮಲಗಿರುವ ಮುದುಕನಿಗೆಷ್ಟು ಪ್ರಾಯ? ಅರಿತವರ್ಯಾರು? ಅರಿತರೂ ಹೇಳುವವರ್ಯಾರಿದ್ದಾರೆ ಹೇಳಿ? ಹಿಂದಿಲ್ಲ, ಮುಂದಿಲ್ಲ ಕೇಳುವವರಾರಿಲ್ಲ ಅವನ ವ್ಯಥೆ ಒಮ್ಮೊಮ್ಮೆ ಗೊಣಗುತ್ತಾನೆ ತನ್ನಷ್ಟಕ್ಕೆ ಅದ್ಯಾವ ಕಥೆಯೋ ಆತನದ್ದು? ನಗುತ್...

ಮಜ್ಜನಕ್ಕಾಗಿ ನಡೆದಿದೆ ಸೂರ್ಯನ ಪಡುವಣದ ಪಯಣ ಹಾಸಿಚೆಲ್ಲಿದೆ ಕೆಂಪನೆಯ ಜಮಖಾನ ಸೂರ್ಯನ ರಾತ್ರಿಯ ನಿದಿರೆಗಾಗಿ ಹಾರುತಿರುವ ಹಕ್ಕಿಗಳ ಆತುರ ಗೂಡು ಸೇರುವ ಕಾತುರ ಒಂದಿಷ್ಟು ಚಿಲಿಪಿಲಿಯ ಸದ್ದು ರಂಗಿನ ಸಂಜೆಗೆ ಮತ್ತಷ್ಟು ಸೊಬಗು ಕಡಲ ಮರಳಿನಲ್ಲಿ ಮನ...

ಮಂಗಳೂರು ವಿಮಾನ ನಿಲ್ದಾಣ. ಆಗ ತಾನೇ ನೆಲದಲ್ಲಿ ನೆಲೆನಿಂತ ವಿಮಾನದಿಂದ ಇಳಿದ ಯುವಕನೊಬ್ಬ ಜಾತ್ರೆಯ ತೇರನ್ನು ಕೈಯಲ್ಲಿ ಎಳೆದು ತರುವಂತೆ, ತನ್ನ ದಪ್ಪನೆಯ ಸೂಟ್‌ಕೇಸನ್ನು ಎಳೆದುಕೊಂಡು ಬರುತ್ತಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯೆಲ್ಲಾ ಮುಗ...

ನಾನು ಕವಿಯಲ್ಲ; ಆದರೆ ಕವನಗಳನ್ನು ಬರೆಯಬಲ್ಲೆ ಒಂದಿಷ್ಟು ಕುತೂಹಲದಿಂದ, ನನ್ನ ಮನದ ಸಂತೋಷಕ್ಕಾಗಿ ಪದಪುಂಜವ ಜೋಡಿಸಿ ಭಾವನೆಯೆಳೆಯನ್ನು ಬಿಡಿಸಿ ಪದಗಳಿಗೆ ಭಾವನೆಯೆಂಬ ವಸ್ತ್ರವನ್ನು ತೊಡಿಸುತ್ತೇನೆ ಕವನದ ರೂಪದಲ್ಲಿ ಮನದ ಮೂಲೆಯಲ್ಲೆಲ್ಲೋ ಅಡಗಿದ ಕ...

ನಾನೊಮ್ಮೆ ಕನಸಿನಲ್ಲಿ ರಾಜನಾಗಿದ್ದೆ ಭೂ ಲೋಕದ ಒಡೆಯನಾಗಿ ಮೆರೆದಿದ್ದೆ ನನ್ನದೇ ಮಾತು, ನನ್ನದೇ ರೀತಿ ಪ್ರಶ್ನಿಸುವವರಿಲ್ಲದ ಪ್ರಪಂಚ ಖಜಾನೆಯಲಿ ಕೊಳೆತು ಬಿದ್ದಿರುವ ಸಂಪತ್ತು ಇಷ್ಟಿದ್ದರೂ ಇಲ್ಲದವರಿಗೆ ನೀಡಲೊಪ್ಪದ ಮನಸ್ಸು ಕಾರಣವಿಲ್ಲದೆ ಹೊಗಳಿ ...

ಬೆವರಿಳಿಯುತ್ತಿರುವ ಮುಖ, ಕಳೆಗುಂದಿದ ಕಣ್ಣು ಬಾಡಿ ಬಸವಳಿದ ಹೆಣ್ಣು ಚಿಂದಿ ಆಯ್ವ ಕೈಗಳು, ನಡೆದು ದಣಿದ ಕಾಲು ಆಹಾರಕ್ಕಾಗಿ ಕಾದ ಒಡಲು ಗುರುವಿಲ್ಲ ಹಿಂದೆ; ಗುರಿಯಿಲ್ಲ ಮುಂದೆ ಕಳೆದುಹೋಗುತ್ತಿರುವ ಬಾಲ್ಯ ಚಿಂದಿಯ ಪ್ರಪಂಚದಲ್ಲೇ ಬಂಧಿ ಅಲ್ಲೇ ನಾಂ...

ಹಲವು ದಿನಗಳಿಂದ ವ್ಯಾಖ್ಯೆಯೊಂದನ್ನು ಹುಡುಕುತ್ತಿದ್ದೇನೆ ಪ್ರೀತಿಗೆ ಆದರೂ ಸಿಗುತ್ತಿಲ್ಲ ಯಾವಾಗ ಸಿಗಬಹುದೋ?! ಪದಗಳಲ್ಲಿ ವರ್ಣಿಸೋಣವೆಂದರೆ ಪದಪುಂಜವೇ ಸಾಲದು ಸಂಕೇತಗಳಲ್ಲಿ ವಿವರಿಸಹೊರಟೆ ಆದರೆ ಸಂಕೇತಗಳೇ ಸಿಗಲೊಲ್ಲದು ಅಳತೆ ಮಾಡೋಣವೆಂದರೆ ಒಬ್ಬ...