ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು! ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು! ನನೆ ಕೊನೆಯಿಲ್ಲದ, ಚಿರಂಜೀವಿಯಾದ ನೀರು! ಮುಗಿಲನಣಕಿಸುವ ದಟ್ಟನೀಲಿಯಾದ ನೀರು! ಅಹಾ! ನೀರೆ! ನಿನ್ನ ಸೌಭಾಗ್ಯವೇ ಸೌಭಾಗ್ಯ! ನಿನ್ನ ಚಿರಜೀವಿಪಟ್ಟವೇ ಪಟ್ಟ! ತಬ್ಬುತಿರು...

ಮಧ್ಯರಾತ್ರಿಯಲ್ಲಿ, ಭೂಮಧ್ಯಸಮುದ್ರದ ಮಧ್ಯದಲ್ಲಿ ತೇಲುತಿಹ ಹಡಗದಲ್ಲಿ ನಿದ್ರಿಸುತ ಸವಿಗನಸು ಕಂಡು ಕಣ್ದೆರೆದು ನೋಡೆ,- ಆಹಾ! ಎನಿತು ನಿಚ್ಚಳವಿಹುದು! ನೆರೆದಿಹುದು ಮುಗಿಲಿನಲ್ಲಿ ತಾರೆಗಳ ನಿಬ್ಬಣವು. ಕೋಟಿ ನಕ್ಷತ್ರಗಳು ಕಣ್ಣುಬಿಡುತಿವೆ ನಭದಿ: ಬ...

ಮುಗಿಲ ಗೆರೆಯನ್ನು ಹಿಡಿದು ವಾರಿಧಿಯ ಹೊಂಬಸಿರನೊಡೆದು ಏರುವವು ಮುಗಿಲನ್ನು ಅರುಣನ ಕುದುರೆಗಳೇಳು: ಮಾಡುವವು ಹಗಲನು! ಮೋಡಗಳ ಕೊತ್ತಳದ ಕೋಟೆಯೊಂದನು ಕಟ್ಟಿ ಕಿರಣಗಳ ಬತ್ತಳಿಕೆಯನು ಬದಿಗಿರಿಸಿ ಬರುತಿಹನು ದಿವ್ಯಶರೀರಿ ದಿನಮಣಿ,- ಕತ್ತಲನು ಕಿತ್ತೊಗ...

ಇಲ್ಲಿ ನೋಡಿಲ್ಲಿ! ಮುಗಿಲು ಮುನ್ನೀರ ಚುಂಬಿಸಿತಿಲ್ಲಿ; ಮುನ್ನೀರು ಮುಗಿಲ ರಂಬಿಸಿತಿಲ್ಲಿ. ನಂಬಿಸಿತಿಲ್ಲಿ ಬೆಳಗು,- ಕೂಟದ ಗೆರೆ ಬೆಳ್ಳಿಯ ಕಟ್ಟೆಂದು. ಬಿಂಬಿಸಿತಿಲ್ಲಿ ಸಂಜೆ- ಪರಿಧಾನವಿದು ನೀಲಿಮ ರೇಖೆಯೆಂದು! ಚೌಕೆಂದರೆ ಚೌಕು, ದುಂಡೆಂದರೆ ದುಂ...

ಕಿನ್ನರ ಕಿಂಪುರುಷರ ನೌಕೆಗಳಂತೆ ತೇಲುತಿಹುದು ಬುರುಗಿನ ಬೆಳ್ಳಿ ಶರಧಿಯ ಮೇಲೆ,- ನೂರೊಂದು ಕಡೆಗೆ ತೇಲುತಿಹುದು ನೋಡಾ! ಬೆಣ್ಣೆ ಕಡಿದ ಮಜ್ಜಿಗೆಯಂತೆ ಹುಟ್ಟು ಕಡಿದ ನೀರು ಅಟ್ಟಿಸುತಿಹುದು ನೋಡಾ! ತಪತಪನೆ ಕಾಯ್ದು ಕೋಟಿ ಸೂರ್ಯರಂತೆ ಕಣ್ಣು ಕುಕ್ಕಿ ...

ತೆರೆಗಳ ಕದನವೇಕಯ್ಯ,-ತೆರೆಗಳ ದೊರೆಯೆ! ಹೂಂಕರಿಸುವ ನೀಲಾಶ್ವಗಳಂತೆ, ಅರುಣನ ಕುದುರೆಗಳಂತೆ, ಕಾಲದಂತೆ,- ತಾಕಲಾಡುತಿಹವು ತೆರೆಗಳು. ಪೀಕಲಾಡುತಿಹವು ನೊರೆಗಳು. ಈ ತೆರೆಗಳಲ್ಲಿ ಯಾವುದನ್ನೇರಿದೆ ಹಯವದನ? ಏರಿ ಎಲ್ಲಿಗೆ ನಡೆದೆ? ತೆರೆಗಳ ತುಮುಲ ಯುದ್...

ಗೋಪುರಗಳ ಕಟ್ಟಿ ಗೋಪುರಗಳನಳಿಸುತಿರುವೆ ಓ! ರುದ್ರಪುರುಷ! ಮೆಯ್ಯುಬ್ಬಿ ಬಂದ ಮೆರುಗನ್ನು ಬುರುಗಾಗಿ ಮಾಡುತಿರುವೆ. ಓ! ಮಾರುತಿ ಬಲಭೀಮ! ಎನಿತು ಪುರಗಳ ಸಂಹರಿಸಿರುವೆ ಓ! ತ್ರಿಪ್ರರಾಂತಕ! ಎನಿತು ಖಂಡಗಳ ಕಂಡರಿಸಿರುವೆ ಓ! ಮಾರ್ತಾಂಡ ಭೈರವ! ಈ ನಿನ್...

ನೀನು ಶಾಂತನೆನ್ನಲೆ ಸಮುದ್ರರಾಜ! ತೆರೆತೆರೆಯಾಗಿ ಹಾಯ್ದು ಮೇಘನಾದವ ಗೆಯ್ವೆ! ನೀನು ಕ್ಷುಬ್ಧನೆನ್ನಲೆ, ಸಮುದ್ರರಾಜ! ದೂರ ಮುಗಿಲು-ಗೆರೆಯನಪ್ಪಿ ನಿದ್ರಿಸುತಿರುವೆ! ಶಾಂತಿಯಿಲ್ಲ, ಕ್ಷೋಭೆಯಿಲ್ಲ ನಿನಗೆ! ಶಾಂತಿಯಿದೆ, ಕ್ಪೋಭೆಯಿದೆ ನಿನಗೆ! ಮಾನವನಂ...

ಕಂಡೆ! ನಿನ್ನನು ಮೊದಲಿಗೊಮ್ಮೆ ಕಂಡೆ! ಓ! ಸನಾತನ ಸಮುದ್ರರಾಜ! ಸಂಕ್ರಾಂತಿ ಪುರುಷ! ಓ! ಹಳೆಯದನೆಲ್ಲ ಒಳಗೊಳಗೆ ಕಾಯ್ದು ಹೊಸದನೆಲ್ಲ ಹೊರಗೆ ಸೂರೆಗೆಯ್ದು ಚಿರಸನಾತನವಾಗಿ ಪುನರ್ನವವಾಗಿ ಸಲಿಲ ಲೀಲೆಯಲಿರುವ ಚೈತನ್ಯವೆ! ಸುಮನೋಹರ ಮೂರ್ತಿ! ಕಂಡೆ! ನಿ...

ಸ್ವಚ್ಛಂದ ಛಂದದಲ್ಲಿ ಜಲಕ್ರೀಡಾವೃತ್ತದಲ್ಲಿ ಅನುದಿನವು ತೆರೆಗಳು ಹಿಡಿವ ತಾಳಲಯದಲ್ಲಿ ಗೀತವನೊರೆದೆನೆಂದು ಗೀಳ್‌ ಮಾಡಬೇಡ! ಸಮುದ್ರವ ಸೆರೆಹಿಡಿದವರುಂಟೆ? ಬಾವಿಯ ತೋಡಿ ಮುನ್ನೀರ ಬತ್ತಿಸಬಹುದೆ? ಅಬ್ಜ ಶಬ್ದಗಳ ಪ್ರಾರಬ್ಧದಲ್ಲಿ ಸಹ ಮಹಾಬ್ಧಿಯ ಕಣವೊ...

1234...11