Home / ರಸ ಸರಸ್ವತಿ ಮತ್ತು ಇತರ ಕವನಗಳು

Browsing Tag: ರಸ ಸರಸ್ವತಿ ಮತ್ತು ಇತರ ಕವನಗಳು

ಅದಿಗೊ ದೆಸೆಕೂಡುವೆಡೆ ತಿರೆಗೂರುತಿದೆ ಮುಗಿಲು ಹೆಬ್ಬಿದಿರ ಮೆಳೆಯ ಚೆಲುವನು ತೋರಿ, ಬಿಳಲೂರಿ ಹಬ್ಬಿರುವ ಮಹಾವಟವೃಕ್ಷದೊಲು ಹಸರಿಸುತ ಇದೆಕೊ ಎನುತಿದೆ ನನಗೆ ಮೈಬಿಡದ ಮಿಂಚಿನೊಳು ಕಾರೊಡಲ ಬಣ್ಣದೊಳು ತನ್ನ ಪನ್ನತಿಕೆಯನು ಮೆರೆವ ಗುಡುಗಿನೊಳು ಗಿರಿಮ...

ಗಿಡಬೆಳೆದು ಹುಡಿಗೂಡುತಿದೆ ಗುಡಿಯ ಗೋಪುರ ಮುಟ್ಟೆ ಮೈಲಿಗೆಯೆನ್ನೆ ಪಾಚೆಗಟ್ಟಿದೆ ತೀರ್ಥ ಅಟ್ಟ ಮಿಷ್ಟಾನ್ನವನು ತೊರೆದು ಹೆರಮನೆತಿರಿವ ಜಡಮತಿಯ ವರ್ತನೆಯ ತೋರುತಿದೆ ಯುವಚಿತ್ತ. ವಿಶ್ವಾತ್ಮನೊಳಕೊಂಡ ನುಡಿಗಳಕ್ಷಯಪಾತ್ರೆ ಗಳಿತಸತ್ವರ ಕರದಿ ವೃತ್ತಿಭ...

ಭವನುತ್ಸವಾಗ್ರದೊಳು ಮೆರೆವ ಗಣದುರವಣೆಯ ಹೋಲಿ ಭೋರಿಡುತಿಹುದು ಅಷಾಢದೀ ಗಾಳಿ ಓಲಾಡೆ ಗರಿಕೆದರುತಾವೇಶದೊಳು ತೆಂಗು ತವಕದೊಳು ಹುಯ್ಯಲಿಡೆ ಬೀಳವೊಲು ಬಿಗಿಹಿಡಿದ ಮರದ ಮಮತೆಯ ಗೂಢ ರಕ್ಷೆಯೊಳು ರೆಂಬೆಯೆಲೆ. ಬಾನ ತುಂಬಿಹ ಗಾಳಿಯಾಲಿಸುತ ತಣಿಯದಿದೆ ಧ್ಯಾ...

ಪ್ರಣತಾರ್ತಿಪಂಕದಿಂ ಕಪ್ಪಿಡಿದ ಪಾದದವ ವಿಧಿಯಿಚ್ಛೆ ಸ್ತಬ್ಧಗೊಳೆ ಮುಗ್ಧ ಕಾಮಾಂಗದವ ಎದೆ ಹಿಗ್ಗೆ ಮೈತಂದಿತೆನೆ ಪುಷ್ಟಧವಲಾಂಗ ಎಣೆಯಿರದ ಗೆರೆಗೊರಲ ಹಣೆಗುರುಳ ನೊಸಲವನು ದರಹಾಸವನು ಸೂಸಿ ದಯೆಯ ಮಕರಂದವನು ಹನಿಸುತ್ತ ಚುಂಬನೌತ್ಸುಕ್ಯವನು ಕಾಂಬರೊಳು ...

ಮರುಗುವೆಯ ನೀ ಗೆಳೆಯ ನಮ್ಮ ನಾಡಿನ ಪರಿಗೆ: ಜನವಿದಭಿಮಾನಕೃಪಣಮಸೂಯಾಭೂಯಿಷ್ಠ- ಮನುಕರಣಪಟು ನಟನಶೀಲಮನವಸ್ಥಿತಂ ಸಿರಿಯೊ ತಂದ್ರೋಪಹತಮುಚ್ಛಿಷ್ಟಭೋಗಿಮನ- ಮಸುರಲೋಭೋತ್ಸೃಷ್ಟವಿಜ್ಞಾನಯಂತ್ರಮದ- ವಾರಣಾವಿಷ್ಟ ನಾಗರಿಕ ನಿಸ್ವಾದು ನಿ- ಸ್ಸಾರಜೀವನಂ ಸ್ವಲ...

ಅಹ ಬಿಡುವೆ, ಶ್ರಾಂತಿ ದಯಪಾಲಿಸಿಹ ನಲ್ವರವೆ, ಎನಿತು ಚೆಲುವಾಗಿಸಿಹೆ ಈ ಬಳಕೆ ಸಂಜೆಯನು! ದಿನದ ಸ್ವರ್ಣಾದಾಯವೊಯ್ಯುತಿದೆ ದಿವಕಭ್ರ; ತುಹಿನಕಿರಣನ ಕೋಡು ಮುದದ ಮದ್ದಾನೆ ಬಾನ್‌- ಸರದೊಳಗೆ ಮುಳುಗಿ ಕೋಡೆತ್ತಿದೊಲು ತೋರುತಿದೆ; ಹಲಸು ಸಂಪಿಗೆ ಮಾವು ತ...

ತೆರಿಗೆ ಸಂದಿತು ದಿನಕೆ : ನಿಶೆ ತುಂಬಿರುವ ಪ್ರಾಣ- ಪಾನ ಪಾತ್ರೆಗಳಿಂದ ಚೈತನ್ಯ ರಸವೀಂಟಿ ಭಾನು ಸಂದನು ಮರೆಗೆ. ತಾರೆ ತಾರೆಗು ತಾಯ ತೆರವಿಹ ಮಹಾತಮದ ನಂಟು ತಿರೆಗಾಯ್ತೀಗ. ಅಂಬು ಕೋಶವ ಹೊಗುವೊಲಾಕೃಷ್ಟವಾದುವೆನೆ ಮರದ ಬತ್ತಳಿಕೆಯೊಳು ಲೀನವಾದವು ಹಕ...

ಇದು ಮೀಸಲೇ ನನಗೆ, ಈ ಬೆಳ್ಳಿ ಬಟ್ಟಲೊಳು ರತ್ನಕಾಂತಿಯ ಚೆಲ್ಲಿ ಕಳಕಳಿಪ ದಾಳಿಂಬೆ? ನೂತ್ನ ಋದ್ಧಿಯ ಪಡೆದ ಮೋದದೊಳಗೀ ಜಿಹ್ವೆ ಇದುವರೆಗು ಕಾರ್ಪಣ್ಯದೊಳಗಿದ್ದೆನೆನುತಿಹುದು ಬಿತ್ತಬಿತ್ತದ ರಸವ ಸವಿದು ಸವಿದಾಕ್ಷಣದಿ ಆಯುಷ್ಯ ಸಾರವನು ಬಟ್ಟಿಯಿಳಿಸುವ ...

ಇಹುದೆನ್ನಲಿರವಿಲ್ಲ ಇಲ್ಲವೆನಲಿಹುದಿರವು ಇದರ ತೆರವರಿವರಾರವನೊಬ್ಬ ಹೊರತು ಜನ್ಮಮೃತ್ಯುಗಳೆರಡು ತುದಿನಡುವೆಯಾಡುವೀ ಜೀವಲೀಲೆಯ ಮರ್ಮವೊರೆವರಾರರಿತು? ಬಿಂದು ಬಹುವಾಗೊಡೆದು ಅಂಗಾಂಗವಾಗುತ್ತ ಒಂದಾತ್ಮ ತಾನ್ನೆನ್ನುವನುಭಾವಹೊಂದಿ ಪಂಚಭೂತಗಳೊಡನೆ ಅದು-...

“ಹೊನಲಿನ ಗೆಲುವಿಲ್ಲಿದಕೆ ಕಮರಿಯ ಹಾರುವ ಸಾಹಸವಿಲ್ಲಿದಕೆ ಕನಿಕರದಿಂದಲಿ ಗಾಳಿ ತಳ್ಳಲು ಚರಿಸುವುದಲೆ ಹೆಳವನ ಹೋಲಿ ಹರಿಯದು ತನ್ನಿಂದಾಚೆ ಇದಕೆದೆಯೊಳು ದಿವಕೆಡೆಗೊಡದಿಹ ಪಾಚೆ ಚೆಲುವಿದರೀ ಸೋಪಾನ ಇದಕಾದೊಡೆ ಚಲಿಸುವ ಹಾಡುವ ಶುಚಿಗೊಳ್ಳುವ ಋತ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...