ಮಾಲಕಂಸ ಒಡೆಯ ನಿನ್ನಾಶೆಯೊಳೆ ತೊಡಕಿ ನಾ ಮಿಡುಕುತಿರೆ ಹಡೆದಮ್ಮ ಕೂಗಿದಳು: “ಹುಡುಗಿ ಇಲ್ಲಿಗೆ ಬಾರೆ!” ಜಡಭಾವದಿಂದ ಎಳೆದಿಡುತಲಡಿಗಳನು ನಡೆದು ಅವಳೆಡೆಗೆ ಕೇಳಿದೆ: “ಕರೆದುದೇನು?” ಕಿರುನಗೆಯ ನಗುತಮ್ಮ ಹೊರಮನೆಗೆ ಕರೆ...

೧ ಕೂಗು ಕೂಗೆಲೆ ಕೊಗಿಲೆಯೆ ನೀ ಗಳಪುತಿರು ಇರು ಅರಗಿಣಿ! ಏಗಲೂ ನುಡಿ ಕೊಳಲೆ, ವೀಣೆಯೆ- ರಾಗಿಸಲಿ ನಿನ್ನಾ ಧ್ವನಿ! ನಿಮ್ಮ ಉಲುಹಿನೊಳೆಲ್ಲಾ…. ನಿಮ್ಮ ಉಲುಹಿನೊಳೆಲ್ಲ-ಕೇಳುವೆ ನಮ್ಮವನ ಸವಿಸೊಲ್ಲಾ. ೨ ತುಂಬುದಿಂಗಳ ಬಿಂಬವೇ ನೀ ಕಾಂಬೆಯೇಕೊಂದ...

ಮೋಹನ ೧ ಮೂರು ದಿನಗಳು ಜಾರಿದುವು, ಬರಿ- ದಾರಿ ಕಾಯುತಲಿರುವೆನು. ಹಾರಯಿಕೆಯಂತಹದು ! ನನ್ನವ ಬಾರನೇಕೆನುತಿರುವೆನು. ಬರುವೆನೆನ್ನುವ ಓಲೆಯಿಲ್ಲವ- ನರುಹಿದೊಸಗೆಗಳಿಲ್ಲ, ಬರುವನೆನ್ನುತ ಬಗೆಯಿದೇನೋ ಮೊರೆಯುತಿದೆ ಸುಳ್ಳಲ್ಲ. ಎಂತಲೇ ದಿನವೆಲ್ಲಾ&#823...

ಧನ್ಯಾಸಿ ಸತಿಯನಿತು ಪತಿಗೆ ಹತ್ತಿರದ ಜೊತೆಯಾಸತಿಗೆ ಪತಿಯನಿತು ಬಳಿಯಾವುದಿಲ್ಲವಂತೆ ! ಕತೆಯ ಮಾತಿದು ! ಅಲ್ಲದಿರಲು ನಮ್ಮಿಬ್ಬರೊಳು ಅತಿ ದೂರದಂತರವಿದೇತಕಂತೆ ? ಮಡದಿಯಲ್ಲದೆ ಅವನ ಮುಡಿಗೆ ನಾನಾಗಿದ್ದ- ರೆಡೆಬಿಡದೆ ಇರುತಿರ್‍ದೆ ಮುಡಿಯ ಮೇಲೆ, ಮುಡ...

ಮಧ್ಯಮಾವತಿ ಕೇಳಿದೆನು ನಾನೆನಿತೊ ನನ್ನ ವ- ನೇಳಿಗೆಯ ಕತೆಯನ್ನ, ಹೇಳಿದರು ಹಲಜನರು ನೋಡಿದ ಕೇಳಿದಾ ಸ್ಥಿತಿಯನ್ನ; ೧ ಎಳೆಯ ಬಿಸಿಲಲಿ ತಳಿರ ಮೆಲುಪನು ಸಲಿಸಿ ಸವೆದೊಡಲಂತೆ- ಅಲರಿನರಳಿಕೆಯಾಯ್ದು ಬಲಿದಿಹ ಕಳೆಯ ಕಣ್-ಮೊಗವಂತೆ- ಚೆಲುವೆಯರ ಮನ ಸೆಳೆದು ...

ಎಂತಿರಲು ಬಹುದು? ನನ್ನಾತನೆಂತಿರಬಹುದು….? ಇಂದಿರಮ್ಮನ ಇನಿಯನಂತೆ ತಿಳಿಗಪ್ಪ-ಮೈ- ಯಂದದರಳಿದ ಕಣ್ಣ, ತುಂಬುದಿಂಗಳ ಮೊಗದ ತರುಣನಿರಬಹುದೊ….? ಇಲ್ಲದಿರೆ ಗೌರಮ್ಮನಾ ಎರೆಯನಿಹನಲ್ಲವೇ? ಆತನೊಲು ಕೆಂಗಣ್ಣಿ- ನುರಿಮೊಗದ, ಬೆರಗಾಗಿಸುವ ವೇ...

ತೋಡಿ ಚೆಲುವು ಹಿರಿಯದೊ !-ಹೃದಯ- ದೋಲವು ಹಿರಿಯದೊ….! ಚೆಲುವಿನಲಿಯೆ ಒಲವು ಇಹುದೊ! ಒಲವಿನಲಿಯೆ ಚೆಲುವು ಇಹುದೊ! ಚೆಲುವು ಹಿರಿಯದೋ!-ಹೃದಯ- ದೊಲವು ಹಿರಿಯ….! ೧ ಇನಿಯನಗಲ ನೆನಸಿ ನೆನಸಿ ಮನೆಯಲಿರಲು ಬೇಸರೆನಿಸಿ ದಣಿದ ಮನವ ತಣಿಸಲೆಣ...

ಜೀವನಪುರಿ ೧ ಪಾಪಿ ನಾ, ತಿಳಿಗೇಡಿ ಅಂದು ಅರಿಯದೆ ಹೋದೆ, ನಾಚಿಕೆಗೆ ಮೈಮಾರಿ ಮನದಳಲಿಗೀಡಾದೆ. ಕೈಯ ಹಿಡಿವಾನಿಯ, ಕುಲದೋಜ ನಗೆಯಲ್ಲಿ ಮೈಯ ಹಿಡಿದಲುಗಿ ಹೇಳಿದರು “ನೋಡೇ ಇಲ್ಲಿ, ಚೆನ್ನಾಗಿ ಕಂದೆರೆದು ನಿನ್ನವನ ಮೊಗನೋಡು!” ಎನ್ನುತಿರೆ...

ಗಝಲ್ ೧ ಅವನಿಗಾಗಿಯೆ ಬವಣಿಯೊಂದುತ ಎದೆಯ ಕುದಿಯೊಳು ಕಾಯುತ, ಸವಿಯ ಕಾಣದೆ ಬಾಳಿನಲಿ ಬಿಸು- ಸುಯಿಲ ಬೇಗೆಗೆ ಬೇಯುತ ಸವೆಯುತಿಹೆ ನಾನಿಲ್ಲಿ….! ಸವೆಯುತಿಹೆ ನಾನಿಲ್ಲಿ-ಕತ್ತಲು- ಕವಿದ ಕಿರುಮನೆಯಲ್ಲಿ. ೨ ಇಲ್ಲಿ ಕತ್ತಲು ಕವಿದ ಕಿರುಮನೆ- ಯಲ್...

ಸಾರಂಗ ಅಗಲಿಕೆಯೆ, ನಿನ್ನಗಲನಳೆಯುವವರಾರು ? ಬಗೆಯೊಲವೆ ನಿನ್ನ ನೆಲೆ ತಿಳಿಯುವವರಾರು ? ಹಿಂದೆ ಗೋವಳತಿಯರು ನಂದಕಂದನನಗಲಿ ದಂದುಗದಿ ಮೈಮನದ ಹೊಂದಿಕೆಯ ಮರೆಯುತಲಿ ನೊಂದು ನಿಡುಸರದಿ ಮನಬಂದಂತೆ ಕೂಗುತಲಿ ಬೆಂದು ಬಾಯ್‌ಬಿಡುತ ಅಲೆದಾಡಿದರು ಅಡವಿಯಲಿ ...

1...5678