ವರದರಾಜನ್ ಟಿ ಆರ್

ವರದರಾಜನ್ ಟಿ ಆರ್ ರವರು ಕಲಾವಿದರು, ಸಮಾಜ ಸೇವಕರು ಹಾಗೂ ಕನ್ನಡ, ಆಂಗ್ಲ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ಬರೆಯುವವರಾಗಿದ್ದಾರೆ. ಇವರು ಹಲವು ಸಾಹಿತ್ಯ ಸಮ್ಮೇಳನಗಳು ಹಾಗೂ ಆಕಾಶವಾಣಿ ಕಾರ್‍ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾಟಕಕಾರರಾಗಿ ಹಲವಾರು ನಾಟಕಗಳನ್ನು ರಚಿಸಿದ್ದಾರೆ, ನಿರ್‍ಧೇಶಿಸಿದ್ದಾರೆ ಹಾಗೂ ನಟಿಸಿದ್ದಾರೆ. ಇವರ ಹಿಂದಿ ಕಾದಂಬರಿ "ಸಲ್ಮಾ"ಗೆ ೨೦೦೧ನೆಯ ರಾಷ್ಟ್ರ ಪ್ರಶಸ್ತಿ ದೊರಕಿದೆ.

ಕಾವ್ಯ

ಕವಿಯ ಹೊಟ್ಟೆಯಲ್ಲಿ ಹುಟ್ಟಿದ ಕಾವ್ಯ, ತಲೆಯಲ್ಲಿ ಹುಟ್ಟಿದ ಕಾವ್ಯ ಅಕ್ಕ ತಂಗಿಯರು. ಒಂದು ರಕ್ತಸಂಬಂಧ ಮತ್ತೊಂದು ಮುಕ್ತ ಸಂಬಂಧ. *****

ವರಾನ್ವೇಶಣೆ

ಹೆಣ್ಣ ಹೆತ್ತವರು ನಾವು ಲೇಖಕರು. ನಮ್ಮ ಮಕ್ಕಳು ಕಾವ್ಯ, ಕವಿತಾ ನವ್ಯಾ, ರೂಪಕಾ ಏಕಾಂಕಿ, ಕಾದಂಬರಿ. ಬೇಕಾಗಿವೆ ಇವರಿಗೆಲ್ಲ ಕೈ ಹಿಡಿದು ಸಾಕಬಲ್ಲ ಬಾಳ ಬೆಳಗಬಲ್ಲ ಸಂಪಾದಕ, […]

ಊಸರವಳ್ಳಿ

ಬಣ್ಣ ಬದಲಿಸುವ ಸಮಯ ಸಾಧಕ ನಾನಲ್ಲ ಎಂದು ನೊಂದು ನುಡಿಯಿತು ಊಸರವಳ್ಳಿ. ಜೊತೆಗೆ ಹೀಗೊಂದು ಉಪದೇಶ ಕೊಟ್ಟಿತು ನನ್ನಂತೆ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಿ. *****

ಸಿಹಿಸುದ್ದಿ

ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ “ಕಲ್ಯಾಣಿ,” ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು. […]

ನಗೆ ಹನಿಗವನ

ನಗುವ ಚಿಮ್ಮಿಸಿ ನೋವ ಮರೆಸಿ ಮೊಗವರಳಿಸಿತು ನಗೆ ಹನಿ. ನೂರು ಮಾತನು ಮೂರು ಮಾತಲೇ ಹೇಳಿ ಮುಗಿಸಿತು ಹನಿಗವನ. ನಗುವ ತರಿಸಿತು ಮನವ ಮುಟ್ಟಿತು ಬುದ್ಧಿ ಹೇಳಿತು […]

ಮಿಂಚು-ಮಳೆ

ಹೆಂಡದಂಗಡಿಯವನ ಹೆಂಡತಿಯ ಕಣ್ಗಳಲಿ ವಜ್ರದೊಡವೆಗಳು ತಂದ ಆನಂದದ ಮಿಂಚು ಗುಡುಗಿ ಗಡಂಗಿನಲಿ ಕಣ್ಣೀರ ಮಳೆಗರೆಯಿತು ಸಾವಿರಾರು ಕುಡುಕರ ಮಡದಿ ಮಕ್ಕಳ ಕಳಾಹೀನ ಕಣ್ಗಳಲಿ *****

ಗುಲಾಬಿ

ನಮ್ಮ ಮನೆಯ ಹೂದೋಟದಲ್ಲಿ | ಒಂದು ಗುಲಾಬಿ ಅರಳಿತ್ತು| ಸುಂದರ ಗುಲಾಬಿ ಅರಳಿತ್ತು | ಕೆಂಪು ಗುಲಾಬಿ ಅರಳಿತ್ತು|| ಹಾದಿ ಬದಿಯಲಿ | ಹಾದು ಹೋಗುವರ | […]

ಹೂಮಳೆ

ತುಂಬಿ ಬಂದಿದೆ ಹೃದಯವಿಂದು ನಿನ್ನ ನೆನಪೇ ತಂದಿದೆ | ಅಲೆಗಳಿಲ್ಲದೆ ಪ್ರೇಮಗಂಗೆ ಶಾಂತವಾಗಿ ಹರಿದಿದೆ || ಪ || ಹುಣ್ಣಿಮೆಯ ಈ ಶುಭ ರಾತ್ರಿ ಹಗಲಿನಂತೆ ಬೆಳಗಿದೆ […]