
ಸಾವಯವವೆಂದರದು ಸಾಯುವ ಕೃಷಿಯಂ ದವಸರದೊಳೊಬ್ಬರಬ್ಬರಿಸಿದರಂದು. ನಾ ಸಾವರಿಸಿ ಆಲೋಚಿಸಿದೊಡಲ್ಲಿ ತಿಳಿಯಿತ ದುವೆ ಸರಿಯೆಂದು, ಜೀವ ನಿಯಮವೆ ಹುಟ್ಟು ಸಾವಿನೊಳಿರಲು ಸಾವಿರದಾ ನಿರವಯವ ತಪ್ಪೆಂದು – ವಿಜ್ಞಾನೇಶ್ವರಾ *****...
ದುಡಿಮೆಯೊಳನ್ನದೊಡಗೂಡಿ ಜ್ಞಾನವಿರುತಿರಲು ಗಾಡಿ ಪುಸ್ತಕಗಳದ್ಯಾಕೋ ಮಾಡಿ ಕಲಿಯದ ಮೇಲೆ ಕುಡಿದುಣದೆ ಬರಿದು ಟಾನಿಕ್ಕುಗಳಿಂದೇನಹುದು? ಬಡತನದೊಳತಿ ಬಡತನವಜೀರ್ಣದೊಡಲು ಮೌಢ್ಯದೊಳತಿ ಮೌಢ್ಯ ದುಡಿಯದುಂಬೊಲವು – ವಿಜ್ಞಾನೇಶ್ವರಾ *****...
ದೇಹ ಶಕ್ತಿಗೂಟದೊಳು ಹಿತಮಿತವೆ ಮೊದಲು ದೋಷವದು ಟಾನಿಕ್ಕು ಅದಕೆ ಬದಲು ಧರಣಿಯೊಲವಿಗೆ ದೇಹ ದುಡಿತವೆ ಮೊದಲು ದುಡಿದನುಭವಕೆ ಪುಸ್ತಕವಲ್ಲ ಬದಲು ದುಡಿತದೊಳನ್ನ ಜ್ಞಾನಗಳೊಂದಾಗಲೆಲ್ಲ ಚೆಲುವು – ವಿಜ್ಞಾನೇಶ್ವರಾ *****...
ಸಾವಯವವೆಂದೊಡದು ಸಂಗೀತದಂತೆ ಸತ್ತ್ವದೊಳೊಂದೆ. ಮೊದಲಕ್ಷರವು ಸಾಕಾರವಾದಂತೆ ಸೌಂದರ್‍ಯಕ್ಕುಂ, ಸ್ವರ್ಗಕ್ಕುಂ ಸಾವಯವ ಸಂಯಮವು ಸಾನುರಾಗದ ಸೊಪಾನಗಳದರೊಳೇರಿದೊಡೆ ಸ್ವಾವಲಂಬೀ, ಮತ್ತಿಳಿದೊಡದು ಸ್ವದೇಶೀ – ವಿಜ್ಞಾನೇಶ್ವರಾ *****...













