ನಮಸ್ತೇ!

ಹೋಗಿ ಬರುವೆನು ನನ್ನ ಎಳೆಗನಸುಗಳೆ! ನಿಮ್ಮ ತಳಿರ್‍ಗೆಂಪು ಹೂಗಂಪು ತಂಗಾಳಿ ಮುಗಿದು ಸಮರವನು ಸಾರಿಹುದು ಅಮರ ಶಕ್ತಿಯದೊಂದು, ಎದೆಮನವ ತಣಿಸಿರುವ ದಿನಗಳನೆ ಹುಗಿದು! ನಿಂತಿರುವದೆದುರಾಳಿಯಾಗಿ ನನಸಿನ ಕಹಿಯು, ಪ್ರಾಣಗಳ ಗಂಟೆಯನು ಗಣಗಣನೆ ಬಡಿದು; ಪಾಪಸಂಚಯವೆಲ್ಲವಾಗಿ...

ಭೋಂಗಾನಾದ

ಕೋಳಿ ಕೂಗಿ ನಸುಕನೆಚ್ಚರಿಸುವ ಮುನ್ನ, ಹೊಂಗದಿರನೆದ್ದು ವಸುಧೆಯ ನೋಡಿ ನಗುವ ಮುನ್ನ, ಹಗಲ ಮುಗಿಲುಗನಸಿನಲಿ ಬೆಂಗದಿರ ಮಾಯವಾಗುವ ಮುನ್ನ, ನನ್ನ ಕಿಟಕಿಯ ಬಳಿ ರೆಂಬೆಯ ಮೇಲೆ ಕುಳಿತು ಕೊಂಬು ಹಿಡಿದಿತ್ತು ಕೋಗಿಲೆಯೊಂದು ನಿದ್ದೆ ತೊಲಗಿತು;...