
ನೀ ಸಿಗದೆ ಬಾಳೊಂದು ಬಾಳೆ ಕೃಷ್ಣಾ ನಾ ತಾಳಲಾರೆ ಈ ವಿರಹತೃಷ್ಣಾ ಕಮಲವಿಲ್ಲದ ಕೆರೆ ನನ್ನ ಬಾಳು; ಚಂದ್ರ ಇಲ್ಲದ ರಾತ್ರಿ ಬೀಳು ಬೀಳು; ನೀ ಸಿಗದೆ ಉರಿ ಉರಿ ಕಳೆದೆ ಇರುಳ ಮಾತಿಲ್ಲ, ಬಿಗಿದಿದೆ ದುಃಖ ಕೊರಳ ಅನ್ನ ಸೇರದು, ನಿದ್ದೆ ಬಂದುದೆಂದು? ಕುದಿವ...
ಎಲ್ಲಿ ಹೋಗಲೆ, ಹೇಗೆ ಕಾಣಲೆ ನನ್ನ ಗಿರಿಧರನ? ನನ್ನ ಬೀಡಿಗೆ ತಾನೆ ಬಂದು ಕಾದು ನಿಂತವನ ಹೇಗೆ ಕಾಣದೆ ಹೋದೆನೇ, ಹೇಗೆ ತರಲವನ? ಈಗ ದಿನವೂ ದಾರಿಬದಿಗೇ ನಿಂತು ಕಾಯುವೆನೇ, ಮತ್ತೆ ಬಾರನೆ ಸ್ವಾಮಿ ಎಂದು ಹಲುವೆ ನೋಯುವೆನೇ ತಾನೆ ಒಪ್ಪಿ ಬಂದ ಗಳಿಗೆ ಹೇ...
ತೊರೆದು ಹೋಗದಿರೊ ಜೋಗಿ ಅಡಿಗೆರಗಿದ ಈ ದೀನಳ ಮರೆತು ಸಾಗುವ ಏಕೆ ವಿರಾಗಿ? ಪ್ರೇಮ ಹೋಮದ ಪರಿಮಳ ಪಥದಲಿ ಸಲಿಸು ದೀಕ್ಷಯೆನಗೆ; ನಿನ್ನ ವಿರಹದಲೆ ಉರಿದು ಹೋಗಲೂ ಸಿದ್ಧಳಿರುವ ನನಗೆ. ಹೂಡುವೆ ಗಂಧದ ಚಿತೆಯ ನಡುವ ನಿಲುವ ನಾನೇ; ಉರಿ ಸೋಂಕಿಸು ಪ್ರಭುವೇ ...













