
ದೂರದೊಂದು ಹಾಡಿನಿಂದ ಮೂಡಿಬಂದ ಕನ್ನಡ; ನನ್ನ ಮುದ್ದು ಕನ್ನಡ ಕಾಣದೊಂದು ಶಕ್ತಿಯಿಂದ ಉಸಿರಿಗಿಳಿದ ಕನ್ನಡ; ನನ್ನ ಪ್ರಾಣ ಕನ್ನಡ ನೀಲಿ ಕಡಲ ಅಲೆಗಳಿಗೆ ದನಿಯ ಕೊಟ್ಟ ಕನ್ನಡ; ಸಪ್ತಸ್ವರ ಕನ್ನಡ ತೇಲಾಡುವ ಮೋಡಗಳಿಗೆ ಮುತ್ತನಿಟ್ಟ ಕನ್ನಡ; ಸಹ್ಯಾದ್ರಿ...
ಕನ್ನಡಿಗರು ನಾವು ಕನ್ನಡಿಗರು; ಕರ್ಣನಿಗೂ ಕಡಿಮೆ ಇರದ ದಾನಶೂರರು ನಾವು ಕನ್ನಡಿಗರು! ಧೀಮಂತರು ನಾವು ಕನ್ನಡಿಗರು ಕಾವೇರಿಯ ಉಳಿಸಿಕೊಳದ ಹೋದ ಶಕ್ತಿ ಗಳಿಸಿಕೊಳದ ಮಾನ ಹೋದರೂನು ಮಾನ ಉಳಿದುದಂತೆ ನಟಿಸುತಿರುವ ಧೀಮಂತರು ನಾವು ಕನ್ನಡಿಗರು! ಸ್ನೇಹಪರರ...
ಧಾರವಾಡ ತಾಯೆ ನಿನ್ನದೆಂತ ಮಾಯೆ! ಚಿತ್ತ ತಣಿಸುವ ಸತ್ಯ ಸಾರುವ ತತ್ತ್ವಲೇಪದ ಕಾವ್ಯ ಕರ್ಮಕೆ ಮಡಿಲು ಆದ ತಾಯೆ-ಆಹ ನಿನ್ನದೆಂತ ಮಾಯೆ! ಲೋಕ ಮೆಚ್ಚುವ ಸತ್ವ ಮಿಂಚುವ ಆದಿ ಪಂಪ ಆ ಕುವರವ್ಯಾಸರ ನಿನ್ನ ಹೊನ್ನ ಸಿರಿ ಗರ್ಭದಿ ಅರಳಿಸಿ ಜಗಕೆ ತಂದೆಯಲ್ಲೆ ...
ಬೇಲೂರ ಗುಡಿಯಲ್ಲಿ ಕಲೆಯಾದ ಶಿಲೆಯಲ್ಲಿ ದೀನ ದುರ್ಬಲರೊಡಲ ಬಿಸಿಯುಸಿರಿದೆ ಆ ಬಿಸಿಯು ಮೈ ಸೋಕಿ ತೆರೆದ ಈ ಕಣ್ಮುಂದೆ ಕಪ್ಪು-ಇತಿಹಾಸ ಸಂಪುಟ ತೆರೆದಿದೆ ಭವ್ಯತೆಯ ಹಂಪೆಯಲಿ ಬೆವರು-ಕಂಬನಿ-ರಕ್ತ ಹೊಳೆ ತುಂಬೆ ಭದ್ರೆಯಾಗಿ ಹರಿದಾಡಿದೆ ಇದರಲ್ಲಿ ಮಿಂದೆ...
ಕನ್ನಡ ನಾಡು ಚಿನ್ನದ ಬೀಡು ಪಾವನವೀ ನಾಡು | ಎಲ್ಲು ಚೆಲುವಿನ ಸಿರಿ ನೋಡು ಕನ್ನಡ ನಾಡು ಕಿನ್ನರ ಬೀಡು ರೂಪಸಿಯರ ನಾಡು | ಸಿಂಹ ವಾಣಿಗಳಾ ನೋಡು ಕನ್ನಡ ನಾಡು ಹಸಿರಿನ ಬೀಡು ಗಿರಿ ಕಾನನ ನಾಡು | ಇಲ್ಲಿ ಸಹ್ಯಾದ್ರಿಯ ನೋಡು ಕನ್ನಡ ನಾಡು ಶಾರದೆ ಬೀಡು...
ಬಂಡವಾಳವಾಗುತಿದೆ ಕನ್ನಡ ಭಾಷೆ – ನಮ್ಮ ಕನ್ನಡ ಭಾಷೆ ಬಂಡವಾಳವಾಗುತಲಿ ಅಳಿದು ಹೋಗುತ್ತಲಿದೆ ಕನ್ನಡ ಭಾಷೆ – ನನ್ನ ಕನ್ನಡ ಭಾಷೆ ಓಟಿಗಾಗಿ ಸೀಟಿಗಾಗಿ ಜನರ ಕುಣಿಸೊ ನೋಟಿಗಾಗಿ ಕನ್ನಡವನೆ ನಂಬಿಹರು ಸ್ವಾರ್ಥಭರಿತ ಧೂರ್ತರು ಎತ್ತ ಹೋದರ...
ಎದೆಯ ಮಾಮರದಲ್ಲಿ ಕುಳಿತಿರುವ ಕೋಗಿಲೆಯೆ ಹಾಡು ನೀ ಸ್ವರವೆತ್ತಿ ಕನ್ನಡದಲ್ಲಿ ಈ ಮಣ್ಣ ಸತ್ವವನು ಇದರಂತರಾರ್ಥವನು ದಿಕ್ ದಿಕ್ಕಿಗೂ ಹರಡು ಅಭಿಮಾನದಲ್ಲಿ ಕವಿ ಪಂಪನ ಅರಿಯುತ ರನ್ನನ ಮನಗಾಣುತ ವಚನ ಸಾಗರದಲ್ಲಿ ಮಿಂದೇಳುತ ನಾರಣಪ್ಪಗೆ ನಮಿಸಿ ಸವಜ್ಞಗೆ...







