
“ಹಾಯ್ ! ಹಾಯ್ ! ಉಳಿಸೈ ! ಕತ್ತಲೆಯ ಚಲಿಸೈ ! ಕೊತ್ತಳದ ನೆಲಮನೆಯ ಬುಡದಲ್ಲಿ ಬಳಲುವೆನು. ಕಾಣಲಾರದೆ ಕೇಳಲಾರದೆಯೆ ತೊಳಲುವೆನು ! ಉದ್ಧರಿಸು ! ಈ ಸಮಸ್ಯೆಯನ್ನು ಬಗೆಹರಿಸೈ!” ಗೋಡೆಯೊಳಮೈಯಣಕವಾಡುತಿದೆ : “ಸೈ! ಸೈ! ಸೆರೆಸಿಕ್...
“ಅದು ಇಲ್ಲ! ಇದು ಇಲ್ಲ! ಯಾವುದೇನೆನಗಿಲ್ಲ- ವೆನಬೇಡ, ಎಲ್ಲವಿದನಾರು ಪಡೆದರು, ಹೇಳು ? ದೈವವಿತ್ತಿಹ ಕೂಳು, ದೇವನಿತ್ತಿಹ ತೋಳು- ಬಲವ ನಂಬಿರಬಾರದೇ ! ಆಲಿಸೀ ಸೊಲ್ಲ ! ’ಬಾ’ ಎಂದವನೆ ಗೆಳೆಯ; ಬಾಯ್ಗೆ ಬಿದ್ದುದೆ ಬೆಲ್ಲ! ಕೊರೆದಿಟ್ಟ ತಾಣದಲ...
ನೀವೆ ಟ್ರೇ. ಕಾ. ಏನು? ಅಲ್ಲಗಳೆಯುವಿರೇಕೆ? ಆ ಹೆಡಿಗೆ ಪಾವುಡವೆ ಹೇಳುವದು. ಅದು ಕುರ್‍ಚೆ- ಇತ್ತ ಬನ್ನಿರಿ ಹಸೆಯ ಮೇಲಿಂತು. ಊಂ? ಚರ್‍ಚೆ? ಆಧುನಿಕ ಕವಿತೆಯನು ಕುರಿತೊ? ಮೋರೆಯ ಮೇಕೆ- ಕಳೆಯ ಕಳೆಯಿರಿ ಮೊದಲು! ಸಾಲೆ ಹುಡುಗರ ಕೇಕೆ- ಯೆನ್ನುವಿರ ಈ...
“ಪದ್ಯವನ್ನು ಬರೆವ ಚಟ ಹೆಚ್ಚಾಯ್ತು, ದುಃಸಾಧ್ಯ, ದೈವವಶವೀ ಕವಿತೆ. ‘ಉದ್ಯಮ’ವ ಗೈಯ್ಯುವರು ಎಲ್ಲ ಮೊದ್ದರು ಇದನು; ತಿಣಿತಿಣಿಕಿ ಬರೆಯುವರು. ಇದರಿಂದ ನಮಗೆ ತಗಲುವ ಹಾನಿಯನವದ್ಯ. ಕಿತ್ತು ಹಾಕಿರಿ ಕವಿಯ; ಕಾವ್ಯಧೇನುವು ವಧ್ಯ. ಗದ್ಯವನ್ನು ಬ...
ವಾಗ್ದೇವಿ ಭಾಂಡಾರ ಮುದ್ರೆಯೊಡೆದಿಹ ರನ್ನ ನಾನಲ್ಲ. ಹೇಳಿದರೆ ನಾನೆ ಹೇಳುವದೆಂದು ಯಾವ ಮಹರಾಯನೂ ಹೇಳಿಲ್ಲ. ನಾನಿಂದು ತಿಳಿದಿಲ್ಲವಹುದೆಂದು ಸಕಲಗುಣಸಂಪನ್ನ. ಇಲ್ಲಿರದು ಬಹುರೀತಿ, ದಂಗುವಡಿಸುವ ಶಬ್ದ ಬಿರುದುಬಿದ್ದಣವಿರದೆ ಬರೆಯುವುದ್ಯಮಕಿಂತು ಅಣಿ...
ಈತನು ‘ಮಹಾಶಯನು’ ನಾಲ್ಕು ಜನರಲಿ ಗಣ್ಯ- ನೆಂದು ಮನ್ನಣೆವೆತ್ತ ಸಾಮಂತ. ಎಂತೆಂತು ಲಕ್ಷ್ಮಿಯನ್ನು ಒಲಿಸುವುದು,- ಇದರಲಿವಗಿಹ ಪುಣ್ಯ- ವೆಲ್ಲ ವ್ಯಯವಾಗಿಹುದು. ಇವ ತನ್ನನುಳಿದನ್ಯ- ರನ್ಯಾಯವನ್ನು ತಡೆಯ. ಯಮನ ಕೊಂತಕೆ ಕಂತ ವನು ಕೊಡುವ ಮುಂಚಿತವೆ ಸು...







