ಡಾ|| ಕಾ ವೆಂ ಶ್ರೀನಿವಾಸಮೂರ್‍ತಿ

ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.

ಸಿರಿಗನ್ನಡ ವೈಭವ

ಕಾಣದ ಚೇತನ ತುಂಬಿದೆಯೊ ಕನ್ನಡ ಮಣ್ಣಲ್ಲಿ ಮೀರಿದ ಸತ್ವವು ಅಡಗಿದೆಯೊ ಕನ್ನಡ ನುಡಿಯಲ್ಲಿ ಕಬ್ಬಿಗರುದಿಸಿ ಹಾಡಿದರೊ ಕೊಳಲಿನ ಕಂಠದಲಿ ಗಂಡುಗಲಿಗಳು ಮೆರೆದಾರೊ ಕತ್ತಿಯ ಹಿಡಿಯುತಲಿ ಕನ್ನಡ ಕೀರ್ತಿ […]

ನಿಂತ ನೆಲದಲ್ಲಿ

ಕಣ್ಣೆದುರೇ ಕಣ್ ಮರೆಯಾಗುತಿದೆ ಮಾತು ಕಲಿಸಿದ ಕನ್ನಡವು ನಿಂತ ನೆಲವು ಪರದೇಶಿಯಾಗುತಿದೆ ಜನ್ಮ ಕೊಟ್ಟು ಕರ್ನಾಟಕವು || ಪಲ್ಲವಿ || ಇಲ್ಲೆ ಹುಟ್ಟಿ ನದಿಯಾಗಿ ಹರಿದ ನಮ […]

ಕನ್ನಡ ಕೀರುತಿ

ದಿಕ್ ದಿಕ್ಕಿಗೂ ಹಬ್ಬಲಿ ಕನ್ನಡದ ಕೀರುತಿ ಕನ್ನಡ ಭುವನೇಶ್ವರಿಗೆ ಬೆಳಗಲೆಂದು ಆರತಿ ಸಹ್ಯಾದ್ರಿಯ ಕೋಗಿಲೆಯು ಮೈದುಂಬಿ ಹಾಡಿರೆ ಬೇಲೂರಿನ ಬಾಲೆಯರು ಮೈಮರೆತು ಕುಣಿದಿರೆ ಬೆಳ್ಗೊಳದ ಗೊಮ್ಮಟನು ವಿಸ್ಮಯದಿ […]

ಎದ್ದೇಳು ಕನ್ನಡಿಗ

ಎದ್ದೇಳು ಕನ್ನಡಿಗ ನಿದ್ರೆಯನು ತೊರೆದು ಕಣ್ತೆರೆದು ನೋಡೋ ಕನ್ನಡದ ದೈನ್ಯತೆಯ ಹೋರಾಡು ನೀನು ಕರುನಾಡ ಧೀಮಂತ ಆಗುವೆಯೋ ನೀನು ಕಲಿಯುಗದ ಹನುಮಂತ ಪರಭಾಷಾ ಹಾವಳಿಯು ಕನ್ನಡವ ಮುತ್ತಿರಲು […]

ಎಲ್ಲೆಲ್ಲೂ ಕನ್ನಡ

ಹರಿಯುವ ಹೊಳೆಗಳ ಜುಳುಜುಳು ರವದಲಿ ಕನ್ನಡವಿದೆ ಸಿರಿಗನ್ನಡವು ತುಳುಕುವ ಕಡಲಿನ ಅಲೆ ಮೊರೆತದಲಿ ಕನ್ನಡವಿದೆ ನುಡಿಗನ್ನಡವು ಹಾಡುವ ಕೋಗಿಲೆ ಗಾನದ ಇಂಪಲಿ ಕನ್ನಡವಡಗಿದೆ ಕನ್ನಡವು ಕೂಗುವ ಕಾಜಾಣದ […]

ನಿತ್ಯ ಸತ್ಯ

ಕನ್ನಡವೆ ಸತ್ಯ ಕನ್ನಡವೆ ನಿತ್ಯ ಕನ್ನಡರೆ ನಿತ್ಯ ಸತ್ಯ ಕನ್ನಡವ ಮರೆತ ಈ ಕಾವ್ಯ ತುಡಿತ ಎಷ್ಟಿದ್ದರೂನು ಮಿಥ್ಯ ಕಣ್ಸೆಳೆದರೇನು ಮಲ್ಲಿಗೆಯ ಮಾಲೆ ಕನ್ನಡಕು ಅಲ್ಲ ಮಿಗಿಲು; […]

ಕನ್ನಡ ಉಳಿಸೇಳಿ

ಎದ್ದೇಳಿ ಎದ್ದೇಳಿ ಎದ್ದೇಳಿ ಎಲ್ಲ ಕನ್ನಡದ ತನವಿರುವ ಕನ್ನಡಿಗರೆಲ್ಲ ಬೆಳಗಾವಿ ನಮ್ಮಿಂದ ಸರಿಯುವ ಮುನ್ನ ಬೆಂಗ್ಳೂರು ದೆಹಲಿಯ ವಶವಾಗೊ ಮುನ್ನ ಕನ್ನಡವೆ ಮರೆಯಾಗಿ ಹೋಗುವ ಮುನ್ನ ಎದ್ದೇಳಿ […]

ಕನ್ನಡ ಪ್ರೇಮ

ಹುಟ್ಟುವುದಿದ್ದರೆ ಮರುಜನುಮದಲಿ ಕನ್ನಡ ನಾಡಲ್ಲೆ ಈ ಚಿನ್ನದ ಬೀಡಲ್ಲೆ ಹುಟ್ಟದಿದ್ದರೂ ಮಾನವನಾಗಿ ಕಾವೇರಿಯಲಿರುವೆ – ಅಲ್ಲಿ ಹನಿಹನಿಯಾಗಿರುವೆ – ಕನ್ನಡ ಹೊಂಬೆಳೆ ಸಿರಿ ತರುವೆ ಹಾಡದಿದ್ದರೂ ಗಾಯಕನಾಗಿ […]