ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ...
ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ ತಬ್ಬಿಬ್ಬು. ಬಾರ್‍ಲಿ ಬೆಳೆಯೆಲ್ಲ ಕೊಯ್ದು ಚಪ್ಪರದಲ್ಲಿ...
ಟೋರಿಕೋ ಮನೆಯವರು ನನಗೆ ತುಂಬ ಸ್ನೇಹಿತರು, ಬೇಕಾದವರು. ಝಪೋತ್ಲಾನ್ ಊರಿನಲ್ಲಿ ಅವರನ್ನು ಕಂಡರೆ ಯಾರಿಗೂ ಆಗತಿರಲಿಲ್ಲ ಅನ್ನಿಸತದೆ. ನನ್ನ ಮಟ್ಟಿಗೆ ಹೇಳುವುದಾದರೆ ತುಂಬ ಒಳ್ಳೆಯ ಸ್ನೇಹಿತರು, ಅವರೆಲ್ಲ ಸಾಯವುದಕ್ಕೆ ಸ್ವಲ ಮುಂಚಿನವರೆಗೂ ಹಾಗೇ ಇದ್ದರು....
ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು,...