ಹನಿಗವನ ಸತ್ಯ July 22, 2021January 4, 2021 ‘ಸತ್ಯ’ಮೇವ ಜಯತೆ ಇಂದಿಗಲ್ಲ, ಮುಂದೆಂದಿಗೋ; ‘ಸದ್ಯ’ಮೇವ ಜಯತೆ ಇಂದಿಗೆ-ಈಗಲೇ! *****
ಹನಿಗವನ ಆನೆ July 15, 2021January 4, 2021 ಆನೆ ಬದುಕಿದ್ದರೂ ಖಜಾನೆ ಸತ್ತರೂ ಖಜಾನೆ; ಅದರ ಮೇಲಿನ ಸವಾರಿಯಂತೂ ತುಂಬಾ ಮಜಾನೆ! *****
ಹನಿಗವನ ಸಂಸಾರ July 1, 2021July 1, 2021 ಸಂಸಾರವೂ ಒಂದರ್ಥದಲ್ಲಿ ಸಮ್ಮಿಶ್ರ ಸರ್ಕಾರವೇ; ಹೊಂದಾಣಿಕೆಯದೇ ಮಂತ್ರ ತಪ್ಪಿದಲ್ಲಿ ದಂಪತಿಗಳು ಅತಂತ್ರ! *****
ಹನಿಗವನ ಬಡವೆ June 24, 2021January 4, 2021 ಅವಳು ಮೈ ತುಂಬಾ ತೊಟ್ಟಿದ್ದಾಳೆ ಒಡವೆ; ನೋಟವೇ ಹೇಳುತ್ತೆ ಅವಳಲ್ಲ ಬಡವೆ! *****
ಹನಿಗವನ ಬಾಳು June 17, 2021January 4, 2021 ಒಂಟಿ ಬಾಳು ಎಡವಟ್ಟು, ಮುಗ್ಗಟ್ಟು; ಜೋಡಿಬಾಳು (ಬಿ) ಬಿಕ್ಕಟ್ಟು ಮತ್ತು (ಇ) ಇಕ್ಕಟ್ಟು! *****
ಹನಿಗವನ ಬತ್ತಿ June 3, 2021January 4, 2021 ಎಣ್ಣೆ ಹೀರುವ ಬತ್ತಿಗೆ ಗೊತ್ತೆ? ತಾನು ಕೊನೆಗೆ ಬತ್ತಲೇಬೇಕೆಂದು? *****
ಹನಿಗವನ ಲಗ್ನ May 27, 2021January 4, 2021 ಕಂಕಣ ಬಲ ಕೂಡಿದರೆ ಸಾಲದು ಲಗ್ನಕ್ಕೆ; ಕಾಂಚಾಣ ಬಲವೂ ಕೂಡಿ ಬರಬೇಕು! *****
ಹನಿಗವನ ಕೊಕ್ಕರೆ May 20, 2021January 4, 2021 ಸ್ಥಿತ ಪ್ರಜ್ಞತೆಗೆ ಮತ್ತೊಂದು ಹೆಸರು ಕೊಕ್ಕರೆ; ಜಾಗ ಬದಲಿಸುವುದೇ ಇಲ್ಲ ಕ್ರಿಮಿಗಳು ಸಿಕ್ಕರೆ! *****