Tag: ಬೆಳುದಿಂಗಳು
-

ಬೆಳುದಿಂಗಳು
ಬೆಂಗಳೂರು ಬಿಟ್ಟು ಮೈಸೂರಿಗೆ ಬರುವ ಏಳು ಗಂಟೆ ರೈಲಿನಲ್ಲಿ ಕುಳಿತುದಾಯಿತು. ಆದರೆ ರಂಗಯ್ಯ ನನ್ನನ್ನೇಕೆ ಮೈಸೂರಿಗೆ ಬರ ಹೇಳಿದನೆಂಬುದು ಮಾತ್ರ ಸರಿಯಾಗಿ ಗೊತ್ತಾಗಲಿಲ್ಲ. ರಂಗಯ್ಯನ ಕಾಗದವನ್ನು ರೈಲಿನಲ್ಲಿ ತಿರುಗಿಸಿ ತಿರುಗಿಸಿ ನೋಡಿದೆ. “ಏನು! ಮನೆಯಲ್ಲಿ ಒಂದು ಹೆಣ್ಣು ಮಗುವಿಗೆ ಹುಟ್ಟಿದ ಹಬ್ಬ ಎಂದು ನನಗೆ-ಬೆಂಗಳೂರಿನಲ್ಲಿರುವವನಿಗೆ-ಔತನವೆ? ಇದಕ್ಕೋಸ್ಕರ ನಾನು ಬೆಂಗಳೂರಿನಿಂದ ಮೈಸೂರಿಗೆ ಹೋಗುವುದೆ! ಛೇ! ಛೇ! ಛೇ! ಈ ಯೋಚನೆ ಮೊದಲೇ ತೋರಲಿಲ್ಲವಲ್ಲಾ! ಈಗ ತಾನೆ ಏನು? ಮೈಸೂರಿಗೆ ಹೋಗುವುದಕ್ಕೆ ಬದಲಾಗಿ ಕೆಂಗೇರಿಯಲ್ಲಿ ಇಳಿದು ಬೆಂಗಳೂರಿನಿಂದ ಏಳೇ ಏಳು…

