
ಹೀರುತ್ತಿರುವುದು ಇಂಧನವಲ್ಲ ಪ್ರಕೃತಿ ಮಾತೆಯ ರಕ್ತ ಕುಸಿದರೆ ತಾಯಿ ನಮಗಿನ್ನಾರು ಅರಿಯಲು ಆಗೊ ನೀ ಶಕ್ತ ; ಗೆಳೆಯ ಅರಿಯಲು ಆಗೊ ನೀ ಶಕ್ತ || ಪ || ಸಾಲದೆ ಹೊಂಗೆ ಸಾಲದೆ ಬೇವು ಸಾಲದೆ ಹಿಪ್ಪೆ ಸಾಲು ಎಷ್ಟು ಬೇಕೊ ತೈಲವು ನಿನಗೆ ಕಣ್ತೆರೆದಿಂದು ಹೇ...
ಸೆಟ್ಟಾಗುವವರೆಗೆ ಹುಡುಗಿಯ ಹಿಂದೆ ಹುಡುಗ ಸಟ್ಟಾದ ಮೇಲೆ ಹುಡುಗನ ಹಿಂದೆ ಹುಡುಗಿ ಸೆಟ್ಟಾಗುವವರೆಗೆ ಹಲ್ಲು ದಾಳಿಂಬೆ ಕಾಳು ಸೆಟ್ಟಾದ ಮೇಲೆ ಅದೇ ಬಣ್ಣನೆ ಗೋಳು ಸೆಟ್ಟಾಗುವವರೆಗೆ ಮೂಗು ಗಿಳಿಯ ಮೂಗು ಸೆಟ್ಟಾದ ಮೇಲೆ ಮೂಗು ಹಾಗೂ ಹೀಗೂ ಸೆಟ್ಟಾಗುವವರ...
ಸಾವಿರ ಭಾಷೆ ಸಾವಿರ ವೇಷ ನಮ್ಮದು ಭಾರತ ದೇಶ ಸೌಹಾರ್ದದ ಹಾಲ್ಗಡಲಿನ ಒಳಗೆ ಯಾತಕೊ ಕೋಮು ದ್ವೇಷ? || ಪ || ಸ್ವತಂತ್ರ ಭಾರತಕರವತ್ತು ಅಭಿವೃದ್ಧಿಯ ರಥ ಚುರುಕಲ್ಲ ಉಳ್ಳವರಿಗೆ ಆಕಾಶ ಸಲೀಸು ಸರ್ವೋದಯಕೆಡೆ ಇಲ್ಲಿಲ್ಲ ಇದು ಯಾಕೆ ಯಾರಿಗೆ ಶೋಭೆ? ಕಾಣದೆ...
ಸಾಕು ತಾಯಿ, ಹಾಲು ನಿನ್ನ ಎದೆಯ ಹಾಲು ಬೇಡ ಇನ್ನು ರಕ್ತ ನಿನ್ನ ಒಡಲ ರಕ್ತ ನನ್ನ ತಪ್ಪು ನೂರು ನಿನ್ನ ಕೋಪಕಶಕ್ತ ಬಗೆದೆ ನಿನ್ನ ಒಡಲ ಗಣಿಯ ಹೆಸರಿನಲ್ಲಿ ಜೊತೆಗೆ ಕುಡಿದೆ ರಕ್ತ ತೈಲ ರೂಪದಲ್ಲಿ ನಿನ್ನ ಕರುಳ ಸವರಿ ಮಾಡಿದೆ ನಾ ಹೆದ್ದಾರಿ ಇಂಥ ಪಾಪ ...
ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ ಕನ್ನಡ ವಿರೋಧಿ ಸಮರಕ್ಕೆ ಕನ್ನಡಾಂಬೆಯ ಕ್ಷೇಮವ ಕಾಯುತ ಕನ್ನಡರಥ ಮುನ್ನಡೆಸೋಕೆ ಅನ್ನವನುಂಡು ವಿಷವನು ಉಗುಳುವ ನಿರಭಿಮಾನಿಗಳ ಧಿಕ್ಕರಿಸಿ ನಾಡಿನ ಏಳ್ಗೆಗೆ ದೀಕ್ಷೆಯ ತೊಟ್ಟ ಅಭಿಮಾನಿಗಳ ಪುರಸ್ಕರಿಸಿ ನಡೆಯಲಿ ಕನ್ನಡ ...
ಮೇರಾ ಭಾರತ್ ಮಹಾನ್ ಹೈ ಹೇಳಿ ನಮ್ಮಿದಿರು ಯಾರಿಹರು ಸ ಗುಡಿ ಕಟ್ಟಿದವರನ್ನು ಗುಡಿಯಾಚೆಗಿರಿಸಿದ ಕೆರೆ ಕಟ್ಟಿದವರನ್ನು ಕೆರೆ ಮುಟ್ಟಗೊಡದ ಪಾವಿತ್ರ ದ ಚರಿತೆ ಇದು ಅಲ್ಲವೆ ಹೇಳಿ! ಇಂತಹ ಚರಿತೆ ಬೇರೆಲ್ಲಿದೆ ಕೇಳಿ? ತುಳಿದವನ ಜಾತಿಗೆ ಹೆಸರು ಮೇಲ್ಜಾ...
ಮೂಡಿ ಬಂದ ಹೊಸ ವರುಷ ಹೊಸ ಹರುಷ ನೀಡಲಿ ಹಳೆಯದರಲಿ ಒಳಿತನುಳಿಸಿ ಹೊಸ ಗೀತೆ ಹಾಡಲಿ|| ಒಣಗಿ ನಿಂತ ವನರಾಶಿಗೆ ಹಸಿರೋಕುಳಿ ಚೆಲ್ಲಲಿ ಬರಡಾಗಿಹ ಈ ಬುವಿಗೆ ಹನಿಯೆರಡ ಎರೆಯಲಿ ಎಲ್ಲರೆದೆಯ ಹೂದೋಟದಿ ನವ ಕುಸುಮಗಳರಳಿಸಿ ಭ್ರಾತೃತ್ವದ ಸಿರಿಗಂಪನು ದಿಕ್‌ದ...
ಮುನಿಯ ಬೇಡ ಪ್ರಕೃತಿ ಮಾತೆ ಗೊತ್ತು ನಾವು ಕಟುಕರು ಇರಲಿ ಕರುಣೆ ಇನ್ನು ಕೊಂಚ ನಾವು ನಿನ್ನ ಕುವರರು ನೀನು ತಾಯಿ ಪೊರೆದೆ ನಮ್ಮ ಇನಿತು ನೋವು ಆಗದಂತೆ ಇದನು ಅರಿಯದೆ ನಾವು ಬೆಳೆದೆವು ಎಲ್ಲ ಕ್ರೌರ್ಯ ನಾಚುವಂತೆ ಇಂಥ ತಪ್ಪಿಗೆ ಒಂದು ಏಟು ನೀನು ಕೊಟ್...
ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ ಹರಿವುದೇಕೆ? ಹಾಲೂಡಿದ ನೆಲವದೊಂದೆ ಇಲ್ಲಿ ಕದನವೇಕೆ?...
ಮಳೆ ಸುರಿಯಲಿ ಹೊಳೆ ಹರಿಯಲಿ ತಿಳಿಯಾಗಲಿ ಮೋಡ ಧಗಧಗಿಸುವ ಧರೆ ತಣಿಯಲಿ ಮನುಜನೆದೆ ಕೂಡ ಗಿಳಿ ಹಾಡಲಿ ತೆನೆ ತೂಗಲಿ ಕಾಡಾಗಲಿ ಹಸಿರು ಬುಸುಗುಟ್ಟುವ ಜಗದೆದೆಯಲಿ ಹೊಮ್ಮಲಿ ಮೆಲ್ಲುಸಿರು ರವಿ ಏಳಲಿ ಗಿರಿ ಕಾಣಲಿ ಮೂಡಲಿ ಮಳೆಬಿಲ್ಲು ಸೆರೆಯೊಳಗಿನ ಬಣ್ಣಗ...













