ನಕ್ಕರೆ ನಕ್ಕೇ ನಗುವದು, ಅತ್ತರೆ ಅತ್ತೇ ಅಳುವುದು-ಒಮ್ಮೊಮ್ಮೆ – ಆಡಿದರೆ ಆಡಿಯೇ ಆಡುವದು, ನೋಡಿದರೆ ನೋಡಿಯೇ ನೋಡುವುದು ಒಮ್ಮೊಮ್ಮೆ- ಹುಚ್ಚುಖೋಡಿ! ಮುದ್ದಿಡಹೋದರೆ ಬಿಕ್ಕಿಸಿ ಅಳುವುದು. ಗುದ್ದಲುಹೋದರೆ ಫಕ್ಕನೆ ನಗುವುದು. ಹುಚ್ಚುಖೋಡಿ! ...

ನನ್ನ ಮಗುವಿನ ಮುಚ್ಚಿದ ಮುಟ್ಟಿಗೆಯಲ್ಲಿ ಮೂಲೋಕದೊಡೆತನವಿರಬಹುದು. ತೆರೆದು ನೋಡಲೆ….? ಬೇಡ! ಭಾಗ್ಯ ತೆರದ ಮೇಲೆ ಕೈ ತೆರೆವುದೇನು ತಡ ? ನನ್ನ ಮಗುವಿನ ಮುಚ್ಚಿದ ಮುಟ್ಟಿಗೆಯಲ್ಲಿ ಧ್ರುವನ ಚಿಕ್ಕೆಯಿರಬಹುದು! ತೆರೆದು ನೋಡಲೆ….? ಬೇಡ ...

ಯಾರ ದೃಷ್ಟಿ, ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ? ಮುಂಜಾವಿನ ಮಂಜು ತಾಕಿತೋ ? ಮುಚ್ಚಂಜೆಯ ನಂಜು ತಾಕಿತೋ ? ಯಾರ ದೃಷ್ಟಿ ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ? ಹೂಗಳು ಕಣ್ಣು ಬಿಟ್ಟುವೊ ? ಚಂದ್ರನ ಕಿರಣ ನೆಟ್ಟುವೊ ? ಯಾರ ದೃಷ್ಟಿ ತಾಕಿತ...

ಕಂದಾ! ನಿನ್ನ ಮುಖದ ಮುದ್ರಾಕೃತಿಯು ನನ್ನಂತಿದೆ; ಆದರೆ ದೇಹದ ಭದ್ರಾಕೃತಿಯು ಅವರಂತಿದೆ. ಕಂದಾ! ನಿನ್ನ ಕಣೊಳಗಿನ ಕರುಣೆ ನನ್ನಂತಿದೆ; ಆದರೆ ನೋಟದೊಳಗಿನ ಸರಣಿ ಅವರಂತಿದೆ. ಕಂದಾ! ನಿನ್ನ ಗದ್ದದ ಮೇಲಣ ಕುಣಿಯು ನನ್ನಂತಿದೆ; ಆದರೆ ಮೂಗಿನ ಕೆಳಗಣ ಮಣ...

ನೆಲದ ಮೇಲೆ ಈಸುವುದು, ನೋಡಿದಿರಾ ಮೀನಾವತಾರ ! ಮನುಕುಲೋದ್ಧಾರಕ ನನ್ನ ಕುವರ ! ಬಯಲನ್ನೆಲ್ಲ ಬೆನ್ನಲಿ ಹೊತ್ತಿರುವುದು, ನೋಡಿದಿರಾ ಕೂರ್ಮಾವತಾರ ! ವಂಶಾಧಾರಸ್ತಂಭ ನನ್ನ ಕುವರ ! ಮುಗಿಲನ್ನೆ ಮೊಗದಿಂದೆತ್ತಲು ಹವಣಿಸುವದು. ನೋಡಿದಿರಾ ವರಾಹಸ್ವಾಮಿ ...

ಎಳೆಬಾಳೆಯು ಸುಳೆಯೆಲೆಗಿಂತಲೂ ತೆಳುವಾದ ನಿನ್ನ ಮೈದೊಗಲ ನೋಡುತ್ತಲೆ ಕಾಣುವುದು-ನೇಕಾರರ ನಯದ ಕಣ್-ನೆಲೆ. ಮಳೆಗಾಲದ ಮುಗಿಲುಗಳಿಗಿಂತಲೂ ಬಣ್ಣದಲ್ಲಿ ಮಿಗಿಲಾದ ನಿನ್ನ ಕಣ್ಣ ನೋಡುತ್ತಲೆ ಕಾಣುವುದು-ಜಿನುಗಾರರ ಜಿನುಗಿನ ಗೊತ್ತು. ಉತ್ತಮಾಶ್ವದ ಗತ್ತಿನ...

ಅವ್ವಾ ನೋಡಿರೆ! ಮಲ್ಲಾರಿ ಮಾರ್‍ತಂಡನ, ಎಲ್ಲರನು ಗೆಲ್ಲಲು ನಿಂತ ಜಗಜಟ್ಟಿಯ. ಅವ್ವಾ ನೋಡಿರೆ! ಗುಡ್ಡದ ಕುಮಾರಸ್ವಾಮಿಯ, ದೇವರ ದಣ್ಣಾಯಕನ, ಶಾಂತ ಸುಕುಮಾರ ಸುಬ್ಬಯ್ಯನ. ಅವ್ವಾ ನೋಡಿರೆ! ಕುಳಿತಿರುವ ರತಿಯಿಲ್ಲದ ಕಾಮಣ್ಣನ ನನ್ನ ತನುಜನಾಗಿ ಬಂದ ಅನ...

ನನ್ನ ಬೆಲ್ಲದಚ್ಚಿನ ಬೊಂಬೆಯೆ! ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ. ನೀನು ನಗುತ್ತಲೆ ನಾನು ನಿನ್ನವಳೆಂದೆನಿಸುವುದು. ನೀನು ಅಳುತ್ತಲೆ ನೀನು ನನ್ನವನೆಂದೆನಿಸುವುದು. ನೀನು ನಕ್ಕರೊಂದು ರುಚಿ, ನೀನು ಅತ್ತರೊಂದು ರುಚಿ. ನಿನ್ನ ಬಾಡಿದ...

ನನ್ನ ರನ್ನಾ ಚೆನ್ನಾ! ನನ್ನ ಮಂಗಲಗೌರೀ! ನೋಡವ್ವಾ-ನೋಡು ನಿನ್ನ ಸೊಬಗಿನ ಕಣ್ಣಿನಿಂದೆ. ನನ್ನ ತಾಳಿಯ ಮಣಿಯೊಳಗಿನ ತೇಜವಲ್ಲವೆ ನೀನು? ನನ್ನ ಪ್ರಾಣದ ಪದಕವೆ! ನನ್ನ ಮಾಲಕ್ಷ್ಮೀ! ನೀಡವ್ವಾ-ನೀಡು ನಿನ್ನ ವರದಹಸ್ತದಿಂದೆ. ನನ್ನ ಬೇಳೆಯು ಮಣಿಯೊಳಗಿನ ಬ...

ನನ್ನ ಬಾಲಗೋಪಾಲನ ಗೋದಲೆಗಳವ್ವಾ ಇವು; ಕಪಿಲೆಕಾಮಧೇನುಗಳು ಕಟ್ಟಿಹವಿಲ್ಲಿ. ಅವನಿಗೇನು ಕಡಿಮೆ? ಗಂಗೆಗೆ ಉಣಿಸುವ ಹಿಮವತಿಯ ತುಂಗಶಿಖರದ ಮಾದರಿಗಳಿವು. ಅವನಿಗೇನು ಕಡಿಮೆ? ವಾತ್ಸಲ್ಯದ ವಿಜಯಯಾತ್ರೆಯಲ್ಲಿ ನನ್ನ ಕಂದನೂದುವ ಅವಳಿ ಶಂಖಗಳಿವು. ಅವನಿಗೇನ...

1234...16