ರಾಗ ಧನ್ಯಾಸಿ- ಆದಿ ತಾಳ ನಂಬಲೆಂತು ನಾ ನೋಡುವ ಮುನ್ನ ಯದುಕುಲದಾ ಲೀಲೆಯ ನಿನ್ನ? ||ಪಲ್ಲ|| ನೋಡದೆ ನಂಬಲು ಬಲ್ಲವನಲ್ಲ, ನೋಡಿಸಿ ನಂಬಿಸೊ ಬಲ್ಲವ ನಲ್ಲ! ||ಅನು|| ೧ನನ್ನ ಮನದ ಮೋಹಮೇಕೆ ಹೀರೆ? ೨ಏಕೆದೆಯಾನೆಯ ಮದ ಮುರಿಯೆ? ೩ಏಕೆ ಕನಲ ಕುದುರೆಯ ಕೊಲ...

ರಾಗ ಬೇಹಾಗ- ತಾಳ ತ್ರಿವಟ ಶ್ರೀ ಹರಿಯೇ ಬಳಲಿದೆ ಎಂತು ನಮಗಾಗಿ ನರಲೀಲೆಯನಾಂತು! || ಪಲ್ಲ || ಶುಭಜನನಕೆ ಸೆರೆಗತ್ತಲೆಯೊ ಹಿತ ವಾದುದು ೧ಮಂದೆಯ ಗೋದಲೆಯೊ? ೨ಮಿಸರಕೆ ನುಸುಳಲು ತಾಯುಡಿಯೊಂಟೆಯೊ ? ಯಮುನೆಯೀಸೆ ತಂದೆಯ ತಲೆಯೊ? || ೧ || ಕೊಳಲ ಸೂಸಿ ಹ...

(ಹಾಡು) ಗಿಳಿಬಾಗಿಲ ತೆರೆಯೆಯಾ? ಹೂ ದನಿಯಿನೆನ್ನ ಕರೆಯೆಯಾ? ಬದಲು ಬಿದುವ ತೋರೆಯಾ? ತಾ ರಾಕಟಾಕ್ಷ ಬೀರೆಯಾ? ೪ ಹಣತೆಹುಳವ ನಂದಿಸಿ, ಬಾ ವಲಿಯ ತಕ್ಕಡಿಯೊಂದಿಸಿ, ಇರುಳ ಮಳಿಗೆ ಮುಗಿಯಿತು, ನೈ ದಿಲೆಯ ಬೀಗ ಬಿಗಿಯಿತು. ೮ ಪಡುಹಾಸಂಗಿಯೆಡೆಯಲಂ ಗಾತ ಬಿ...

ಮರಿತನದ ಮರವೆಯಿಂ ಮರಸಿ ತಂದಪೆಯಾ? ಚಿತ್ರಾಂಜಲಿಯ ಗ್ರೀಷ್ಮ ಸಂತಾಪಕೆನ್ನ? ನಸೆದ ನಲವಿನ ನೆನಹಿನಂಜನದಿ ನನ್ನ ಸೋರೆದೆಯ ಸೇದೆಯಂ ಸವರೆ ಬಂದಪೆಯಾ? ೪ ಸಾಕು, ನಿನ್ನುಪಚಾರಗಳನೊಲ್ಲೆನದನು ಇನಿತು ಬೇಗನೆ ಮರೆತೆಯಾ? ನಾನುಮಾಕೆ ಈರ್‍ವರಾವಿದ್ದೆ ವಿಲ್ಲಿಯ...

ದಾಯಿ ಹಾಲನೆ ನಂಬಿ ಬಾಯಾರಿ ಬಸವಳಿದು ತಾಯೆ ಎಂದರಚಲುಂ ಮಿಸುಕದಿರೆ ರಸನೆ, ನೀನೆಮ್ಮನರಸುತಯ್ತಂದು ತೊಡೆಯಲಿ ತಳೆದು ಮೊಲೆಯಿನಿಂತೆಮ್ಮ ಬಾಯ್ದುಂಬಿಸಲು ಸಸಿನೆ, ೪ ಧನ್ಯರಾವೆಮ! ದಾಯಿಯೂಡಿಸಿದ ಮಗು ಮುಂದು ತನ್ನ ತಾನರಿತೆದ್ದು ನಿಡುನಿಲ್ಲಲಹುದೇ? ರವಿ...

(ಹಾಡು) ಭಾರತ ಭಾಗ್ಯ ವಿಧಾತಾ ತಾತಾತಾ ಸ್ವರಾಜ್ಯಮೆಮಗೆ ದಾತಾ ತಾತಾತಾ ||ಪಲ್ಲ|| ಅನಾಧರ ನಾಥಾ ಪತಿತರ ನೇತಾ ಮದಾಂಧರ ಜೇತಾ ಪರತಂತ್ರರ ತ್ರಾತಾ ||೧|| ನೋಡೈ ನಿಮಿರೆಮೆಯೊಡೆಯಾ ನಮ್ಮ ತನುಮನ ಕ್ಷುಧೆಯಾ ನಗೆಯಮೃತದ ಜೀಯಾ ಕೇಳ್ನಿರಾಶೆಯ ಸೆಲೆಯಾ ||೨|...

‘ಎಲವೊ ದುರುಳ ನಿಷಾದ, ಕೊಂಚೆಯೆಣೆಯಿಂದಂ ಕಾಮಮೋಹಿತನಿನೆಯನನ್ನೆಸೆದೆ ಎಂದು, ನೀಂ ಪ್ರತಿಷ್ಠೆಯನೊಂದದಿರು ಧರೆಯೊಳೆಂದುಂ!೧ ಕನಿಕರಂ ಕನಲಲಿಂತಾದಿಕವಿ ಎಂದಂ.   ೪ ಗದ್ಗದಿಸಿತೊಡನೆ ವಾಣಿಯ ವೀಣೆ, ಮುಂತೇ ಲಿತು ಬಾಷ್ಪಗಾನ! ವಲಮದರ ಮಧುರಿಮೆಯಿಂ ನಿಮ್ಮ...

ಇನ್ನುಮೇತಕೆ ನಿನ್ನ ಮುಸುಕು ಮೌನವ ತೊರೆಯೆ? ಮುಚ್ಚಾಲೆಯಾಡಿ ದೊಲ್ಲಯಿಸುವೇಕೆನ್ನ? ತಳಮಳಿಪುದೆನ್ನ ಮನ ನಿನ್ನ ತೆರೆಯಂ ಹರಿಯೆ- ನಿಲುಕದಲೆ ತಡೆವೆ; ಬುಲ್ಲಯಿಸುವೇಕೆನ್ನ? ೪ ಸೊಲ್ಲಿಲ್ಲದುಲಿಗಳಿಂದುಲಿವ ನಿನ್ನಯ ಸೊಲ್ಲ ಸೆಲೆಯಿಂದ ಹಾಡುಲಿಯ ಬಲ್ಲುದೇ...

ರಾಗ ದೇಶ ಜಿಲ್ಲಾ-ತ್ರಿತಾಲ ಏನೆದ್ಭುತ ಮಹಿಮೆಯೊ ನಿನ್ನ ಪ್ರಭೋ ಪೊಗಳಲಳವೆ ಎನ್ನ || ಪಲ್ಲ || ತಡೆಯರಿಯದೆ ಹರಿಯುವ ಗಗನತಲಂ ನಿನ್ನೊಡೆತನದ ಪತಾಳೆಯೊಲು ವಲಂ ನೆಳಲಿಸಿ ಹೊದಿಪುದು ವಸುಮತಿಯಗಲಂ ನಿನ್ನ ಪ್ರಭಾವವನು || ೧ || ನಿಲಲಾರದ ದಿನಕರನನುದಿನದಿ...

ಕವಿತೆ ಮತಿಜಲ ನಲಿನ, ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ, ಕವಿತೆ ನವರಸ ರಂಗ ವದು ತ್ರಿವೇಣಿಯ ಸಂಗ ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬ ಧ್ಯಾನ ಗನಿಗಳ ರನ್ನ, ಪ್ರಣಯ ಭಿಕ್ಷುವಿನನ್ನ, ಕವಿತೆ ಜೀವನಸಮರ ಯೋಧರ ತ...

1...3456