ಚೆಲುವು ‘ಬಾ’ ಎಂದು ನಿಂತಿದೆ ಹಾಕಿ ರಿಂಗಣವ ಮುಗಿಲಂಗಣದಿ ಅಮರಜ್ಯೋತಿಗಳು ತೂಗಾಡಿ ಕೇಳುವವು : ‘ಎಲ್ಲಿಹನು ನಮ್ಮೊಡತಿಯೊಡನಾಡಿ?’ ಮುಗಿಲಿನೊಳಮುಗಿಲಿಂದ ದನಿಯೊಂದು ಪ್ರತಿ ಕ್ಷಣವು ಮೊಳಗುವದು : ‘ಮಾರ್‍ಮಲೆವ ಸಾಹಸಿಯು ತಾ ಪಣವ ಕಟ್ಟಿ ಬಂದನೆ? ನರ್‍...

ಪ್ರೀತಿಪಾತ್ರರು ತಾವು ದೂರವಿರುತಿರುವಾಗ ಮುಗಿಲ ಚಿಕ್ಕೆಯನೆಣಿಸೆ ಬರುವ ರೋಮಾಂಚನವು ಬರುತಿಹುದು. ಪ್ರೀತಿಯೊಳಗೊಂದಮೃತಸಿಂಚನವು ಕಾಣುವದು. ಒಲಿದವರ ರೂಹು ಮರೆಯಾದಾಗ ಎದೆ ಕೊರಗುವದು ಕೇಳಿ ಎಂದು ಬಹರವರೀಗ ? ಹಾತೊರೆಯುವದು ಒಲುಮೆಗಣ್ಣು ತನಗಂಜನವು ಬ...

ರಮಣನೊಡಗೂಡಿ ನೆರೆದಿಂಗಳೂಟವನುಣಲು- ಅವಳಿಗೆನಿಸಿತು ಬಾಳ್ವ ಸುಖದ ಬಿದ್ದಣವೆಂದು. ಭಾವಿಸಿದಳವಳದುವೆ ಚಿಂತೆಗಿಹ ಬಯಲೆಂದು ಮೋಡ ಮುತ್ತುತ, ನಸುವೆ ಓರೆಯಾಗಿರೆ ಹಗಲು. ಮಳೆಯಾಗಿ ಮಿಂಚು ಸಿಡಿಲಿಂದ ಕೂಡಿರೆ ಮುಗಿಲು, ಸೂರ್‍ಯನಾರಾಯಣನು ಕಾಣದಾಗಿರೆ, ನೊ...

ನನ್ನಾಕೆ ಇವಳು ತಾ ಬಲು ಬಿಂಕದಾಕೆಯೆನೆ ಒಮ್ಮೆ ಬಿಮ್ಮನೆ ಬಿಗಿದು ನಿಲ್ಲುವಳು. ನೂರು ಸಲ ಮಾತನಾಡಿಸಲೇನು? ಸುಮ್ಮನಿರುವಳು, ಕಮಲ ಸುರಭಿಯನು ಹೊರದೂಡುವಂದದಲಿ, ‘ಸುಮ್ಮಾನೆ! ಇಂತೇಕೆ, ಮಾನಿನಿಯು?’ ಎಂದು ಕೆಣಕಲು ತಾನೆ ಸಲಿಲಮಯವಾಗುವದು ನೇತ್ರ. ನಲ್...

ಬ್ರಹ್ಮನಿತ್ತಿಹ ಮನಸು, ವಿಷ್ಣುವಿತ್ತಿಹ ಕನಸು, ರುದ್ರನಿತ್ತಿಹ ಮುನಿಸನಳವಡಿಸಿಕೊಳುತಿಲ್ಲಿ ನೀ ಬೆಳೆದೆ ಗಂಡೆದೆಯ ಕಣ್ಣೆ, ಹೆಣ್ಣೇ ! ನೆನಸು ನಿನ್ನ ರೂಪ-ವಿರೂಪಗಳ ನೆನೆದಿರುವಲ್ಲಿ. ಮುಂದಾದೆ ‘ಚಂದ್ರಮುಖಿ ’, ‘ಕುಂದ ಕುಟ್ಮಲರದನೆ ’ ‘ಮೀನಾಕ್ಷಿ’...

ದುಃಖಾಶ್ರುವಿನ ಪಸರದಿಂದ ಜನಿಸಿದ ಮಂಜು, ಅಜ್ಞಾನದಾವರಣ, ಕನವರಿಕೆ ಅನುತಾಪ- ದಲಿ ಕಳೆವ ಸಂತಸವು, ಸಿರಿಯೆಂಬ ಹಿರಿನಂಜು, ಬಟ್ಟಬಯಲಾಗುತಿಹ ಪ್ರೀತಿಯೆಂಬೀ ಧೂಪ ನಮ್ಮ ಭಾವನೆ ತಂದ ಮೇಲುಬೆಳಕಿನಭಾವ ನಿಷ್ಕರುಣೆ, ಇದರಿಂದ ಕುರುಡಾಗಿಹುದು ಕಾಣ್ಕೆ. ಜೀವ...

ದಾರಿಹೋಕನೆ! ಕೇಳು! ನಾನಿರುವೆನೇಕಾಂಗಿ! ರಾಜನೀಧಿಯಲಲೆಯುತಿರುವೆ ನಾನನುದಿನವು. ಕಾಯುವೆನು ಮಂದಿರದ ಒಳಹೊರಗು, ಜನಮನವು ಒಲಿಯಬಹುದೇನೆಂದು. ಒಂದು ಮರದಡಿ ತಂಗಿ ನೋಂತಿಹೆನು ಚಾತಕವ್ರತದಿ ದುಃಖವ ನುಂಗಿ! ಆರೋಗಣೆಯು ಇಲ್ಲ; ಇಲ್ಲದಾಗಿದೆ ತನುವು! ಕೊರ...

ನೀನು ನಡೆಯುವ ದಾರಿ ನನ್ನದಿರಲೆಂದು ನಾ ಬೇಡುವೆನು ಅನುದಿನವು. ನಿನ್ನ ಹೆಜ್ಜೆಯ ಗುರುತು ನನ್ನ ಬಿಜ್ಜೆಯದಾಗಲೆಂಬ ಹರಕೆಯ ಹೊರತು ಮತ್ತಾವುದನ್ನು ತಿಳಿಯೆ. ಬಯಲಿನಾ ಕಾಡಿನಾ ಸುಳಿವಿನಲಿ ನೀನಿರುವ ಹೊಳವಿರಲಿ ಚಿದ್ಘನಾ! ನನ್ನ ಸಂಗಡಿಗ ನೀನೆಂಬ ಸಂಗತಿ...

“ಹಾಯ್ ! ಹಾಯ್ ! ಉಳಿಸೈ ! ಕತ್ತಲೆಯ ಚಲಿಸೈ ! ಕೊತ್ತಳದ ನೆಲಮನೆಯ ಬುಡದಲ್ಲಿ ಬಳಲುವೆನು. ಕಾಣಲಾರದೆ ಕೇಳಲಾರದೆಯೆ ತೊಳಲುವೆನು ! ಉದ್ಧರಿಸು ! ಈ ಸಮಸ್ಯೆಯನ್ನು ಬಗೆಹರಿಸೈ!” ಗೋಡೆಯೊಳಮೈಯಣಕವಾಡುತಿದೆ : “ಸೈ! ಸೈ! ಸೆರೆಸಿಕ್...

“ಅದು ಇಲ್ಲ! ಇದು ಇಲ್ಲ! ಯಾವುದೇನೆನಗಿಲ್ಲ- ವೆನಬೇಡ, ಎಲ್ಲವಿದನಾರು ಪಡೆದರು, ಹೇಳು ? ದೈವವಿತ್ತಿಹ ಕೂಳು, ದೇವನಿತ್ತಿಹ ತೋಳು- ಬಲವ ನಂಬಿರಬಾರದೇ ! ಆಲಿಸೀ ಸೊಲ್ಲ ! ’ಬಾ’ ಎಂದವನೆ ಗೆಳೆಯ; ಬಾಯ್ಗೆ ಬಿದ್ದುದೆ ಬೆಲ್ಲ! ಕೊರೆದಿಟ್ಟ ತಾಣದಲ...